For Quick Alerts
  ALLOW NOTIFICATIONS  
  For Daily Alerts

  ಡಾ.ರಾಜ್ ಜೊತೆ ದಿಲೀಪ್ ಕುಮಾರ್; ಅಪರೂಪದ ಫೋಟೋ ಶೇರ್ ಮಾಡಿ ಪುನೀತ್ ಸಂತಾಪ

  |

  ಬಾಲಿವುಡ್‌ನ ಖ್ಯಾತ ನಟ, ಟ್ರ್ಯಾಜಿಡಿ ಕಿಂಗ್ ಎಂದೇ ಪ್ರಸಿದ್ಧಿ ಪಡೆದಿದ್ದ ನಟ ದಿಲೀಪ್ ಇನ್ನು ನೆನಪು ಮಾತ್ರ. ಇಂದು (ಜುಲೈ 7) ಬೆಳಗ್ಗೆ ಮುಂಬೈ ಹಿಂದೂಜಾ ಆಸ್ಪತ್ರೆಯಲ್ಲಿ ದಿಲೀಪ್ ಕುಮಾರ್ ನಿಧನರಾದರು. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ನಟ ದಿಲೀಪ್ ಪದೇ ಪದೇ ಆಸ್ಪತ್ರೆಗೆ ದಾಖಲಾಗುತ್ತಿದ್ದು. ಇಂದು ಚಿಕಿತ್ಸೆ ಫಲಕಾರಿಯಾಗದೆ ದಿಲೀಪ್ ಕುಮಾರ್ ಕೊನೆಯುಸಿರೆಳೆದರು.

  ಪ್ರಸಿದ್ಧ ನಟನ ನಿಧನಕ್ಕೆ ಇಡೀ ಬಾಲಿವುಡ್ ಕಂಬನಿ ಮಿಡಿದಿದೆ. 'ದುರಂತ ನಾಯಕ' ಎಂದೇ ಖ್ಯಾತಿ ಗಳಿಸಿಕೊಂಡಿರುವ ದಿಲೀಪ್ ಕುಮಾರ್‌ಗೆ ಅಗಲಿಕೆಗೆ ಬಾಲಿವುಡ್ ಮಾತ್ರವಲ್ಲದೆ ದಕ್ಷಿಣ ಚಿತ್ರರಂಗದ ಪ್ರಮುಖರು ಸಂತಾಪ ಸೂಚಿಸಿದ್ದಾರೆ. ಕನ್ನಡದ ನಟ ಪವರ್ ಸ್ಟಾರ್ ಪುನೀತ್ ರಾಜ್ ರಾಜ್ ಕೂಡ ಸಾಮಾಜಿಕ ಜಾಲತಾಣದಲ್ಲಿ ಸಂತಾಪ ಸೂಚಿಸಿದ್ದಾರೆ.

  ದಿಗ್ಗಜ ನಟ ದಿಲೀಪ್ ಕುಮಾರ್ ಅಗಲಿಕೆಗೆ ಸಂತಾಪ ಸೂಚಿಸಿದ ಸಿನಿತಾರೆಯರುದಿಗ್ಗಜ ನಟ ದಿಲೀಪ್ ಕುಮಾರ್ ಅಗಲಿಕೆಗೆ ಸಂತಾಪ ಸೂಚಿಸಿದ ಸಿನಿತಾರೆಯರು

  ಡಾ.ರಾಜ್ ಕುಮಾರ್ ಮತ್ತು ದಿಲೀಪ್ ಕುಮಾರ್ ಇಬ್ಬರೂ ಒಟ್ಟಿಗೆ ಇರುವ ಅಪರೂಪದ ಫೋಟೋವನ್ನು ಪುನೀತ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. "ಎರಡು ವಿಶೇಷ ಸಂದರ್ಭದಲ್ಲಿ ಅವರನ್ನು ಭೇಟಿ ಮಾಡುವ ಅವಕಾಶ ಸಿಕ್ಕಿದ್ದು ನನ್ನ ಪುಣ್ಯ. ಅಪ್ಪಾಜಿ ಮತ್ತು ದಿಲೀಪ್ ಕುಮಾರ್ ಇಬ್ಬರೂ ಪರಸ್ಪರ ಆತ್ಮೀಯರಾಗಿದ್ದರು. ಅಪ್ಪಾಜಿ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಸ್ವೀಕರಿಸುವ ಸಂದರ್ಭದಲ್ಲಿ ಅವರನ್ನು ಭೇಟಿಯಾಗಿದ್ದು ನನಗೆ ನೆನಪಿದೆ. ಭಾರತೀಯ ಸಿನಿಮಾರಂಗಕ್ಕೆ ದೊಡ್ಡ ಕೊಡುಗೆ ನೀಡಿದ್ದಾರೆ" ಎಂದು ಬರೆದುಕೊಂಡಿದ್ದಾರೆ.

  ನಿಖಿಲ್ ದಂಪತಿಗೆ ಹುಟ್ಟೋ ಮಗುವಿನ ಬಗ್ಗೆ ಭವಿಷ್ಯ ನುಡಿದ ವಿನಯ್ ಗುರೂಜಿ | Filmibeat Kannada

  ಇನ್ನು ಕಿಚ್ಚ ಸುದೀಪ್ ಕೂಡ ಸಾಮಾಜಿಕ ಜಾಲತಾಣದಲ್ಲಿ ಸಂತಾಪ ಸೂಚಿಸಿದ್ದಾರೆ. ''ಸಾರ್ವಕಾಲಿಕ ಶ್ರೇಷ್ಠ ನಟ, ಅದ್ಭುತ ವಾಗ್ಮಿ ಮತ್ತು ಸರಳತೆಯ ಸಾಮ್ರಾಟ್ ಎಂದು ಜಗತ್ತು ದಿಲೀಪ್ ಕುಮಾರ್‌ರನ್ನು ಶ್ಲಾಘಿಸಿತ್ತು. ಅನೇಕ ತಲೆಮಾರಿಗೆ ಅವರು ಸ್ಫೂರ್ತಿಯಾಗಿ ಉಳಿಯಲಿದ್ದಾರೆ. ಲೆಜೆಂಡ್‌ಗಳು ಶಾಶ್ವತವಾಗಿ ಇರ್ತಾರೆ'' ಎಂದು ಕಿಚ್ಚ ಸುದೀಪ್ ಟ್ವೀಟ್ ಮಾಡಿದ್ದಾರೆ.

  English summary
  Kannada Actor Puneeth Rajkumar condolences to veteran actor Deepak Kumar demise.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X