ಪುನೀತ್ ಕೊನೆಯ ಕ್ಷಣದ ಬಗ್ಗೆ ಮಾತನಾಡಿದ ಡಾ.ರಮಣರಾವ್
ನಟ ಪುನೀತ್ ಅವರಿಗೆ ಈ ರೀತಿ ಧಿಡೀರ್ ಸಾವು ಬರಲು ಕಾರಣ ಏನು, ಆರೋಗ್ಯದ ಬಗ್ಗೆ, ಬಾಡಿ ಫಿಟ್‌ನೆಸ್ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿದ್ದ ಪುನೀತ್‌ಗೆ ಹೀಗೆ ಆಗಲು ಕಾರಣ ಏನು ಅನ್ನುವಂತ ಪ್ರಶ್ನೆ ಪ್ರತಿಯೊಬ್ಬರನ್ನು ಕಾಡುತ್ತಿದೆ. ಸಾಕಷ್ಟು ಮಂದಿ ಪುನೀತ್ ಅವರ ಸಾವಿನ ಬಗ್ಗೆ ಚರ್ಚೆ ನಡೆಸುತ್ತಲೇ ಇದ್ದಾರೆ. ಅದರೆ ಅಪ್ಪುಗೆ ಕೊನೆ ಕ್ಷಣದಲ್ಲಿ ಆಗಿದ್ದಾದರೂ ಏನು, ಅವರು ಸಾಯುವ ಕೆಲ ಕ್ಷಣಗಳ ಮುಂಚೆ ಹೇಗಿದ್ದರು, ಅವರ ಆರೋಗ್ಯ ಸ್ಥಿತಿ ಹೇಗಿತ್ತು ಎಂಬುದರ ಬಗ್ಗೆ ರಮಣ ಶ್ರೀ ಆಸ್ಪತ್ರೆಯ ವೈದ್ಯ ಡಾ.ರಮಣರಾವ್ ಮಾತನಾಡಿದ್ದಾರೆ.
Recommended Video
ಪುನೀತ್ ಶುಕ್ರವಾರ ಜಿಮ್ ವರ್ಕ್‌ಔಟ್ ಮಾಡಿ ವಾಕಿಂಗ್ ಮಾಡುವ ಸಂದರ್ಭದಲ್ಲಿ ಎದೆ ನೋವು ಕಾಣಿಸಿದೆ. ಪತ್ನಿ ಆಶ್ವಿನಿ ಮತ್ತು ಪುನೀತ್ ಮಾತ್ರ ಈ ಸಂದರ್ಭದಲ್ಲಿ ಪಾರ್ಕ್‌ನಲ್ಲಿ ಇದ್ದರು. ಕೂಡಲೇ ಮನೆಯವರಿಗೆ ಕರೆ ಮಾಡಿದ ಅಶ್ವಿನಿ ವಿಷಯ ತಿಳಿಸಿ ಸದಾಶಿವನಗರದಲ್ಲೇ ಇರುವ ಖಾಸಗಿ ಆಸ್ಪತ್ರೆ ರಮಣಶ್ರೀಗೆ ಪುನೀತ್ ಅವರನ್ನು ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ಏನಾಯ್ತು ಅನ್ನುವ ಬಗ್ಗೆ ಡಾ. ರಮಣರಾವ್ ತಿಳಿಸಿದ್ದಾರೆ.
ಡಾ.ರಮಣರಾವ್ ಹೇಳುವ ಪ್ರಕಾರ "ಪುನೀತ್ ಮತ್ತು ಅಶ್ವಿನಿ ಇಬ್ಬರು ಆಸ್ಪತ್ರೆಗೆ ನಡೆದುಕೊಂಡೆ ಬಂದರು. ಬರುವಂತ ಸಂದರ್ಭದಲ್ಲಿ ಏನೋ ಸಣ್ಣದಾಗಿ ಆರೋಗ್ಯ ಕೆಟ್ಟಿರಬೇಕು ಎಂದುಕೊಂಡೆ. ಕೂಡಲೇ ಅವರನ್ನು ಬೆಡ್ ಮೇಲೆ ಮಲಗಿಸಿದೆ. ಆ ಸಂದರ್ಭದಲ್ಲಿ ತುಂಬಾ ಬೆವರುತ್ತಿದ್ದರು. ನಾನು ಕೇಳಿದೆ, ಏನು ಪುನೀತ್ ಇಷ್ಟೊಂದು ಬೆವರುತ್ತಿದ್ದೀರ ಅಂತಾ. ಅದಕ್ಕೆ ಪುನೀತ್ ಅಯ್ಯೋ ಈಗ ಅಷ್ಟೇ ವರ್ಕ್‌ಔಟ್, ವಾಕಿಂಗ್ ಮುಗಿಸಿಕೊಂಡು ಬಂದೆ. ಹೀಗಾಗಿ ತುಂಬಾ ಬೆವರು ಬರುತ್ತಿದೆ ಎಂದರು. ಅಷ್ಟೆ ಅಲ್ಲದೇ ಅವರಲ್ಲಿ ವೀಕ್‌ನೆಸ್ ಸಹ ಕಂಡುಬಂತು. ಕೂಡಲೇ ಇಸಿಜಿ ಮಾಡಬೇಕು ಎಂದು ತಿಳಿಸಿದೆ. ಇಸಿಜಿ ರಿಪೋರ್ಟ್‌ನಲ್ಲಿ ಸಮಸ್ಯೆ ಕಂಡು ಬಂತು. ಕೂಡಲೇ ಅವರನ್ನು ಆಸ್ಪತ್ರೆಗೆ ಅಡ್ಮಿಟ್ ಆಗುವ ಅಗತ್ಯ ಇದೆ ಎಂದು ತಿಳಿಸಿದೆ. ತಡ ಮಾಡದೇ ಪತ್ನಿ ಅಶ್ವಿನಿ ಅವರನ್ನು ವಿಕ್ರಂ ಆಸ್ಪತ್ರೆಗೆ ಕರೆದುಕೊಂಡು ಹೋದರು. ಆಸ್ಪತ್ರೆ ತಲುಪಿ ಸೋಫಾದಲ್ಲಿ ಕುಳಿತಾಗಲೇ ಅವರ ಪ್ರಾಣ ಹೋಗಿದ್ದು ಕೇಳಿ ತುಂಬಾ ಶಾಕ್ ಆಗಿದೆ" ಎಂದಿದ್ದಾರೆ.

ಪುನೀತ್ ಸಾವಿನ ಬಗ್ಗೆ ಮುಂದುವರೆದು ಮಾತನಾಡಿದ ಅವರು, "ಅಪ್ಪು ಫಿಟ್‌ನೇಸ್ ತುಂಬಾ ಚೆನ್ನಾಗಿ ಇದೆ. ಫಿಟ್‌ನೆಸ್ ಕಾಪಾಡುವವರಿಗೆ ಯಾವುದೇ ಕೆಟ್ಟ ಅಭ್ಯಾಸ ಇರುವುದಿಲ್ಲ. ಆರೋಗ್ಯ ಸ್ಥಿತಿ ಕೂಡ ಚೆನ್ನಾಗಿ ಇರುತ್ತದೆ. ಆದರೆ, ಸಡನ್ ಡೆತ್ ಅನ್ನುವಂತದ್ದನ್ನು ಯಾರೂ ತಡೆಯಲು ಸಾಧ್ಯವಿಲ್ಲ. ಅಪ್ಪು ನನ್ನ ಬಳಿ ಚೆಕ್‌ಅಪ್‌ಗೆ ಬಂದಾಗಲು ಫಿಟ್ ಆಂಡ್ ಫೈನ್ ಆಗಿರುತ್ತಿದ್ದರು. ಇಂತಹದ್ದೊಂದು ಸಮಸ್ಯೆ ಪುನೀತ್‌ಗೆ ಇದೆ ಅಂತ ಯಾವುದೇ ಸುಳಿವು ಇರಲಿಲ್ಲ. ಆದರೆ ಹೀಗೆ ಕಾರ್ಡಿಯಾಕ್ ಅರೆಸ್ಟ್ ಆದಾಗ ಅದನ್ನು ತಡೆಯಲು ಸಾಧ್ಯವಿಲ್ಲ. ವೈದ್ಯರಾಗಿ ನಾವೆಷ್ಟೇ ಪ್ರಯತ್ನ ಪಟ್ಟರೂ ಇದು ಸಾಧ್ಯವಾಗಲಿಲ್ಲ. ಇಷ್ಟು ಆರೋಗ್ಯವಾಗಿದ್ದ ಪುನೀತ್ ಇಂದು ಇಲ್ಲ ಅನ್ನೋದನ್ನ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ'' ಎಂದು ಬೇಸರ ವ್ಯಕ್ತಪಡಿಸಿದ್ದಾರೆ.


Click it and Unblock the Notifications











