'ಮಾಯಾ ಬಜಾರ್' ಚಿತ್ರದಲ್ಲಿ ಪುನೀತ್ ರಾಜ್ ಕುಮಾರ್
Recommended Video
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಸದ್ಯ ಯುವರತ್ನ ಚಿತ್ರದಲ್ಲಿ ಬ್ಯುಸಿ ಇದ್ದಾರೆ. ಚಿತ್ರೀಕರಣ ಕೂಡ ಭರ್ಜರಿಯಾಗಿ ನಡೆಯುತ್ತಿದೆ. ಇದೆ ಗ್ಯಾಪಲ್ಲಿ ಅಪ್ಪು ಮಾಯಾ ಬಜಾರ್ ಚಿತ್ರದಲ್ಲೂ ಕಾಣಿಸಿಕೊಳ್ಳುತ್ತಿದ್ದಾರೆ. ಮಾಯಾ ಜಬಾರ್ ಅಪ್ಪು ನಿರ್ಮಾಣದ ಎರಡನೆ ಸಿನಿಮಾ.
ಪವರ್ ಸ್ಟಾರ್ ನಿರ್ಮಾಣದ ಸಂಸ್ಥೆ ಪಿ ಆರ್ ಕೆ ಬ್ಯಾನರ್ ನಿಂದ ಮೂಡಿ ಬರುತ್ತಿರುವ ಎರಡನೆ ಸಿನಿಮಾ. ಮಾಯಾ ಬಜಾರ್ ಗೆ ರಾಧಾಕೃಷ್ಣ ರೆಡ್ಡಿ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈಗಾಗಲೆ ಚಿತ್ರೀಕರಣ ಮುಗಿಸಿರುವ ಚಿತ್ರತಂಡ ಸದ್ಯ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿ ಬ್ಯುಸಿಯಾಗಿದ್ದಾರೆ.
ಚಿತ್ರದಲ್ಲಿ ದೊಡ್ಡ ತಾರಾಬಳಗವೆ ಇದೆ. ರಾಜ್ ಬಿ ಶೆಟ್ಟಿ, ವಸಿಷ್ಠ ಸಿಂಹ, ಸುಧಾರಾಣಿ, ಪ್ರಕಾಶ್ ರಾಜ್, ಚೈತ್ರ ರಾವ್ ಸೇರಿದಂತೆ ಸಾಕಷ್ಟು ಕಲಾವಿದರು ಬಣ್ಣ ಹಚ್ಚುತ್ತಿದ್ದಾರೆ. ಇವರ ಜೊತೆಗೀಗ ಪುನೀತ್ ರಾಜ್ ಕುಮಾರ್ ಕೂಡ ಕಾಣಿಸಿಕೊಳ್ಳುತ್ತಿದ್ದಾರೆ.

ಪುನೀತ್ ಚಿತ್ರದಲ್ಲಿ ಗೆಸ್ಟ್ ಪಾತ್ರದ ಮೂಲಕ ಎಂಟ್ರಿ ಕೊಡಲಿದ್ದಾರೆ. ಚಿತ್ರದ ಒಂದು ಪ್ರಮುಖ ಹಾಡಿನಲ್ಲಿ ಪುನೀತ್ ಕಾಣಿಸಿಕೊಳ್ಳಲಿದ್ದಾರೆ. ಈ ಹಾಡಿಗೆ ಎ ಹರ್ಷ ನೃತ್ಯ ಸಂಯೋಜನೆ ಮಾಡುತ್ತಿದ್ದಾರೆ. ಹಾಡಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಅಂದ್ಮೇಲೆ ಅಪ್ಪು ಡ್ಯಾನ್ಸ್ ಇರುತ್ತೆ ಎನ್ನುವುದು ಕುತೂಹಲ.


Click it and Unblock the Notifications











