ಅಭಿಮಾನಿಗಳಿಗಾಗಿ ಸಿಡಿದೆದ್ದಿದ್ದ ಪವರ್ ಸ್ಟಾರ್.! ಅಪ್ಪು ವಾರ್ನ್ ಮಾಡಿದ್ದು ಯಾರಿಗೆ.?

Recommended Video

ಅಭಿಮಾನಿಗಳಿಗಾಗಿ ಸಿಡಿದೆದ್ದ ಪುನೀತ್ ರಾಜ್ ಕುಮಾರ್ | FILMIBEAT KANNADA

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಕನ್ನಡದ ಸವ್ಯಸಾಚಿ ನಟ. ಯಾವುದೇ ವಿವಾದ, ಯಾವುದೇ ಗಾಸಿಪ್, ಯಾವುದೇ ಹೇಳಿಕೆಗಳಿಗೂ ನಿಲುಕದ ನಟ. ಅಣ್ಣಾವ್ರ ಹಾದಿಯಲ್ಲೇ ಸಾಗುತ್ತಿರುವ ಅಪ್ಪು, ಅಭಿಮಾನಿಗಳ ಪಾಲಿಗೆ ರಾಜಕುಮಾರ.

ಯಾವುದೇ ಕಾರ್ಯಕ್ರಮಕ್ಕೆ ಹೋದ್ರು ಅಲ್ಲಿನ ವಿಷ್ಯ ಬಿಟ್ಟು ಬೇರೆ ಮಾತನಾಡಲ್ಲ. ಮಾತನಾಡಿದ್ರು ಒಂದೇ ಪದದ ಉತ್ತರ ಅವರಿಂದ ಬರುತ್ತೆ. ಈಗಲೂ ಮುಗ್ದ ಮನಸ್ಸಿನ ಹುಡುಗನಂತೆ ನಡೆದುಕೊಳ್ಳುವ ಪುನೀತ್, ದೊಡ್ಡವರನ್ನ ಗೌರವಿಸುತ್ತಾ, ಕಿರಿಯರನ್ನ ಪ್ರೋತ್ಸಾಹಿಸುತ್ತಾ ಬಂದಿದ್ದಾರೆ.

ಇಂತಹ ಪುನೀತ್ ರಾಜ್ ಕುಮಾರ್ ಇತ್ತೀಚಿಗಷ್ಟೆ ಆಕ್ರೋಶಗೊಂಡಿದ್ದರು. ಹಿಂದೆಂದೂ ಕಾಣದ ರೀತಿಯಲ್ಲಿ ಯಾರಾ ಮೇಲೋ ತಮ್ಮ ಬೇಸರ ವ್ಯಕ್ತಪಡಿಸಿದ್ದರು. ಅದು ಅಭಿಮಾನಿಗಳ ಪರವಾಗಿ ಎನ್ನುವುದು ಭಾರಿ ಚರ್ಚೆಗೆ ಕಾರಣವಾಗಿದೆ. ಅಷ್ಟಕ್ಕೂ, ಅಪ್ಪು ಸಿಡಿದೆದ್ದಿದ್ದು ಯಾಕೆ.? ಮುಂದೆ ಓದಿ......

ದೇವರು ಒಳ್ಳೆಯದು ಮಾಡಲ್ಲ

ದೇವರು ಒಳ್ಳೆಯದು ಮಾಡಲ್ಲ

ಸಂತೋಷ್ ಆನಂದ್ ರಾಮ್ ಮತ್ತು ಪುನೀತ್ ರಾಜ್ ಕುಮಾರ್ ಜೋಡಿಯಲ್ಲಿ ಬರುತ್ತಿರುವ ಹೊಸ ಸಿನಿಮಾ ಟೈಟಲ್ ಲಾಂಚ್ ಕಾರ್ಯಕ್ರಮದಲ್ಲಿ ಅಪ್ಪು ಭಾಗಿಯಾಗಿದ್ದರು. ವೇದಿಕೆ ಮೇಲೆ ಬಂದ ಪುನೀತ್ 'ಯುವರತ್ನ' ಸಿನಿಮಾ ಬಗ್ಗೆ ಮಾತನಾಡುತ್ತಿದ್ದರು. ಆದ್ರೆ, ಈ ಮಧ್ಯೆ ಏನ್ ಆಯ್ತೋ ಗೊತ್ತಿಲ್ಲ. 'ಅಭಿಮಾನಿಗಳ ಬಗ್ಗೆ ಮಾತಾಡಿದ್ರೆ ದೇವರು ಒಳ್ಳೆಯದು ಮಾಡಲ್ಲ' ಎಂದು ದೊಡ್ಡ ಧ್ವನಿಯಲ್ಲಿ ಹೇಳಿದರು.

ಅಭಿಮಾನಿಗಳನ್ನ ನಿಂದಿಸಿದವರಿಗೆ ವಾರ್ನ್.!

ಅಭಿಮಾನಿಗಳನ್ನ ನಿಂದಿಸಿದವರಿಗೆ ವಾರ್ನ್.!

ಅಪ್ಪು ಹೇಳಿದ ಈ ಮಾತಿನಲ್ಲಿ ಯಾರಿಗೋ ಎಚ್ಚರಿಕೆ ನೀಡಿದ್ದಂತಿತ್ತು. ಆದ್ರೆ, ಅದು ಯಾರಿಗೆ ಎಂಬುದು ಗೊತ್ತಿಲ್ಲ. ಬಟ್, ಪುನೀತ್ ಅವರ ಆವೇಶದ ಮಾತು ಒಂದು ಕ್ಷಣ ಅಭಿಮಾನಿಗಳನ್ನ ಹಾಗೂ ವೇದಿಕೆಯಲ್ಲಿದ್ದವರಿಗೆ ಅಚ್ಚರಿ ಉಂಟು ಮಾಡಿತು. ಅಭಿಮಾನಿಗಳನ್ನ ಬೈಯ್ದಿದ್ದ ಮತ್ತು ನಿಂದಿಸಿದವರಿಗೆ ವಾರ್ನ್ ಮಾಡಿದಂತಿತ್ತು.

ಇತಿಹಾಸ ನೋಡ್ಬೇಕು

ಇತಿಹಾಸ ನೋಡ್ಬೇಕು

'ಇತಿಹಾಸದಲ್ಲಿ ಏನಿದೆ, ಪ್ರೀತಿ ವಿಶ್ವಾಸ ಎಷ್ಟು ವರ್ಷದಿಂದ ನಡೆದುಕೊಂಡು ಬಂದಿದೆ ಎಂಬುದನ್ನ ನೋಡಬೇಕು' ಎಂಬ ಮಾತನ್ನ ಪುನೀತ್ ರಾಜ್ ಕುಮಾರ್ ಹೇಳಿದ್ದಾರೆ. ಈ ಮಾತಿನ ಅರ್ಥ ಏನು ಎಂಬುದು ಯಾರಿಗೂ ಗೊತ್ತಿಲ್ಲ. ಆದ್ರೆ, ಸದ್ಯದ ಬೆಳವಣಿಗೆಯಲ್ಲಿ ಯಾವುದು ಒಂದು ಘಟನೆ ಅಪ್ಪುಗೆ ಬೇಸರ ತರಿಸಿದೆ ಎಂಬುದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ.

ನಾವು ಏನೂ ಕೊಟ್ಟಿಲ್ಲ

ನಾವು ಏನೂ ಕೊಟ್ಟಿಲ್ಲ

ನೀವು ನಮ್ಮ ಕುಟುಂಬದ ಮೇಲೆ ಇಟ್ಟಿರುವ ಪ್ರೀತಿಗೆ ನಾವು ನಿಮಗೋಸ್ಕರ ಏನೂ ಮಾಡಿಲ್ಲ. ಮಾಡಿರೋದು ತುಂಬಾ ಕಮ್ಮಿ. ಆದ್ರೆ, ತಂದೆಯವರ ವ್ಯಕ್ತಿತ್ವ ಹಾಗೂ ನಾವು ನಿಮ್ಮ ಮೇಲೆ ಇಟ್ಟಿರುವ ಗೌರವ ಇರಬಹುದು ಸ್ವಲ್ಪ ಕಮ್ಮಿಯೂ ಆಗಿಲ್ಲ. ನಿಮ್ಮ ಪ್ರೀತಿ-ವಿಶ್ವಾಸವನ್ನ ನಮ್ಮ ಕುಟುಂಬ ಯಾವತ್ತೂ ಮರೆಯಲ್ಲ ಎಂದು ಪುನೀತ್ ಭಾವನಾತ್ಮಕವಾಗಿ ಹೇಳಿಕೊಂಡರು.

More from Filmibeat

English summary
Powerstar Puneeth rajkumar express his displeasure in yuvaratna title launch event.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X