For Quick Alerts
  ALLOW NOTIFICATIONS  
  For Daily Alerts

  ಪುನೀತ್ ರಾಜ್‌ಕುಮಾರ್ ಜೊತೆ ಕೈಜೋಡಿಸಲಿದ್ದಾರೆ ದಿನಕರ್ ತೂಗುದೀಪ್?

  |

  ದರ್ಶನ್ ಅವರ ಸಹೋದರ ದಿನಕರ್ ತೂಗುದೀಪ್ ಕನ್ನಡ ಚಿತ್ರರಂಗದ ಪ್ರತಿಭಾವಂತ ನಿರ್ದೇಶಕರಲ್ಲಿ ಒಬ್ಬರು. ಮಾಡಿರುವುದು ಕೆಲವೇ ಸಿನಿಮಾಗಳಾದರೂ ನೆನಪುಳಿಯುವಂಥಹಾ ಸಿನಿಮಾಗಳನ್ನು ನೀಡಿದ್ದಾರೆ ದಿನಕರ್.

  ದರ್ಶನ್ ಬಿಟ್ಟು ಪುನೀತ್ ಕಡೆ ಮುಖ ಮಾಡಿದ ದಿನಕರ್ | Filmibeat Kannada

  ಅಣ್ಣ ದರ್ಶನ್ ಗೆ ಎರಡು ಸೂಪರ್-ಡೂಪರ್ ಹಿಟ್ ಸಿನಿಮಾ ನೀಡಿರುವ ದಿನಕರ್ ತೂಗುದೀಪ್ ಇದೀಗ ಮತ್ತೊಬ್ಬ ಸ್ಟಾರ್ ನಟನ ಸಿನಿಮಾಕ್ಕೆ ಆಕ್ಷನ್ ಕಟ್ ಹೇಳುವುದರಲ್ಲಿದ್ದಾರೆ.

  ಹೌದು, ದಿನಕರ್ ತೂಗುದೀಪ್ ಅವರು ಸ್ಟಾರ್ ನಟ ಪುನೀತ್ ರಾಜ್‌ಕುಮಾರ್ ಅವರೊಟ್ಟ್ಇಗೆ ಸಿಸನಿಮಾ ಮಾಡುತ್ತಾರೆ ಎಂಬ ಸುದ್ದಿ ಗಾಂಧಿ ನಗರದಲ್ಲಿ ಹರಿದಾಡುತ್ತಿದೆ.

  ದಿನಕರ್ ತೂಗುದೀಪ್ ಅವರು ಲಾಕ್‌ಡೌನ್ ಅವಧಿಯಲ್ಲಿ ಚಿತ್ರಕತೆಯೊಂದನ್ನು ರಚಿಸಿದ್ದು, ಆ ಚಿತ್ರಕತೆಗೆ ಪುನೀತ್ ಅವರು ಚೆನ್ನಾಗಿ ಹೊಂದುತ್ತಾರೆಂಬ ಕಾರಣಕ್ಕೆ ಅವರೊಟ್ಟಿಗೆ ಸಿನಿಮಾ ಮಾಡುವ ಇರಾದೆಯಲ್ಲಿದ್ದಾರೆ ದಿನಕರ್ ತೂಗುದೀಪ್.

  ಪುನೀತ್ ರಾಜ್‌ಕುಮಾರ್ ನಟನೆಯ ಯುವರತ್ನ ಬಿಡುಗಡೆಗೆ ತಯಾರಾಗಿದೆ. ಇನ್ನು ಪುನೀತ್ ಅವರು ಜೇಮ್ಸ್ ಸಿನಿಮಾದ ಚಿತ್ರೀಕರಣದಲ್ಲಿ ತೊಡಗಿಕೊಂಡಿದ್ದಾರೆ. ಈ ಸಿನಿಮಾದ ಬಳಿಕ ದಿನಕರ್ ಜೊತೆಗಿನ ಸಿನಿಮಾ ಸೆಟ್ಟೇರಲಿದೆ ಎನ್ನಲಾಗುತ್ತಿದೆ.

  ದಿನಕರ್ ತೂಗುದೀಪ್ ಅವರು ಜೊತೆ-ಜೊತೆಯಲಿ, ನವಗ್ರಹ, ಸಾರಥಿ, ಲೈಫ್ ಜೊತೆ ಒಂದ್ ಸೆಲ್ಫಿ ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ. ಇದರಲ್ಲಿ ಮೊದಲ ಮೂರು ಸಿನಿಮಾಗಳು ಸೂಪರ್-ಡೂಪರ್ ಹಿಟ್ ಆಗಿವೆ.

  English summary
  Puneeth Rajkumar & Dinakar Thoogudeepa to team up for the first time for new project.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X