For Quick Alerts
  ALLOW NOTIFICATIONS  
  For Daily Alerts

  ಶ್ರೀಗಳ ಅಂತಿಮ ದರ್ಶನ ಪಡೆದ ಪುನೀತ್: ಯಶ್, ಸುದೀಪ್, ಉಪ್ಪಿ ಸಂತಾಪ

  |

  ತುಮಕೂರಿನ ಸಿದ್ಧಗಂಗಾ ಮಠದ ಶ್ರೀಗಳು, ನಡೆದಾಡುವ ದೇವರು ಶಿವಕುಮಾರ ಸ್ವಾಮೀಜಿ ಅವರು ಇಂದು ಬೆಳಗ್ಗೆ ದೈವಧೀನರಾದರು. ಈ ಸುದ್ದಿ ಕೇಳಿ ಸಾವಿವಾರು ಸಂಖ್ಯೆಯ ಭಕ್ತರು ಕಣ್ಣೀರಾಕಿದ್ದಾರೆ.

  ಕನ್ನಡ ನಟ ಪುನೀತ್ ರಾಜ್ ಕುಮಾರ್ ಅವರು ಖುದ್ದು ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿ ಶಿವಕುಮಾರ ಸ್ವಾಮೀಜಿಯ ಅಂತಿಮ ದರ್ಶನ ಪಡೆದುಕೊಂಡರು.

  ಸಿದ್ದಗಂಗಾ ಶ್ರೀಗಳ ನಿಧನಕ್ಕೆ ಸಂತಾಪ ಸೂಚಿಸಿದ ಚಿತ್ರರಂಗದ ಗಣ್ಯರು

  ಅಭಿನವ ಬಸವಣ್ಣನ ಅಗಲಿಕೆಗೆ ಕನ್ನಡ ಚಿತ್ರರಂಗ ಸಂತಾಪ ಸೂಚಿಸಿದ್ದು, ನಾಳೆ ಸ್ಯಾಂಡಲ್ ವುಡ್ ಬಂದ್ ಮಾಡಲು ನಿರ್ಧರಿಸಿದ್ದಾರೆ. ಇನ್ನು ಟ್ವಿಟ್ಟರ್ ನಲ್ಲಿ ಅನೇಕ ಕಲಾವಿದರು ಶ್ರೀಗಳ ಆತ್ಮಕ್ಕೆ ಶಾಂತಿ ಕೋರಿದ್ದಾರೆ. ಯಾರು ಯಾರು ಎಂದು ತಿಳಿಯಲು ಮುಂದೆ ಓದಿ....

  ಹೋಗಿ ಬನ್ನಿ ಬುದ್ಧಿ..ಮತ್ತೆ ಬನ್ನಿ

  ಶಿವಕುಮಾರ ಸ್ವಾಮೀಜಿಗಳ ಅಗಲಿಕೆಗೆ ನಟ ಯಶ್ ಸಂತಾಪ ಸೂಚಿಸಿದ್ದಾರೆ. ''ಬೇಡುವ ಕೈಗಳಿಗಿಂತ, ದುಡಿಯುವ ಕೈಗಳು ಮೇಲು ಎಂಬುದನ್ನು ತೋರಿಸಿಕೊಟ್ಟು ಒಬ್ಬ ಮನುಷ್ಯ ಹೇಗೆ ಸಾರ್ಥಕ್ಯವಾಗಿ ಬದುಕಬೇಕೆಂಬುದಕ್ಕೆ ಜೀವಂತ ನಿದರ್ಶನವಾದವರು ತ್ರಿವಿಧ ದಾಸೋಹಿ ಡಾ. ಶ್ರೀ ಶ್ರೀ ಶ್ರೀ ಶಿವಕುಮಾರಸ್ವಾಮೀಜಿಗಳು. ನಡೆದಾಡುವ ದೇವರು ಕಾಣದ ದೇವರೊಂದಿಗೆ ಐಕ್ಯರಾಗಿದ್ದಾರೆ. ಹೋಗಿ ಬನ್ನಿ ಬುದ್ಧಿ..ಮತ್ತೆ ಬನ್ನಿ'' ಎಂದು ಟ್ವೀಟ್ ಮಾಡಿದ್ದಾರೆ.

  ಶಿವಕುಮಾರ ಸ್ವಾಮೀಜಿಗಳು ಸಿದ್ದಗಂಗಾ ಮಠಾಧೀಶರಾಗಿದ್ದು ಒಂದು ವಿಸ್ಮಯ

  ಮತ್ತೆ ಇದೇ ನಮ್ಮ ಪುಣ್ಯ ಭೂಮಿಯಲ್ಲಿ ಹುಟ್ಟಿ ಬನ್ನಿ

  ಸಿದ್ಧಗಂಗಾ ಸ್ವಾಮೀಜಿಗಳ ನಿಧನಕ್ಕೆ ಕಂಬನಿ ಮಿಡಿದ ನಟ ಉಪೇಂದ್ರ, ಮತ್ತೆ ಇದೇ ಪುಣ್ಯಭೂಮಿಯಲ್ಲಿ ಹುಟ್ಟಿ ಬನ್ನಿ'' ಎಂದು ಮನವಿ ಮಾಡಿದ್ದಾರೆ.

  ಹುಟ್ಟಿದ ಊರಿನಿಂದ 25 ವರ್ಷ ದೂರವಿದ್ದ ಸಿದ್ದಗಂಗಾ ಸ್ವಾಮೀಜಿ

  ಕಿಚ್ಚ ಸುದೀಪ್ ಸಂತಾಪ

  ನಟ ಕಿಚ್ಚ ಸುದೀಪ್ ಅವರು ಕೂಡ ಶಿವಕುಮಾರ ಸ್ವಾಮೀಜಿಗಳ ಅಗಲಿಕೆಗೆ ಸಂತಾಪ ಸೂಚಿಸಿದ್ದು, ''ತ್ರಿವಿಧ ದಾಸೋಹಿ ಶತಮಾನದ ಯುಗಪುರುಷ ಶ್ರೀ ಶಿವಕುಮಾರ ಸ್ವಾಮಿಗಳು ಇಂದು ಇಹಲೋಕ ತ್ಯಜಿಸಿದ್ದಾರೆ,ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಭಗವಂತ ನಲ್ಲಿ ಪ್ರಾರ್ಥಿಸೋಣ..'' ಎಂದಿದ್ದಾರೆ.

  ಸಿದ್ಧಗಂಗಾ ಶ್ರೀಗಳ ಸಾರ್ಥಕ ಬದುಕು ನಮ್ಮೆಲ್ಲರಿಗೂ ಆದರ್ಶ

  ನಡೆದಾಡುವ ದೇವರನ್ನ ಕಳೆದುಕೊಂಡು ನಾಡಿನ ಜನ ಶೋಕಸಾಗರದಲ್ಲಿ ಮುಳುಗಿದ್ದಾರೆ. ಇದೇ ದುಃಖದಲ್ಲಿರುವ ನಟ ಪ್ರಥಮ್ ಕೂಡ ಸಂತಾಪ ಸೂಚಿಸಿದ್ದು. ''ಇಹಲೋಕ ಯಾತ್ರೆ ಮುಗಿಸಿ,ಪರಲೋಕಕ್ಕೆ ಹೊರಟ ದೇವರು!!! ಸಿದ್ಧಗಂಗಾ ಶ್ರೀಗಳ ಸಾರ್ಥಕ ಬದುಕು ನಮ್ಮೆಲ್ಲರಿಗೂ ಆದರ್ಶ'' ಎಂದಿದ್ದಾರೆ.

  ಸ್ವಾಮೀಜಿಯ ಆತ್ಮಕ್ಕೆ ಶಾಂತಿ ಸಿಗಲಿ

  ನಟಿ ರಶ್ಮಿಕಾ ಮಂದಣ್ಣ ಅವರು ಟ್ವಿಟ್ಟರ್ ನಲ್ಲಿ ಸಂತಾಪ ಸೂಚಿಸಿದ್ದು, ಸ್ವಾಮೀಜಿಯ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಕಂಬನಿ ಮಿಡಿದಿದ್ದಾರೆ.

  English summary
  Kannada actor Punneeth rajkumar, yash, upendra, sudeep expressed condolence to shivakumara swamiji death.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X