twitter
    For Quick Alerts
    ALLOW NOTIFICATIONS  
    For Daily Alerts

    'ಗಣೇಶ'ನ ಮುಂದೆ ಟಪ್ಪಾಂಗುಚ್ಚಿ ಸ್ಟೆಪ್ ಹಾಕಿದ ಅಪ್ಪು-ರಾಘಣ್ಣ

    |

    Recommended Video

    ಗಣೇಶ ಉತ್ಸವದಲ್ಲಿ ಕುಣಿದು ಕುಪ್ಪಳಿಸಿದ ಪುನೀತ್ ರಾಜ್ ಕುಮಾರ್ ರಾಘವೇಂದ್ರ ರಾಜ್ ಕುಮಾರ್ | Filmibeat Kannada

    ದೇಶಾದ್ಯಂತ ಗಣೇಶ ಹಬ್ಬವನ್ನ ಅದ್ಧೂರಿಯಾಗಿ ಆಚರಿಸಲಾಗುತ್ತಿದೆ. ಸಿನಿಮಾ ತಾರೆಯರು ಕೂಡ ಈ ಸಂಭ್ರಮದಿಂದ ಹೊರತಾಗಿಲ್ಲ. ರಿಯಲ್ ಸ್ಟಾರ್ ಉಪೇಂದ್ರ, ನಟಿ ಮೇಘನಾ ರಾಜ್, ಜೋಗಿ ಪ್ರೇಮ್ ಹೀಗೆ ಸ್ಯಾಂಡಲ್ ವುಡ್ ನ ಸ್ಟಾರ್ ಕಲಾವಿದರು ಮನೆಯಲ್ಲಿ ಗಣೇಶನ ಕೂರಿಸಿ ಹಬ್ಬವನ್ನ ಸೆಲೆಬ್ರೇಟ್ ಮಾಡಿದ್ದಾರೆ.

    ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಗಣೇಶನ ಉತ್ಸವವನ್ನು ಮತ್ತಷ್ಟು ವಿಭಿನ್ನವಾಗಿ ಆಚರಣೆ ಮಾಡಿದ್ದಾರೆ. ಹೌದು, ಸದಾಶಿವನಗರದಲ್ಲಿ ಕೂರಿಸಲಾಗಿದ್ದ ಗಣೇಶನ ಎದುರು ಅಪ್ಪು ತಮಟೆ ವಾದ್ಯಕ್ಕೆ ಟಪ್ಪಾಂಗುಚ್ಚಿ ಡ್ಯಾನ್ಸ್ ಮಾಡಿ ಗಮನ ಸೆಳೆದಿದ್ದಾರೆ.

    puneeth rajkumar dance in ganesh festival

    'ನಟ ಸಾರ್ವಭೌಮ'ನ ಹಾಡಿಗೆ ವಿಜಯ ಪ್ರಕಾಶ್, ಶ್ರೇಯಾ ಘೋಷಲ್ ಧ್ವನಿ'ನಟ ಸಾರ್ವಭೌಮ'ನ ಹಾಡಿಗೆ ವಿಜಯ ಪ್ರಕಾಶ್, ಶ್ರೇಯಾ ಘೋಷಲ್ ಧ್ವನಿ

    ಸದಾಶಿವನಗರ ಫ್ರೆಂಡ್ಸ್ ಅಸೋಸಿಯೇಶನ್ ಹುಡುಗರು ಸೇರಿ ಗಣೇಶನನ್ನ ಕೂರಿಸಿದ್ದಾರೆ. ನಿನ್ನೆ ರಾತ್ರಿ ಗಣೇಶ ವಿಸರ್ಜನೆ ವೇಳೆ ದೊಡ್ಮನೆ ಹುಡುಗನನ್ನ ಆಹ್ವಾನಿಸಲಾಗಿದೆ. ಪೂಜೆಗೆ ಬಂದ ಅಪ್ಪು, ಸ್ನೇಹಿತರ ಜೊತೆಯಲ್ಲಿ ಭರ್ಜರಿ ಡ್ಯಾನ್ಸ್ ಮಾಡಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

    ಮತ್ತೊಂದು ರಿಯಾಲಿಟಿ ಶೋಗೆ ಸಜ್ಜಾದ ಪುನೀತ್ ರಾಜ್ ಕುಮಾರ್ಮತ್ತೊಂದು ರಿಯಾಲಿಟಿ ಶೋಗೆ ಸಜ್ಜಾದ ಪುನೀತ್ ರಾಜ್ ಕುಮಾರ್

    ಇನ್ನು ಪುನೀತ್ ರಾಜ್ ಕುಮಾರ್ ಅವರ ಜೊತೆಯಲ್ಲಿ ಸಹೋದರ ರಾಘವೇಂದ್ರ ರಾಜ್ ಕುಮಾರ್ ಅವರು ಹೆಜ್ಜೆ ಹಾಕಿದ್ದು ಮತ್ತಷ್ಟು ವಿಶೇಷವಾಗಿತ್ತು. ಅಣ್ಣ-ತಮ್ಮ ಇಬ್ಬರು ತಮಟೆ ವಾದ್ಯಕ್ಕೆ ಕುಣಿದು ಕುಪ್ಪಳಿಸಿದ್ದಾರೆ.

    ಇನ್ನುಳಿದಂತೆ ಪವನ್ ಒಡೆಯರ್ ನಿರ್ದೇಶನದ 'ನಟಸಾರ್ವಭೌಮ' ಚಿತ್ರದಲ್ಲಿ ಪವರ್ ಸ್ಟಾರ್ ನಟಿಸುತ್ತಿದ್ದಾರೆ. 'ಅಮ್ಮನ ಮನೆ' ಎಂಬ ಸಿನಿಮಾದಲ್ಲಿ ರಾಘವೇಂದ್ರ ರಾಜ್ ಕುಮಾರ್ ನಾಯಕನಾಗಿ ಅಭಿನಯಿಸುತ್ತಿದ್ದಾರೆ.

    English summary
    Puneeth Rajkumar and Raghavendra Rajkumar Dance in Sadashivanagar Ganesha Habba Celebration 2018.
    Monday, August 26, 2019, 17:38
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X