ಇಟಲಿಯಿಂದ ಬೆಂಗಳೂರಿಗೆ ಪುನೀತ್ ರಾಜ್ ವಾಪಸ್

By Rajendra

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಇಟಲಿಯಿಂದ ಬೆಂಗಳೂರಿಗೆ ವಾಪಸ್ ಆಗಿದ್ದಾರೆ. ಅವರ ಮಹತ್ವಾಕಾಂಕ್ಷಿ ಚಿತ್ರ 'ಧೀರ ರಣವಿಕ್ರಮ' ಶೂಟಿಂಗ್ ನಿಮಿತ್ತ ಅವರು ಇಟಲಿಗೆ ಪ್ರಯಾಣ ಬೆಳೆಸಿದ್ದರು.

ಪುನೀತ್ ಜೊತೆಗೆ ಚಿತ್ರತಂಡದ 16 ಮಂದಿಯೂ ಜೊತೆಗಿದ್ದರು. ಒಟ್ಟು ಐದು ದಿನಗಳ ಕಾಲ ಶೂಟಿಂಗ್ ಶೆಡ್ಯೂಲ್ ಮೂರೇ ದಿನಗಳಲ್ಲಿ ಮುಗಿಸಿಕೊಂಡು ವಾಪಸ್ ಆಗಿದೆ ಚಿತ್ರ ತಂಡ. ಇಟಲಿಯಲ್ಲಿನ ಪ್ರತಿಕೂಲ ವಾತಾವರಣವಿದ್ದರೂ ಶೂಟಿಂಗ್ ಬೇಗ ಮುಗಿಸಿಕೊಂಡು ಹಿಂತಿರುಗಿದೆ ರಣವಿಕ್ರಮ ತಂಡ. [ಇಟಲಿ ವಿಮಾನ ಹತ್ತಿದ ಪುನೀತ್ ರಾಜ್ ಕುಮಾರ್]

Dheera Rana Vikrama still
ಇಟಲಿಯಲ್ಲಿ ಕೆಲ ಮಾತಿನ ಭಾಗದ ಹಾಗೂ ಹಾಡಿನ ಚಿತ್ರೀಕರಣವನ್ನು ಮಾಡಲಾಗಿದೆ. ಜಯಣ್ಣ ಹಾಗೂ ಭೋಗೇಂದ್ರ ಅವರ ಮತ್ತೊಂದು ಮಹೋನ್ನತ ಚಿತ್ರವಿದು. ವೈಧಿ ಅವರ ಛಾಯಾಗ್ರಹಣ, ವಿ ಹರಿಕೃಷ್ಣ ಅವರ ಸಂಗೀತ, ಸುರೇಶ್ ಅವರ ಸಂಕಲನ, ರವಿ ವರ್ಮ ಅವರ ಸಾಹಸವನ್ನು ಒಳಗೊಂಡಿದೆ.

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರಿಗೆ ನಾಯಕಿಯಾರಾಗಿ ಅಂಜಲಿ ಹಾಗೂ ಆದ ಶರ್ಮ ಇದ್ದಾರೆ. ಹಿಂದಿ ಸಿನಿಮಾದ ಪ್ರಖ್ಯಾತ ಖಳ ನಟ ವಿಕ್ರಮ್ ಸಿಂಗ್, ಪೋಷಕ ಪಾತ್ರಗಳಲ್ಲಿ ದಿನೇಶ್ ಮಂಗಳೂರು, ಮುಖ್ಯಮಂತ್ರಿ ಚಂದ್ರು, ಡಾಕ್ಟರ್ ಗಿರೀಶ್ ಕಾರ್ನಾಡ್, ಅವಿನಾಶ್, ರಂಗಾಯಣ ರಘು, ಅಶೋಕ್, ಸುಧ ಬೆಳವಾಡಿ, ಶ್ರೀಧರ್ ಕೇಸರಿ, ಲಕ್ಷ್ಮಣ್ ರವಿವರ್ಮಾ ಹಾಗೂ ಇತರರು ಇದ್ದಾರೆ. (ಫಿಲ್ಮಿಬೀಟ್ ಕನ್ನಡ)

More from Filmibeat

English summary
The talkie and song shooting in Italy for the movie 'Dheera Rana Vikrama' completed. Recently the team of 16 members including Power Star Puneeth Rajkumar and Adah Sharma heads to Italy for song sequence of the movie Rana Vikrama. The action film directed by Pavan Wadeyar featuring.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X