For Quick Alerts
  ALLOW NOTIFICATIONS  
  For Daily Alerts

  ಮೋದಿ ನೀಡಿದ್ದ ಆಹ್ವಾನ ತಿರಸ್ಕರಿಸಿದ್ದ ಪುನೀತ್ ರಾಜ್‌ಕುಮಾರ್

  |

  ನಟ ಪುನೀತ್ ರಾಜ್‌ಕುಮಾರ್‌ಗೆ ಸಿನಿಮಾ ರಂಗದಲ್ಲಿ ಮಾತ್ರವೇ ಅಲ್ಲ ರಾಜಕೀಯ ರಂಗದಲ್ಲೂ ದೊಡ್ಡ ಸ್ನೇಹಿತರ ಬಳಗವಿತ್ತು. ಹಿರಿಯ ರಾಜಕೀಯ ನಾಯಕರೊಟ್ಟಿಗೂ ಪುನೀತ್‌ ಸಲುಗೆ ಸಂಪಾದಿಸಿದ್ದರು. ಪುನೀತ್ ಅಂಥಹಾ ಅಜಾತಶತ್ರು, ವಿವಾದರಹಿತ ವ್ಯಕ್ತಿಯನ್ನು ರಾಜಕೀಯಕ್ಕೆ ಸೆಳೆಯಲು ಎಲ್ಲ ಪಕ್ಷಗಳ ಮುಖಂಡರೂ ಯತ್ನಿಸಿದ್ದರು. ಸ್ವತಃ ಪ್ರಧಾನಿ ಮೋದಿ ಸಹ ಈ ಪ್ರಯತ್ನ ಮಾಡಿದ್ದರು!

  ನರೇಂದ್ರ ಮೋದಿ ಆಹ್ವಾನವನ್ನೆ ತಿರಸ್ಕರಿಸಿದ್ದ ಪುನೀತ್ ರಾಜ್‌ಕುಮಾರ್

  ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರು ಪುನೀತ್ ಅವರಿಗೆ ನೇರ ಆಹ್ವಾನವನ್ನು ನೀಡಿದ್ದರು. ಆದರೆ ಪುನೀತ್ ಆ ಆಹ್ವಾನವನ್ನು ಅಷ್ಟೆ ನಯವಾಗಿ ತಿರಸ್ಕರಿಸಿದರು. ರಾಜಕೀಯದಿಂದ ದೂರ ಉಳಿವ ತಮ್ಮ ತಂದೆಯ ಆದರ್ಶದ ಹಾದಿಗೆ ಬದ್ಧವಾಗಿದ್ದರು.

  ''ಬಿಜೆಪಿ ನಾಯಕರು ಪುನೀತ್ ರಾಜ್‌ಕುಮಾರ್ ಅವರನ್ನು ತಮ್ಮ ಪಕ್ಷಕ್ಕೆ ಸೆಳೆಯಲು ಬಹಳ ಪ್ರಯತ್ನ ಪಟ್ಟಿದ್ದರು'' ಎಂದು ಅವರಿಗೆ ಬಹಳ ಆಪ್ತರಾಗಿದ್ದ, ಪ್ರೊಡಕ್ಷನ್ ಮ್ಯಾನೇಜರ್ ಆಗಿರುವ ಎನ್.ಎಸ್.ರಾಜ್‌ಕುಮಾರ್ ಹೇಳಿರುವುದಾಗಿ ಪ್ರಜಾವಾಣಿಯಲ್ಲಿ ವರದಿಯಾಗಿದೆ.

  ''ಕಳೆದ ಲೋಕಸಭೆ ಚುನಾವಣೆಗೆ ಮುನ್ನಾ, ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್, ಚಿತ್ರನಟ ಹಾಗೂ ಬಿಜೆಪಿ ಮುಖಂಡರಾಗಿರುವ ಜಗ್ಗೇಶ್, ನಿರ್ಮಾಪಕ ಎಸ್‌ವಿ ಬಾಬು ಅವರುಗಳು ಪುನೀತ್ ರಾಜ್‌ಕುಮಾರ್ ಅವರನ್ನು ಭೇಟಿಯಾಗಿ ಪಕ್ಷಕ್ಕೆ ಆಹ್ವಾನಿಸಿದ್ದರು. ಆದರೆ ಪುನೀತ್ ತಾವು ತಂದೆಯಂತೆ ರಾಜಕೀಯದಿಂದ ದೂರವೇ ಇರುವುದಾಗಿ ಅವರಿಗೆ ಹೇಳಿದ್ದರೆಂದು'' ಎನ್.ಎಸ್.ರಾಜಕುಮಾರ್ ಹೇಳಿದ್ದಾರೆ.

  ಗುಜರಾತ್, ಆಂಧ್ರ ಬಿಜೆಪಿ ಮುಖಂಡರಿಂದಲೂ ಒತ್ತಡ

  ಗುಜರಾತ್, ಆಂಧ್ರ ಬಿಜೆಪಿ ಮುಖಂಡರಿಂದಲೂ ಒತ್ತಡ

  ''ಬಿ.ಎಲ್.ಸಂತೋಶ್ ಬಂದು ಹೋದ ಕೆಲವು ದಿನಗಳ ಬಿಳಿಕ ಗುಜರಾತ್ ಬಿಜೆಪಿಯ ಮುಖಂಡ ಬಿವಿಎಸ್‌ ಶರ್ಮಾ, ಆಂಧ್ರಪ್ರದೇಶದ ಸೋಮು ವಿ ರಾಜು, ನಿರ್ಮಾಪಕ ಎಸ್‌ವಿ ರಾಜು ಅವರೊಟ್ಟಿಗೆ ಮತ್ತೆ ಬಂದು ನನ್ನನ್ನು ಭೇಟಿಯಾಗಿ ಪುನೀತ್ ಅವರನ್ನು ಒಪ್ಪಿಸಿ ಎಂದು ಕೇಳಿದರು. ಆದರೆ ಈ ವಿಷಯವಾಗಿ ಅವರನ್ನು ಒಪ್ಪಿಸಲು ಸಾಧ್ಯವೇ ಇಲ್ಲವೆಂದು ನಾನು ಅವರಿಗೆ ಹೇಳಿ ಕಳಿಸಿದೆ'' ಎಂದಿದ್ದಾರೆ ರಾಜ್‌ಕುಮಾರ್.

  ದೆಹಲಿಗೆ ಬಂದು ಮೋದಿಯವರನ್ನು ಭೇಟಿಯಾಗಿರೆಂದು ಆಹ್ವಾನ

  ದೆಹಲಿಗೆ ಬಂದು ಮೋದಿಯವರನ್ನು ಭೇಟಿಯಾಗಿರೆಂದು ಆಹ್ವಾನ

  ''ಇದೆಲ್ಲದರ ಬಳಿಕ ಬಿಜೆಪಿಯ ಕಾರ್ಯದರ್ಶಿಯಾಗಿದ್ದ ಅನಿಲ್ ಎಂಬುವರು ಕರೆ ಮಾಡಿ ನೀವು ಪಕ್ಷಕ್ಕೆ ಬರದಿದ್ದರೂ ಪರವಾಗಿಲ್ಲ ದೆಹಲಿಗೆ ಬಂದು ಒಮ್ಮೆ ಪ್ರಧಾನಿ ಮೋದಿಯವರನ್ನು ಭೇಟಿಯಾಗಿ ಎಂದು ಸಲಹೆ ನೀಡಿದರು. ಆದರೆ ಅದನ್ನೂ ಸಹ ಅಪ್ಪು ನಿರಾಕರಿಸಿದರು. ನಮಗೆ ಎಲ್ಲ ಪಕ್ಷದಲ್ಲೂ ಅಭಿಮಾನಿಗಳಿದ್ದಾರೆ, ಸಿದ್ದರಾಮಯ್ಯ, ಯಡಿಯೂರಪ್ಪ, ಕುಮಾರಸ್ವಾಮಿ ಎಲ್ಲರೂ ನಮಗೆ ಬೇಕಾದವರು. ನಾನು ಮೋದಿಯನ್ನು ಭೇಟಿಯಾದರೆ ಅದು ರಾಜಕೀಯ ತಿರುವು ಪಡೆದುಕೊಳ್ಳುತ್ತದೆ ಎಂದು ಪುನೀತ್ ಹೇಳಿದ್ದರು'' ಎಂದಿದ್ದಾರೆ ಎನ್‌ಎಸ್ ರಾಜ್‌ಕುಮಾರ್.

  ಎಚ್‌ಎಎಲ್‌ನಲ್ಲಿ ಭೇಟಿಯಾದ ಅಪ್ಪು

  ಎಚ್‌ಎಎಲ್‌ನಲ್ಲಿ ಭೇಟಿಯಾದ ಅಪ್ಪು

  ''ಮೋದಿಯವರು ಬಿಜೆಪಿ ಮುಖಂಡರು ಎಂದುಕೊಂಡು ಭೇಟಿಯಾಗಬೇಡಿ ಬದಲಿಗೆ ದೇಶದ ಪ್ರಧಾನಿ ಎಂದುಕೊಂಡು ಭೇಟಿಯಾಗಿ, ಅವರಿಗೆ ನೀವು ಬರೆದ ಪುಸ್ತಕ ಕೊಡಿ ಎಂದು ನಾನು ಪುನೀತ್ ಅವರಿಗೆ ಸಲಹೆ ಕೊಟ್ಟೆ ಆ ನಂತರ ಪುನೀತ್ ಅವರು ಒಪ್ಪಿ, ಎಚ್‌ಎಎಲ್ ಏರ್‌ಪೋರ್ಟ್ ಟ್ರಾನ್ಸಿಸ್ಟ್‌ನಲ್ಲಿ ಪ್ರಧಾನಿಯವರನ್ನು ಅಪ್ಪು ಹಾಗೂ ಅಶ್ವಿನಿಯವರು ಭೇಟಿಯಾದರು. ನಾನೂ ಅಂದು ಜೊತೆಗೆ ಇದ್ದೆ'' ಎಂದು ನೆನಪು ಮಾಡಿಕೊಂಡಿದ್ದಾರೆ ಎನ್‌ಎಸ್ ರಾಜ್‌ಕುಮಾರ್.

  ಪ್ರಧಾನಿ ಮಾತಿಗೆ ನಕ್ಕು ಕೈಮುಗಿದ ಅಪ್ಪು

  ಪ್ರಧಾನಿ ಮಾತಿಗೆ ನಕ್ಕು ಕೈಮುಗಿದ ಅಪ್ಪು

  ''ಅಂದು ಪ್ರಧಾನಿಯವರು ಸುಮಾರು ಏಳು ನಿಮಿಷ ಪುನೀತ್ ಅವರೊಟ್ಟಿಗೆ ಮಾತನಾಡಿದರು. ನಿಮ್ಮಂಥಹಾ ಯುವಕರು ರಾಜಕೀಯಕ್ಕೆ ಬಂದರೆ ದೇಶ ಬದಲಾಗುತ್ತದೆ ಎಂದು ಹೇಳಿದರು. ಆದರೆ ಅಪ್ಪು ಆ ಮಾತಿಗೆ ಯಾವ ಪ್ರತಿಕ್ರಿಯೆಯನ್ನೂ ನೀಡಲಿಲ್ಲ. ನಕ್ಕು ಕೈ ಮುಗಿದರು'' ಎಂದು ನೆನಪು ಮಾಡಿದ್ದಾರೆ ಎನ್‌ಎಸ್ ರಾಜ್‌ಕುಮಾರ್.

  ಯಾವ ಒತ್ತಡಕ್ಕೂ ಬಗ್ಗಿರಲಿಲ್ಲ ಅಪ್ಪು

  ಯಾವ ಒತ್ತಡಕ್ಕೂ ಬಗ್ಗಿರಲಿಲ್ಲ ಅಪ್ಪು

  ಪುನೀತ್ ರಾಜ್‌ಕುಮಾರ್ ಅವರನ್ನು ರಾಜಕೀಯಕ್ಕೆ ಸೆಳೆಯಲು ಯತ್ನಿಸಿದ್ದಾಗಿ ಸ್ವತಃ ಡಿ.ಕೆ.ಶಿವಕುಮಾರ್ ಸಹ ಕೆಲವು ದಿನಗಳ ಹಿಂದಷ್ಟೆ ಹೇಳಿದ್ದರು. ರಾಜ್‌ಕುಮಾರ್ ನಿವಾಸಕ್ಕೆ ಅಮಿತ್ ಶಾ, ರಾಹುಲ್ ಗಾಂಧಿ ಅವರುಗಳು ಬಂದು ಹೋಗಿದ್ದರು. ಆದರೆ ಪುನೀತ್ ಯಾವ ಒತ್ತಡಕ್ಕೂ ಬಗ್ಗದೆ ರಾಜಕೀಯದಿಂದ ದೂರವೇ ಉಳಿದರು. ಓರಗೆಯ ನಟ-ನಟಿಯರು ಪಕ್ಷಗಳ ಪರವಾಗಿ ಚುನಾವಣೆ ಪ್ರಚಾರದಲ್ಲಿ ಭಾಗವಹಿಸಿದರೆ ಪುನೀತ್ ಮಾತ್ರ ಚುನಾವಣಾ ಆಯೋಗದ ಜೊತೆ ನಿಂತು ಸುಗಮವಾಗಿ ಚುನಾವಣೆ ನಡೆಯಲು, ಹೆಚ್ಚು ಮತದಾನವಾಗಲು ಸಹಕರಿಸುತ್ತಿದ್ದರು. ಸ್ವತಃ ತಮ್ಮ ಅತ್ತಿಗೆ ಗೀತಾ ಶಿವರಾಜ್ ಕುಮಾರ್ ಚುನಾವಣೆಗೆ ನಿಂತಾಗಲೂ ಅಪ್ಪು ಪ್ರಚಾರಕ್ಕೆ ಹೋಗಿರಲಿಲ್ಲ ಎಂಬುದು ಅಪ್ಪು ಅದೆಷ್ಟು ಅಪ್ಪನ ಆದರ್ಶಕ್ಕೆ ಅಂಟಿಕೊಂಡಿದ್ದರು ಎಂಬುದನ್ನು ತೋರಿಸುತ್ತದೆ.

  English summary
  Puneeth Rajkumar denied prime minister Narendra Modi's invitation to join politics. Puneeth's close aid NS Rajkumar said many BJP leaders tried many times to pull Puneeth Rajkumar to their party.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X