ಪರೋಪಕಾರಕ್ಕಾಗಿ 8 ಕೋಟಿ ಮೀಸಲು ಇಟ್ಟಿದ್ದರು ಪುನೀತ್‌ ರಾಜ್‌ಕುಮಾರ್!

ಕನ್ನಡದ ನಟ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ನಿಧನ, ಅವರ ಅಭಿಮಾನಿಗಳಿಗೆ ಮತ್ತು ಇಡೀ ಭಾರತೀಯ ಚಿತ್ರ ರಂಗದ ಮಂದಿಗೆ ಅಪಾರ ನೋವನ್ನು ಉಂಟು ಮಾಡಿದೆ. ಪುನೀತ್ ರಾಜ್‌ಕುಮಾರ್ ಇಲ್ಲವಾಗಿ ಹತ್ತು ದಿನಗಳು ಕಳೆದು ಹೋಗಿವೆ. ಆದರೂ ಸಹ ಅವರ ಸಮಾಧಿಗೆ ಭೇಟಿ ನೀಡಿ ನಮನ ಸಲ್ಲಿಸುವವರ ಸಂಖ್ಯೆ ಮಾತ್ರ ಕಡಿಮೆ ಆಗಿಲ್ಲ. ಪ್ರತಿದಿನ ಸಾವಿರಾರು ಸಂಖ್ಯೆಯಲ್ಲಿ ಜನರು ಪುನೀತ್‌ ರಾಜ್‌ಕುಮಾರ್‌ ಅವರ ಸಮಾಧಿಗೆ ನಮನ ಸಲ್ಲಿಸಿ ಹೋಗುತ್ತಿದ್ದಾರೆ.

ಪುನೀತ್ ರಾಜ್ ಕುಮಾರ್ ಅವರು ಅತಿ ಸರಳವಾಗಿ ಬದುಕಿದ ವ್ಯಕ್ತಿ. ಯಾವತ್ತೂ ಕೂಡ ತಾನು ಒಬ್ಬ ದೊಡ್ಡ ಸ್ಟಾರ್ ನಟ ಎನ್ನುವಂತಹ ಹಮ್ಮು ಬಿಮ್ಮು ತೋರಿದವರಲ್ಲ. ಅಭಿಮಾನಿಗಳೊಂದಿಗೆ ಕೂಡ ತಾನು ಒಬ್ಬ ಅಭಿಮಾನಿಯಾಗಿ ಇದ್ದು ಬಿಡುತ್ತಿದ್ದರು ಪುನೀತ್ ರಾಜಕುಮಾರ್. ಪುನೀತ್ ರಾಜಕುಮಾರ್ ಮಾಡುತ್ತಿದ್ದಂತಹ ಒಳ್ಳೆಯ ಕೆಲಸಗಳು, ಅವರ ಸಾಮಾಜಿಕ ಕೊಡುಗೆಗಳು, ಅವರು ಇದ್ದಾಗ ಅಷ್ಟಾಗಿ ಬೆಳಕಿಗೆ ಬರಲಿಲ್ಲ. ಯಾಕೆಂದರೆ ರಾಜಕುಮಾರ್ ಕುಟುಂಬ ಸರಳತೆಯ ಪ್ರತೀಕ ಎಂದೇ ಹೇಳಬಹುದು. ಬಲಗೈಯಲ್ಲಿ ಕೊಟ್ಟಿದ್ದು ಎಡಗೈಗೆ ಗೊತ್ತಾಗಬಾರದು ಎನ್ನುವ ಸೂತ್ರವನ್ನು ಅಚ್ಚುಕಟ್ಟಾಗಿ ಪಾಲಿಸಿಕೊಂಡು ಬರುತ್ತಿದೆ ರಾಜ್‌ ಕುಟುಂಬ. ಹಾಗಾಗಿ ಪುನೀತ್ ರಾಜಕುಮಾರ್ ಇದ್ದಾಗ ಅವರು ಮಾಡಿದ ಅದೆಷ್ಟೋ ಉತ್ತಮ ಸಾಮಾಜಿಕ ಕಾರ್ಯಗಳು ಬೆಳಕಿಗೆ ಬಂದಿರಲಿಲ್ಲ. ಅಷ್ಟೇ ಯಾಕೆ ಪುನೀತ್‌ ರಾಜ್‌ಕುಮಾರ್‌ ಅವರು ಮಾಡುತ್ತಿದ್ದ ಎಷ್ಟೋ ಸಾಮಾಜಿಕ ಕಾರ್ಯಗಳ ಬಗ್ಗೆ ಶಿವರಾಜ್‌ಕುಮಾರ್‌ ಅವರಿಗೂ ಸಹ ಗೊತ್ತಿರಲಿಲ್ಲವಂತೆ. ಇದನ್ನು ಶಿವಣ್ಣ ಅವರೇ ಹೇಳಿಕೊಂಡಿದ್ದಾರೆ. ಅವರು ಇಲ್ಲವಾದ ಮೇಲೆ ಅವರನ್ನು ನೆನೆದು ಅವರು ಮಾಡುತ್ತಿದ್ದ ಕಾರ್ಯಗಳ ಬಗ್ಗೆ ಎಲ್ಲರೂ ಈಗ ಮೆಚ್ಚುಗೆಯ ಮಾತುಗಳನ್ನೇ ಆಡುತ್ತಿದ್ದಾರೆ.

ಇದೀಗ ಪುನೀತ್ ರಾಜಕುಮಾರ್ ಅವರ ಮತ್ತೊಂದು ಕರ್ತವ್ಯ ಬೆಳಕಿಗೆ ಬಂದಿದೆ. ಸ್ಟಾರ್ ನಟ ಪುನೀತ್ ರಾಜಕುಮಾರ್ ತೆರೆಯ ಮೇಲೆ ಮಾತ್ರವಲ್ಲ ತೆರೆಯ ಹಿಂದೆಯೂ ರಾಜರತ್ನ ಆಗಿ ಇದ್ದಂತಹ ವ್ಯಕ್ತಿ. ಪುನೀತ್ ರಾಜಕುಮಾರ್ ಪರೋಪಕಾರಿ ಕೆಲಸಗಳಿಗೆ, ಅಂದರೆ ಮತ್ತೊಬ್ಬರಿಗೆ ಸಹಾಯ ಮಾಡುವುದಕ್ಕಾಗಿಯೇ ಬರೋಬ್ಬರಿ 8 ಕೋಟಿ ಹಣವನ್ನು ಠೇವಣಿ ಇಟ್ಟಿದ್ದಾರಂತೆ. ಇದರಿಂದ ಬಡ್ಡಿ ರೂಪದಲ್ಲಿ ಬಂದ ಹಣದಿಂದಲೇ ಸಾಮಾಜಿಕ ಕಾರ್ಯಗಳನ್ನು ಮಾಡುತ್ತಿದ್ದರು ಎಂದು ಹೇಳಲಾಗುಗುತ್ತಿದೆ.

Puneeth Rajkumar Deposit 8 Crore For charitable Work

ಈಗಿನ ಕಾಲದಲ್ಲಿ ತಮ್ಮ ಪಾಡಿಗೆ ತಾವು, ತಮ್ಮ ಮನೆ ಆಯ್ತು ಮಕ್ಕಳಾಯಿತು ಎಂದು, ಎಷ್ಟೇ ಹಣ, ಆಸ್ತಿ ಗಳಿಸಿದರು ಕೂಡ ತಮ್ಮ ಪರಿವಾರಕ್ಕಾಗಿಯೇ ಮೀಸಲಿಡುವ ಕಾಲ ಇದು. ಆದರೆ ಪುನೀತ್ ರಾಜಕುಮಾರ್ ಮಾತ್ರ 8 ಕೋಟಿ ಹಣವನ್ನು ಮತ್ತೊಬ್ಬರಿಗೆ ಉಪಕಾರ ಮಾಡಲೆಂದೇ ಡೆಪಾಸಿಟ್ ಮಾಡಿ ಇಟ್ಟಿದ್ದರು. ಇದು ಅಪ್ಪು ಬಳಗದಿಂದ ಕೇಳಿ ಬರುತ್ತಿರುವ ಮಾತು.

ಈಗ ಪುನೀತ್ ರಾಜಕುಮಾರ್ ನಿಧನ ಹೊಂದಿದ್ದಾರೆ. ಆ ಹಣವನ್ನು 26 ಅನಾಥಾಶ್ರಮಗಳು, 16 ವೃದ್ಧಾ ಶ್ರಮಗಳು, 19 ಗೋ ಶಾಲೆಗಳು ಮತ್ತು ಅವರು ಈ ಹಿಂದೆ ನಿರ್ವಹಿಸುತ್ತಿದ್ದ 45 ಶಾಲೆಗಳಿಗೆ ಆರ್ಥಿಕ ಸಹಾಯಕ್ಕೆ ಬಳಸಲಾಗುವುದು ಎನ್ನಲಾಗಿದೆ.

ಪುನೀತ್ ರಾಜಕುಮಾರ್ ತೆರೆಮರೆಯಲ್ಲಿ ಸದಾ ಸಾಮಾಜಿಕ ಕೆಲಸ ಕಾರ್ಯಗಳಿಗೆ ಮುಂದಾಗುತ್ತಿದ್ದರು. ಹಿಂದುಳಿದವರ ಬಗ್ಗೆ ಕಾಳಜಿ ಹೊಂದಿದ್ದರು. ಬಡವರಿಗೆ ತಮಗಾದ ಸಹಾಯವನ್ನು ಮನಸ್ಸು ಬಿಚ್ಚಿ ಮಾಡುತ್ತಿದ್ದರು ಪುನೀತ್‌ ರಾಜ್‌ಕುಮಾರ್. 8 ಕೋಟಿ ಠೇವಣಿ ವಿಚಾರದ ಬಗ್ಗೆ ಕುಟುಂಬಸ್ಥರು ಅಧಿಕೃತವಾಗಿ ಹೇಳಿಕೊಂಡಿಲ್ಲ. ಆದರೆ ಪುನೀತ್‌ ರಾಜಕುಮಾರ್ ತಾವು ಲೋಕೊಪಕಾರಕ್ಕಾಗಿ ಎಂಟು ಕೋಟಿ ಹಣವನ್ನು ಠೇವಣಿ ಇಟ್ಟಿದ್ದರು ಎಂದು ಅಪ್ಪು ಬಳಗದಿಂದ ಕೇಳಿ ಬಂದಿರುವ ಸುದ್ದಿ.

ಪುನೀತ್ ರಾಜ್ ಕುಮಾರ್ ಒಬ್ಬ ಸ್ಟಾರ್ ನಟ. ಆದರೆ ತೆರೆಮರೆಯಲ್ಲಿ ಇಂತಹ ಅದೆಷ್ಟೋ ಉತ್ತಮ ಕಾರ್ಯಗಳನ್ನು ಮಾಡಿದ್ದಾರೆ. ಪುನೀತ್ ರಾಜಕುಮಾರ್ ಅವರು ಏನೇ ಮಾಡಿದರು ಅದನ್ನು ಪ್ರಚಾರಕ್ಕೆ ಬಳಸಿಕೊಳ್ಳಲಿಲ್ಲ. ಅವರ ಪ್ರಚಾರ ಏನಿದ್ದರೂ ತಮ್ಮ ಸಿನಿಮಾ ಕೆಲಸಗಳಿಗಾಗಿ ಮತ್ತು ತಮ್ಮ ಸಿನಿಮಾ ಗೆಲ್ಲಬೇಕು ಎನ್ನುವಂತಹ ನಿಟ್ಟಿನಲ್ಲಿ ಮಾತ್ರ ಇರುತ್ತಿತ್ತು. ತಾವು ಮಾಡಿದ ಸಹಾಯ ಆಗಲಿ, ಸಾಮಾಜಿಕ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದ ವಿಚಾರಗಳನ್ನು ಆಗಲಿ ಎಲ್ಲೂ ಕೂಡ ಪುನೀತ್ ರಾಜಕುಮಾರ್ ಹೇಳಿಕೊಳ್ಳುತ್ತಿರಲಿಲ್ಲ. ಅವರು ಮಾಡಿರುವ ಇಂಥಹ ಉತ್ತಮ ಕೆಲಸಗಳೇ ಅವರು ಒಬ್ಬ ಪೂರ್ಣ ವ್ಯಕ್ತಿತ್ವ ಆಗಲು ಸಾಧ್ಯವಾಗಿದೆ. ಅವರು ರಾಜರತ್ನ ಆಗಿ ಹೊರ ಹೊಮ್ಮಿದ್ದಾರೆ. ಹಾಗಾಗಿ ಅವರಿಗೆ ಸಹಸ್ರಾರು ಜನರು ನಮನವನ್ನು ಸಲ್ಲಿಸುತ್ತಿದ್ದಾರೆ.

More from Filmibeat

English summary
8 Crore Rupees Deposited By Puneeth Rajukumar For Charitable Works,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X