Just In
Don't Miss!
- News
ರೈತರ ಕಲ್ಯಾಣಕ್ಕಾಗಿ ಅರ್ಪಿಸಿಕೊಂಡವರು: ಜನ್ಮದಿನದಂದು ಯಡಿಯೂರಪ್ಪಗೆ ಮೋದಿ ಶುಭಾಶಯ
- Finance
3 ದಿನಗಳ ವಿರಾಮದ ಬಳಿಕ ಪೆಟ್ರೋಲ್, ಡೀಸೆಲ್ ದರ ಮತ್ತಷ್ಟು ಹೆಚ್ಚಳ: ಬೆಂಗಳೂರಿನಲ್ಲಿ 94 ರೂ. ಗಡಿ ದಾಟಿದೆ
- Sports
ಮೊಟೆರಾ ಪಿಚ್ ಬಗ್ಗೆ ವಿರಾಟ್ ಕೊಹ್ಲಿ ಹೇಳಿಕೆಗೆ ಅಲಾಸ್ಟೇರ್ ಕುಕ್ ಕಿಡಿ
- Automobiles
ಮಾರ್ಚ್ 3ರಿಂದ ಕಿಗರ್ ಕಂಪ್ಯಾಕ್ಟ್ ಎಸ್ಯುವಿ ಕಾರಿನ ವಿತರಣೆಗೆ ಸಜ್ಜಾದ ರೆನಾಲ್ಟ್
- Lifestyle
ಶನಿವಾರದ ಭವಿಷ್ಯ ಹೇಗಿದೆ ನೋಡಿ
- Education
RBI Grade B Admit Card 2021: ಪ್ರವೇಶ ಪತ್ರ ಡೌನ್ಲೋಡ್ ಮಾಡುವುದು ಹೇಗೆ ?
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಪ್ರೇಮ ಕಾಶ್ಮೀರದಲ್ಲಿ ಪವರ್ ಸ್ಟಾರ್ ಪುನೀತ್: 'ಜೇಮ್ಸ್' ಚಿತ್ರೀಕರಣದ ಫೋಟೋ ವೈರಲ್
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ 'ಯುವರತ್ನ' ಸಿನಿಮಾದ ಬಿಡುಗಡೆಗಾಗಿ ಎದುರುನೋಡುತ್ತಿದ್ದಾರೆ. ಅಭಿಮಾನಿಗಳು ಸಹ ಕಾತರದಿಂದ ಕಾಯುತ್ತಿದ್ದಾರೆ. ಯುವರತ್ನ ಪ್ರಮೋಷನ್ ನಡುವೆಯೂ ಪವರ್ ಸ್ಟಾರ್ ಜೇಮ್ಸ್ ಸಿನಿಮಾದ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ. ಚೇತನ್ ಕುಮಾರ್ ಸಾರಥ್ಯದಲ್ಲಿ ಮೂಡಿ ಬರುತ್ತಿರುವ ಜೇಮ್ಸ್ ಸಿನಿಮಾದ ಚಿತ್ರೀಕರಣ ಭರ್ಜರಿಯಾಗಿ ನಡೆಯುತ್ತಿದ್ದು, ಚಿತ್ರತಂಡ ಕಾಶ್ಮೀರದಲ್ಲಿ ಬೀಡುಬಿಟ್ಟಿದೆ.
ಇತ್ತೀಚಿಗಷ್ಟೆ ಕಾಶ್ಮೀರ ಕಡೆ ಹೊರಟಿರುವ ಪವರ್ ಸ್ಟಾರ್ ಮತ್ತು ತಂಡ ಜೇಮ್ಸ್ ಸಿನಿಮಾದ ಪ್ರಮುಖ ದೃಶ್ಯಗಳನ್ನು ಸೆರೆಹಿಡಿಯುವಲ್ಲಿ ಬ್ಯುಸಿಯಾಗಿದ್ದಾರೆ. ಕೊರೆಯುವ ಚಳಿಯಲ್ಲಿ ಚಿತ್ರೀಕರಣ ಮಾಡುತ್ತಿರುವ ಸಿನಿಮಾತಂಡ ಒಂದಿಷ್ಟು ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಮುಂದೆ ಓದಿ...
ಪುನೀತ್ ರಾಜ್ಕುಮಾರ್ ಜೊತೆ ಕೈಜೋಡಿಸಲಿದ್ದಾರೆ ದಿನಕರ್ ತೂಗುದೀಪ್?

ಕಾಶ್ಮೀರದಲ್ಲಿ ಕನ್ನಡದ 'ಜೇಮ್ಸ್'
ಜೇಮ್ಸ್ ಚಿತ್ರೀಕರಣ ನಡುವೆಯೂ ಪವರ್ ಸ್ಟಾರ್ ಕಾಶ್ಮೀರದ ಜನರನ್ನು ಮಾತನಾಡಿಸುತ್ತಿರುವ ಫೋಟೋ ಅಭಿಮಾನಿಗಳ ಗಮನಸೆಳೆಯುತ್ತಿದೆ. ಇನ್ನು ಪುಟ್ಟ ಮಗುವಿನ ಜೊತೆ ಅಪ್ಪು ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಿರುವ ಫೋಟೋ ಸಹ ಅಭಿಮಾನಿಗಳ ಮನಗೆದ್ದಿದೆ. ಪವರ್ ಸ್ಟಾರ್ ಜೊತೆ ರಂಗಾಯಣ ರಘು ಕೂಡ ಕ್ಯಾಮರಾಗೆ ಪೋಸ್ ನೀಡಿದ್ದಾರೆ.

ಹಾಡು ಮತ್ತು ಆಕ್ಷನ್ ದೃಶ್ಯ ಚಿತ್ರೀಕರಣ
ಅಂದಹಾಗೆ ಕಾಶ್ಮೀರದ ರಮಣೀಯ ಸ್ಥಳದಲ್ಲಿ ಚಿತ್ರದ ಪ್ರಮುಖ ಹಾಡಿನ ಚಿತ್ರೀಕರಣ ಮಾಡಲಾಗುತ್ತಿದೆ. ಹಾಡಿನ ಜೊತೆಗೆ ಆಕ್ಷನ್ ದೃಶ್ಯ ಕೂಡ ಸೆರೆಹಿಡಿಯಲಾಗುತ್ತಿದೆ. ಹಾಡಿಗೆ ನಿರ್ದೇಶಕ ಎ ಹರ್ಷ ನೃತ್ಯ ನಿರ್ದೇಶನ ಮಾಡುತ್ತಿದ್ದಾರೆ. ಸಾಹಸ ದೃಶ್ಯಗಳು ವಿಜಯ್ ಅವರ ಸಾರಥ್ಯದಲ್ಲಿ ಮೂಡಿಬರುತ್ತಿದೆ.
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿಮಾನಿಗಳಿಗೆ ಬೇಸರದ ಸುದ್ದಿ: ಏನದು?

ಉತ್ತರ ಕಾರ್ನಟಕದಲ್ಲಿ ಚಿತ್ರೀಕರಣ ಮಾಡಿದ್ದ ಸಿನಿಮಾತಂಡ
ಅಂದಹಾಗೆ ಜೇಮ್ಸ್ ಸಿನಿಮಾದ ಬಹುತೇಕ ಚಿತ್ರೀಕರಣ ಉತ್ತರ ಕರ್ನಾಟಕ ಭಾಗದಲ್ಲಿ ನಡೆದಿದೆ. ಉತ್ತರ ಕರ್ನಾಟಕದ ಚಿತ್ರೀಕರಣ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಉತ್ತರ ಕರ್ನಾಟಕ ಚಿತ್ರೀಕರಣ ಬಳಿಕ ಕಾಶ್ಮೀರ ಕಡೆ ಪಯಣ ಬೆಳೆಸಿದ್ದಾರೆ.

ಪ್ರಿಯಾ ಆನಂದ್ ನಾಯಕಿ
ಚೇತನ್ ಕುಮಾರ್ ನಿರ್ದೇಶಿಸುತ್ತಿರುವ ಜೇಮ್ಸ್ ಚಿತ್ರದಲ್ಲಿ ಪ್ರಿಯಾ ಆನಂದ್ ನಾಯಕಿಯಾಗಿದ್ದಾರೆ. ಪ್ರಿಯಾ ಎರಡನೇ ಬಾರಿ ಪವರ್ ಸ್ಟಾರ್ ಜೊತೆ ತೆರೆಹಂಚಿಕೊಳ್ಳುತ್ತಿದ್ದಾರೆ. ಇನ್ನು ನಟಿ ಅನು ಪ್ರಭಾಕರ್ ಹಾಗೂ ತೆಲುಗು ನಟ ಶ್ರೀಕಾಂತ್ ಕೂಡ ಪ್ರಮುಖ ಪಾತ್ರದಲ್ಲಿ ಬಣ್ಣ ಹಚ್ಚುತ್ತಿದ್ದಾರೆ.