For Quick Alerts
  ALLOW NOTIFICATIONS  
  For Daily Alerts

  ಪುನೀತ್ ಅಂತಿಮ ದರ್ಶನ ಎಲ್ಲಿ? ಯಾವಾಗ?

  |

  ನಟ ಪುನೀತ್‌ ರಾಜ್‌ಕುಮಾರ್ ಬಾರದ ಲೋಕಕ್ಕೆ ತೆರಳಿದ್ದಾರೆ. ಅರಗಿಸಿಕೊಳ್ಳಲು ಸಾಧ್ಯವಾಗದಿದ್ದರು, ಇಹಲೋಕ ತ್ಯಜಿಸಿದ್ದಾರೆ ಪುನೀತ್. ಸಾಲು ಸಾಲು ಸಿನಿಮಾಗಳಲ್ಲಿ ನಟಿಸಿದ್ರು, ನಟಿಸಲು ಬಾಕಿ ಇದ್ದ ಸಿನಿಮಾಗಳ ಪಟ್ಟಿಯೇ ಇದ್ದವು, ಹೆಚ್ಚಾಗಿ ದೇವರಂತೆ ಕಾಣುತ್ತಿದ್ದ ಅಭಿಮಾನಿಗಳು ಮತ್ತು ಕುಟುಂಬ ಸದಸ್ಯರನ್ನು ಪುನೀತ್ ಅಗಲಿದ್ದಾರೆ. ಜಿಮ್‌ನಲ್ಲಿ ವರ್ಕ್‌ಔಟ್ ಮಾಡುವಾಗ ಲಘು ಹೃದಯಾಘಾತ ಸಂಭವಿಸಿದೆ. ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದರು ಕೂಡ ಚಿಕಿತ್ಸೆ ಫಲಕಾರಿಯಾಗದೇ ಇಂದು ಬೆಳಗ್ಗೆ ಸುಮಾರು 11.30ಕ್ಕೆ ವಿಧಿವಶರಾಗಿದ್ದಾರೆ.

  ವಿಕ್ರಂ ಆಸ್ಪತ್ರೆಯಿಂದ ಪುನೀತ್ ಅವರ ಪಾರ್ಥೀವ ಶರೀರವನ್ನು ಸಾರ್ವಜನಿಕರ ದರ್ಶನಕ್ಕಾಗಿ ನಗರದ ಕಂಠೀರವ ಸ್ಟೇಡಿಯಂನಲ್ಲಿ ಇಂದು ಸಂಜೆಯಿಂದಲೇ ಇರಿಸಲಾಗುತ್ತೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ತಿಳಿಸಿದ್ದಾರೆ. ಇಂದು ಸಂಜೆಯಿಂದ ನಾಳೆ ಸಂಜೆಯವರೆಗೂ ಪುನೀತ್ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಡಲಿದ್ದು, ಕುಟುಂಬದವರ ಇಚ್ಛೆಯಂತೆ ಅಂತಿಮ ಸಂಸ್ಕಾರದ ಸಿದ್ದತೆ ನಡೆಸಲಾಗುತ್ತೆ. ನಾಳೆ ಸಂಜೆ ಅಥವಾ ಭಾನುವಾರ ಬೆಳಗ್ಗೆ ಸಮಯ ನಿಗದಿ ಮಾಡಿಕೊಂಡು ಅಂತಿಮ ವಿಧಿ ವಿಧಾನ ಮಾಡುವ ಬಗ್ಗೆ ಚಿಂತಿಸಲಾಗುತ್ತಿದೆ.

  ಹಾಗೇ ಯಾವ ಜಾಗದಲ್ಲಿ ಅಂತಿಮ ಸಂಸ್ಕಾರ ಮಾಡಬೇಕು ಎಂಬ ಬಗ್ಗೆ ಕುಟುಂಬ ಸದಸ್ಯರ ಅಭಿಪ್ರಾಯ ಕೇಳಿ ಅವರಿಚ್ಛೆಯಂತೆ ನಡೆಸಿಕೊಡಲು ಸರ್ಕಾರ ಕೂಡ ಮುಂದಾಗಿದೆ. ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಗಳು ಪುನೀತ್ ಈ ಅಕಾಲಿಕ ಮರಣಕ್ಕೆ ಕಂಬನಿ ಮಿಡಿಯುತ್ತಿದ್ದು, ಅಂತಿಮ ದರ್ಶನಕ್ಕಾಗಿ ಕಾದುಕುಳಿತ್ತಿದ್ದಾರೆ. ಹೀಗಾಗಿ ಅಭಿಮಾನಿಗಳೆಲ್ಲರಿಗೂ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಡಲು ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ.

  Puneeth Rajkumar Death: Actor funeral and last rites details

  ಸಧ್ಯ ಪುನೀತ್ ಅವರ ಪಾರ್ಥೀವ ಶರೀರವನ್ನು ಸದಾಶಿವನಗರದಲ್ಲಿರುವ ಪುನೀತ್ ನಿವಾಸಕ್ಕೆ ಆಂಬುಲೆನ್ಸ್ ಮುಖಾಂತರ ತೆಗೆದುಕೊಂಡು ಹೋಗಲಾಗಿದ್ದು, ಮನೆಯಲ್ಲಿ ಮಾಡುವ ಒಂದಷ್ಟು ಶಾಸ್ತ್ರಗಳು ನೆರವೇರಲಿದೆ. ಮನೆಯ ಬಳಿ ಸಾಕಷ್ಟು ಅಭಿಮಾನಿಗಳು ನೆರೆದಿದ್ದು, ಅಪ್ಪುವನ್ನು ನೆನೆದು ಕಣ್ಣೀರು ಹಾಕುತ್ತಿದ್ದಾರೆ. ಯಾವುದೇ ತರಹ ಅಹಿತಕರ ಘಟನೆಗಳು ಆಗದಂತೆ ನೋಡಿಕೊಳ್ಳಲು ಪೋಲಿಸ್ ಭದ್ರತಾಪಡೆ ಮುಂದಾಗಿದೆ.

  English summary
  Actor Puneeth Rajkumar dies of heart attack today. Actor funeral and last rites details.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X