ಸಿಎಂ ಭೇಟಿ ಮಾಡಿ ನೆರೆ ಸಂತ್ರಸ್ಥರಿಗೆ 5 ಲಕ್ಷ ಚೆಕ್ ನೀಡಿದ ಪುನೀತ್
Recommended Video
ಯಡಿಯೂರಪ್ಪ ಭೇಡಿ ಮಾಡಿ ಚೆಕ್ ನೀಡಿದ ಪುನೀತ್ ರಾಜ್ ಕುಮಾರ್..? | Puneeth Rajkumar
ಉತ್ತರ ಕರ್ನಾಟಕ ಮತ್ತು ಕರಾವಳಿ ಭಾಗದಲ್ಲಿ ಉಂಟಾದ ಪ್ರವಾಹ ಸ್ಥಿತಿಯಿಂದ ಜನರ ಜೀವನ ಅಸ್ತವ್ಯಸ್ತವಾಗಿದೆ. ಸಹಜವಾಗಿ ಕರ್ನಾಟಕ ಜನ, ರಾಜಕೀಯ ಗಣ್ಯರು, ಸಿನಿಮಾ ಇಂಡಸ್ಟ್ರಿಯವರು ನೆರೆ ಸಂತ್ರಸ್ಥರಿಗೆ ಸಹಾಯ ಮಾಡಿದ್ದಾರೆ.
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಮತ್ತು ರಿಯಲ್ ಸ್ಟಾರ್ ಉಪೇಂದ್ರ ಸಿಎಂ ಪರಿಹಾರ ನಿಧಿಗೆ ತಲಾ 5 ಲಕ್ಷ ಸಹಾಯ ನೀಡುವುದಾಗಿ ಘೋಷಿಸಿದ್ದರು.
ಈ ಹಿನ್ನೆಲೆಯಲ್ಲಿ ಕರ್ನಾಟಕ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರನ್ನ ಭೇಟಿ ಮಾಡಿದ ಪುನೀತ್ ರಾಜ್ ಕುಮಾರ್, 5 ಲಕ್ಷ ರೂಪಾಯಿ ಚೆಕ್ ನೀಡಿದ್ದಾರೆ.

ರಾಜ್ಯದಲ್ಲಿ ಯಾವುದೇ ಹೋರಾಟ, ಅಭಿಯಾನ, ಪ್ರವಾಹ ಆದಾಗ ಕನ್ನಡ ಸಿನಿಮಾ ತಾರೆಯರು ಮತ್ತು ಅವರ ಅಭಿಮಾನಿ ಸಂಘಗಳು ನೆರವಿಗೆ ಧಾವಿಸುತ್ತಾರೆ.
ಕನ್ನಡ ಇಂಡಸ್ಟ್ರಿ ಮಾತ್ರವಲ್ಲದೇ, ತಮಿಳು ನಟ ಸೂರ್ಯ ಮತ್ತು ಕಾರ್ತಿ ಸಹೋದರರು ಕೇರಳ ಮತ್ತು ಉತ್ತರ ಕರ್ನಾಟಕಕ್ಕೆ 10 ಲಕ್ಷ ನೀಡಿದ್ದಾರೆ. ಮತ್ತೊಬ್ಬ ತೆಲುಗು ನಟ ಸಂಪೂರ್ಣೇಶ್ ಬಾಬು ಕೂಡ ಉತ್ತರ ಕರ್ನಾಟಕಕ್ಕೆ 2 ಲಕ್ಷ ನೆರವು ನೀಡಿದ್ದಾರೆ.
More from Filmibeat
English summary
Kannada actor puneeth rajkumar donate 5 lakh rupees to chief minister relief fund for uttara karnataka flood.


Click it and Unblock the Notifications











