ನೋವಿನ ನಡುವೆಯೂ ಪರೀಕ್ಷೆ ಬರೆಯಲು ಹೊರಟ ಪುನೀತ್‌ ಪುತ್ರಿ ವಂದಿತಾ

ಇಂದು ನಟ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ 11ನೇ ದಿನದ ಪುಣ್ಯ ಸ್ಮರಣೆ. ಆದರೆ ಇಂದೇ ಅವರ ಎರಡನೆಯ ಮಗಳು ವಂದಿತಾ 10ನೇ ತರಗತಿಯ ಪರೀಕ್ಷೆ ಬರೆಯಬೇಕಾಗಿದೆ. ಮತ್ತು ಅಪಾರ ನೋವಿನ ನಡುವೆಯೂ ಅಪ್ಪನ ಆಸೆಯಂತೆ ಪರೀಕ್ಷೆ ಬರೆಯಲು ಮುಂದಾಗಿದ್ದಾಳೆ. ಅಭಿಮಾನಿಗಳ ಆರಾಧ್ಯ ದೈವ ಪುನೀತ್ ರಾಜಕುಮಾರ್ ಎಲ್ಲರನ್ನು ಅಗಲಿ ಇಂದಿಗೆ ಹನ್ನೊಂದು ದಿನ. ಹೀಗಾಗಿ ಇಂದು ಅಪ್ಪು ಕುಟುಂಬಸ್ಥರು 11ನೇ ದಿನದ ಕಾರ್ಯವನ್ನು ಹಮ್ಮಿ ಕೊಂಡಿದ್ದಾರೆ. ಆದರೆ ಅಪ್ಪು ಜೊತೆಗಿಲ್ಲ ಎಂಬ ನೋವಿನಲ್ಲೂ ಮಗಳು ವಂದಿತಾ ಪರೀಕ್ಷೆ ಬರೆಯುವಂತಹ ಸ್ಥಿತಿ ಎದುರಾಗಿದೆ.

ಬೆಂಗಳೂರಿನ ಪ್ಯಾಲೇಸ್ ರಸ್ತೆಯಲ್ಲಿ ಇರುವ ಸೋಫಿಯಾ ಶಾಲೆಯಲ್ಲಿ ಐಸಿಎಸ್‌ಸಿ 10ನೇ ತರಗತಿಯಲ್ಲಿ ಓದುತ್ತಿದ್ದಾಳೆ. ಮುಂದಿನ ವಾರದಲ್ಲಿ 10ನೇ ತರಗತಿ ಅತ್ಯಂತ ಸೆಮಿಸ್ಟರ್ ಪರೀಕ್ಷೆ ಇದೆ. ಇದೇ ಹಿನ್ನೆಲೆ ಇಂದಿನಿಂದ ಪೂರ್ವ ತಯಾರಿ ಪರೀಕ್ಷೆಗಳು ಆರಂಭ ಆಗಿವೆ. ಮನಸ್ಸಿನಲ್ಲಿ ಸಾಕಷ್ಟು ನೋವಿದ್ದರೂ ಕೂಡ ಅಪ್ಪನ ಅಗಲಿಕೆಯಿಂದ ನೋವಿನಲ್ಲಿ ಮಗಳು ವಂದಿತಾ ಮುಳುಗೆದ್ದರು ಕೂಡ ಸದ್ಯ ಪರೀಕ್ಷೆ ಬರೆಯುಲು ಮುಂದಾಗಿದ್ದಾರೆ. ಅಪ್ಪ ಇಲ್ಲ ಎನ್ನುವ ನೋವಿನ ಜೊತೆಗೆ ಅಪ್ಪನ ಆಸೆಯನ್ನು ಈಡೇರಿಸುವ ಜವಾಬ್ದಾರಿ ಕೂಡ ಮಕ್ಕಳ ಮೇಲೆ ಇದೆ. ಹಾಗಾಗಿ ಪುನೀತ್ ಪುತ್ರಿ ವಂದಿತಾ ಪರೀಕ್ಷೆ ಬರೆಯುತ್ತಿದ್ದಾಳೆ.

ಪುನೀತ್ ರಾಜಕುಮಾರ್ ಮಕ್ಕಳ ಶಿಕ್ಷಣದ ಬಗ್ಗೆ ಹೆಚ್ಚು ಆಸಕ್ತಿ ಹೊಂದಿದ್ದರು ಕಲಿಕೆಯಲ್ಲಿ ಮಕ್ಕಳಿಗೆ ಯಾವುದೇ ತೊಂದರೆ ಆಗದಂತೆ ಕಾಳಜಿ ವಹಿಸಿದ್ದರು ತಂದೆಯ ಆಸೆಯಂತೆ ಪರೀಕ್ಷೆ ಬರೆಯಲು ವಂದಿತಾ ಮುಂದಾಗಿದ್ದಾರೆ. ನೋವಿನ ನಡುವೆಯೂ ಪರೀಕ್ಷೆ ಬರೆಯಲು ಮನಸ್ಸು ಮಾಡಿದ್ದಾಳೆ. ಇಂದಿನಿಂದ ಐಸಿಎಸ್‌ಸಿ 10ನೇ ತರಗತಿಯ ಪೂರ್ವ ತಯಾರಿ ಪರೀಕ್ಷೆ ಆರಂಭವಾಗಿದೆ. ಪುನೀತ್ ರಾಜಕುಮಾರ್ ಮಗಳೊಂದಿಗೆ ಪರೀಕ್ಷೆ ಇರುವ ಹಿನ್ನೆಲೆಯಲ್ಲಿ ಬೆಳಗ್ಗೆ ಸಾಧ್ಯವಾದಷ್ಟು ಬೇಗ ಪೂಜಾ ಕಾರ್ಯಕ್ರಮ ಮುಗಿಸಲು ರಾಜಕುಮಾರ್ ಕುಟುಂಬಸ್ಥರು ಸಿದ್ಧತೆ ಮಾಡಿಕೊಂಡಿದ್ದರು.

Puneeth Rajkumar Daughter Have To Write Exam

ಪುನೀತ್‌ ರಾಜ್‌ಕುಮಾರ್‌ ಅವರನ್ನು ಕಳೆದುಕೊಂಡು ಇಡೀ ಕರುನಾಡು ಕಂಗಾಲಾಗಿದೆ. ಇನ್ನೂ ಅವರ ಮಕ್ಕಳ ನೋವು ಎಷ್ಟಿರ ಬಹುದು ಎನ್ನುವುದನ್ನು ಊಹಿಸಲು ಸಾಧ್ಯವಿಲ್ಲ. ಆದ್ರೆ ಅಪ್ಪ ಇಲ್ಲ ಎನ್ನುವ ನೋವಿನ ಜೊತೆಗೆ ಅಪ್ಪನ ಆಸೆಯನ್ನ ಇಡೇರಿಸುವ ಜವಾಬ್ದಾರಿ ಕೂಡ ಮಕ್ಕಳ ಮೇಲೆ ಇದೆ. ಹಾಗಾಗಿ ಪುನೀತ್ ಪುತ್ರಿ ವಂದಿತಾ ಪರೀಕ್ಷೆ ಬರೆಯುತ್ತಿದ್ದಾಳೆ. ಇನ್ನು ನಟ ಪುನೀತ್‌ ರಾಜ್‌ಕುಮಾರ್‌ ಅವರಿಗೆ ಶಿಕ್ಷಣದ ಬಗ್ಗೆ ಹೆಚ್ಚಿನ ಕಾಳಜಿ ಇತ್ತು. ತಮ್ಮ ಮಕ್ಕಳು ಮಾತ್ರವಲ್ಲದೆ, ಬೇರೆ ಮಕ್ಕಳು ಕೂಡ ಶಿಕ್ಷಣ ಪಡಿಯ ಬೇಕು ಎನ್ನುವ ಇಂಗಿತ ಅವರಿಗೆ ಹೆಚ್ಚಾಗಿತ್ತು. ಹಾಗಾಗಿ ಅವರು ಶಕ್ತಿ ಧಾಮನ್ನ ನಡೆಸಿಕೊಂಡು ಹೋಗುತ್ತಿದ್ದರು. ಅಲ್ಲಿ ನೂರಾರು ಮಕ್ಕಳಿಗೆ ಉಚಿತ ಶಿಕ್ಷಣ ನೀಡುತ್ತಿದ್ದರು. ಜೊತೆಗೆ ಶಿಕ್ಷಣಕ್ಕೆ ಹೆಚ್ಚಿನ ಕೊಡುಗೆ ಕೊಡಬೇಕು ಎನ್ನುವುದು ಪುನೀತ್‌ ರಾಜ್‌ಕುಮಾರ್‌ ಅವರ ಬಹು ದೊಡ್ಡ ಕನಸಾಗಿ ಇತ್ತು. ಇನ್ನೂ ಡಾ.ರಾಜ್‌ ಎನ್ನುವ ಆ್ಯಪ್‌ ಮಾಡಿ ಅದರ ಮೂಲಕ ಉಚಿತ ಶಿಕ್ಷಣ ತರಬೇತಿ ನೀಡಲು ರಾಜ್‌ ಕುಟುಂಬ ಮುಂದಾಗಿತ್ತು.

ಇನ್ನು ಇಂದು 11ನೇ ದಿನ ಆಗಿದ್ದರಿಂದ ಪುಣ್ಯ ಸ್ಮರಣೆಯ ಕಾರ್ಯ ನಡೆಸಲಾಗಿದೆ. ಪುಣ್ಯಸ್ಮರಣೆ ಕಾರ್ಯದಲ್ಲಿ ಕುಟುಂಬಸ್ಥರು ಭಾಗಿಯಾಗಿದ್ದಾರೆ. ಹಾಗಾಗಿ ಭಾನುವಾರ ರಾತ್ರಿಯಿಂದಲೇ ಸಕಲ ಸಿದ್ಧತೆಗಳು ನಡೆದಿವೆ. ಪುನೀತ್ ರಾಜಕುಮಾರ್ ಸಮಾಧಿ ವಿಶೇಷವಾಗಿ ಅಲಂಕೃತ ಗೊಂಡಿದ. ಅಪ್ಪು ಶಾಂತಿಧಾಮ ಹೂವಿನ ಅಲಂಕಾರದಿಂದ ಕಂಗೊಳಿಸುತ್ತಿದೆ. ಅತ್ತ ಪುನೀತ್ ರಾಜಕುಮಾರ್ ನಿವಾಸದಲ್ಲಿ ಕೂಡ ಪೂಜಾ ಕಾರ್ಯಕ್ರಮಗಳು ನೆರವೇರಿವೆ. ಪುನೀತ್ ಪತ್ನಿ ಅಶ್ವಿನಿ ಮಕ್ಕಳಾದ ಧೃತಿ, ವಂದಿತಾ, ಸಹೋದರರಾದ ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್ ಸೇರಿದಂತೆ ಇಡೀ ಕುಟುಂಬಸ್ಥರು ಅಪ್ಪು ಸಮಾಧಿ ಬಳಿ ಪೂಜೆ ಸಲ್ಲಿಸುತ್ತಿದ್ದಾರೆ.

More from Filmibeat

English summary
Puneeth Rajkumar Daughter Vanditha Have To Write Her 10th Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X