'ನಟ ಸಾರ್ವಭೌಮ' ಡಬ್ಬಿಂಗ್ ನಲ್ಲಿ ಪುನೀತ್ ಬ್ಯುಸಿ
Recommended Video

Natasaarvabhowma : ದಬ್ಬಿಂಗ್‌ನಲ್ಲಿ ಬ್ಯುಸಿ ಆದ ಪುನೀತ್ ರಾಜ್‌ಕುಮಾರ್ ..! | Filmibeat Kannada
ನಟ ಪುನೀತ್ ರಾಜ್ ಕುಮಾರ್ ಸದ್ಯ ತಮ್ಮ 'ನಟ ಸಾರ್ವಭೌಮ' ಸಿನಿಮಾದಲ್ಲಿ ಬ್ಯುಸಿ ಇದ್ದಾರೆ. ಈ ಚಿತ್ರದ ಡಬ್ಬಿಂಗ್ ಕೆಲಸಗಳು ಇದೀಗ ನಡೆಯುತ್ತಿದೆ.
ಇತ್ತೀಚಿಗೆ ಸಿನಿಮಾದ ಶೂಟಿಂಗ್ ಗಾಗಿ ಕೊಲ್ಕತ್ತಾಗೆ ಅಪ್ಪು ಅಂಡ್ ಟೀಂ ಹೋಗಿತ್ತು. ಅಲ್ಲಿಯ ಚಿತ್ರೀಕರಣ ಮುಗಿದ ನಂತರ ಈಗ ಡಬ್ಬಿಂಗ್ ಶುರುವಾಗಿದೆ. ಪುನೀತ್ ಸದ್ಯ ಡಬ್ಬಿಂಗ್ ನಲ್ಲಿ ತೊಡಗಿದ್ದಾರೆ.
'ನಟ ಸಾರ್ವಭೌಮ' ಪುನೀತ್ ರಾಜ್ ಕುಮಾರ್ ಹಾಗೂ ಪವನ್ ಒಡೆಯರ್ ಕಾಂಬಿನೇಶನ್ ನ ಎರಡನೇ ಸಿನಿಮಾವಾಗಿದೆ. ರಾಕ್ ಲೈನ್ ವೆಂಕಟೇಶ್ ಈ ಚಿತ್ರದ ನಿರ್ಮಾಣ ಮಾಡುತ್ತಿದ್ದಾರೆ. ರಚಿತಾ ರಾಮ್ ಸಿನಿಮಾದ ನಾಯಕಿ ಆಗಿದ್ದಾರೆ. ಮಲೆಯಾಳಂ ನಟಿ ಅನುಪಮ ಪರಮೇಶ್ವರನ್ ಈ ಸಿನಿಮಾದ ಮೂಲಕ ಕನ್ನಡಕ್ಕೆ ಕಾಲಿಡುತ್ತಿದ್ದಾರೆ.

ಇತ್ತೀಚಿಗಷ್ಟೆ, ಚಿತ್ರದ ಹಾಡಿನ ರೆಕಾರ್ಡಿಂಗ್ ನಡೆದಿದ್ದು, ವಿಜಯ ಪ್ರಕಾಶ್ ಹಾಗೂ ಶ್ರೇಯಾ ಘೋಷಲ್ ಹಾಡಿಗೆ ಧ್ವನಿಯಾಗಿದ್ದಾರೆ. ಈ ವರ್ಷದ ಕೊನೆ ಅಥವಾ ಮುಂದಿನ ವರ್ಷದ ಪ್ರಾರಂಭದಲ್ಲಿ ಚಿತ್ರ ತೆರೆಗೆ ಬರುವ ಸಾಧ್ಯತೆ ಇದೆ.
English summary
Power Star Puneet Rajkumar dubbing for 'Nata Sarwabouma' Kannada movie.
puneeth rajkumar pawan wadeyar rachita ram sandalwood kannada movies ಪುನೀತ್ ರಾಜ್ ಕುಮಾರ್ ರಚಿತಾ ರಾಮ್ ಸ್ಯಾಂಡಲ್ ವುಡ್ ಕನ್ನಡ ಸಿನಿಮಾ


Click it and Unblock the Notifications