ಗಾಳಿ ಸುದ್ದಿಗೆ 'ಅಧಿಕೃತ' ಮುದ್ರೆ ಒತ್ತಿದ ಪುನೀತ್-ದಿನಕರ್ ತೂಗುದೀಪ್

ದಿನಕರ್ ತೂಗುದೀಪ ನಿರ್ದೇಶಿಸಲಿರುವ ಸಿನಿಮಾದಲ್ಲಿ ಪುನೀತ್ ರಾಜ್‌ಕುಮಾರ್ ನಟಿಸಲಿದ್ದಾರೆ ಎಂಬ ಸುದ್ದಿ ಕಳೆದ ಕೆಲ ವಾರಗಳಿಂದ ಹರಿದಾಡುತ್ತಿತ್ತು ಅದೀಗ ಅಧಿಕೃತಗೊಂಡಿದೆ.

Recommended Video

ಗಾಳಿ ಸುದ್ದಿಯನ್ನು ನಿಜ ಮಾಡ್ತಿದ್ದಾರೆ ಪುನೀತ್ ಮತ್ತು ದಿನಕರ್ ತೂಗುದೀಪ | Filmibeat Kannada

ದರ್ಶನ್ ಸಹೋದರ ದಿನಕರ್ ತೂಗುದೀಪ ಅವರು ಪುನೀತ್ ರಾಜ್‌ಕುಮಾರ್ ಅವರಿಗಾಗಿ ಸಿನಿಮಾ ನಿರ್ದೇಶಿಸುವುದು ಖಾತ್ರಿಗೊಂಡಿದ್ದು, ಆ ಸಿನಿಮಾವನ್ನು ಜಯಣ್ಣ-ಭೋಗೇಂದ್ರ ಅವರು ನಿರ್ಮಾಣ ಮಾಡಲಿದ್ದಾರೆ.

ಪುನೀತ್ ನಟಿಸಿದ್ದ 'ಪರಮಾತ್ಮ' ಸಿನಿಮಾಕ್ಕೆ ಜಯಣ್ಣ-ಭೋಗೇಂದ್ರ ಬಂಡವಾಳ ಹೂಡಿದ್ದರು. ಇದೀಗ ಎರಡನೇ ಬಾರಿ ಪುನೀತ್ ಸಿನಿಮಾ ನಿರ್ಮಿಸುತ್ತಿದ್ದಾರೆ ಇವರು. ದರ್ಶನ್ ನಟನೆಯ 'ಅರ್ಜುನ್' ಸಿನಿಮಾದ ಮೂಲಕವೇ ಸಿನಿಮಾ ನಿರ್ಮಾಣ ಆರಂಭಿಸಿತ್ತು ಈ ಜೋಡಿ.

Puneeth Rajkumar, Dinakar Thoogudeepa to collaborate

ಪುನೀತ್ ರಾಜ್‌ಕುಮಾರ್ ನಟನೆಯ 'ಯುವರತ್ನ' ಏಪ್ರಿಲ್ 1 ರಂದು ಬಿಡುಗಡೆ ಆಗಲಿದೆ. ಪ್ರಸ್ತುತ ಸಿನಿಮಾದ ಪ್ರಚಾರ ಕಾರ್ಯದಲ್ಲಿ ಪುನೀತ್ ಬ್ಯುಸಿಯಾಗಿದ್ದಾರೆ. ಇದನ್ನು ಹೊರತುಪಡಿಸಿ 'ಜೇಮ್ಸ್' ಸಿನಿಮಾದ ಚಿತ್ರೀಕರಣದಲ್ಲಿಯೂ ಪುನೀತ್ ತೊಡಗಿಸಿಕೊಂಡಿದ್ದಾರೆ. 'ಜೇಮ್ಸ್' ಸಿನಿಮಾದ ಬಳಿಕ ದಿನಕರ್-ಪುನೀತ್ ಸಿನಿಮಾದ ಚಿತ್ರೀಕರಣ ಪ್ರಾರಂಭವಾಗಲಿದೆ.

ಇದರ ನಡುವೆ ಸಂತೋಶ್ ಆನಂದ್‌ ರಾಮ್ ಅವರು ಪುನೀತ್‌ ಗಾಗಿ ಮೂರನೇ ಸಿನಿಮಾವನ್ನು ನಿರ್ದೇಶಿಸಲು ತಯಾರಾಗುತ್ತಿದ್ದಾರೆ. ಸುದೀಪ್ ನಟನೆಯ 'ಪೈಲ್ವಾನ್' ನಿರ್ದೇಶಿಸಿದ್ದ ಕೃಷ್ಣ ಸಹ ಪುನೀತ್ ಗಾಗಿ ಕತೆ ತಯಾರು ಮಾಡಿ ಅನುಮತಿ ಪಡೆದಿದ್ದಾರೆ. ಜೊತೆಗೆ ದಿನಕರ್ ಸಿನಿಮಾವೂ ಸೇರಿ ಮೂರು ಸಿನಿಮಾಗಳು ಪುನೀತ್ ಮುಂದೆ ಇದ್ದು ಯಾವುದನ್ನು ಮೊದಲು ಪ್ರಾರಂಭಿಸುತ್ತಾರೆ ನೋಡಬೇಕಿದೆ.

ದಿನಕರ್ ತೂಗುದೀಪ್ ಅವರು 'ಜೊತೆ-ಜೊತೆಯಲಿ' ಸಿನಿಮಾದ ಮೂಲಕ ನಿರ್ದೇಶಕರಾಗಿ ಗುರುತಿಸಿಕೊಂಡರು. ಆ ನಂತರ 'ನವಗ್ರಹ', 'ಸಾರಥಿ' ಅಂತಹಾ ಸೂಪರ್-ಡೂಪರ್ ಹಿಟ್ ನೀಡಿದ್ದಾರೆ. ಈಗ ಪುನೀತ್‌ ಗಾಗಿ ಎಂಥ ಸಿನಿಮಾ ನಿರ್ದೇಶಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

More from Filmibeat

English summary
Puneeth Rajkumar and Dinakar Thoogudeepa to colloborate for film under Jayanna Films.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X