twitter
    For Quick Alerts
    ALLOW NOTIFICATIONS  
    For Daily Alerts

    ಅಪ್ಪುಗೇ ಅಚ್ಚರಿ ಹುಟ್ಟಿತ್ತು ಈ ಮಗುವಿನ ನೆನಪಿನ ಶಕ್ತಿ

    |

    ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ತೆರೆಮೇಲೆಷ್ಟೇ ಸ್ಟಾರ್ ಅಲ್ಲ. ತೆರೆ ಹಿಂದೆನೂ ಸೂಪರ್‌ಸ್ಟಾರ್ ಅಂತ ಸಾಭೀತುಪಡಿಸಿದ ನಟ. ಬಲಗೈಯಲ್ಲಿ ಕೊಟ್ಟಿದ್ದು ಎಡಗೈಗೆ ಗೊತ್ತಾಗದ ಹಾಗೆ ಸಹಾಯ ಹಸ್ತ ಚಾಚಿದ ಉದಾಹರಣೆಗಳು ಸಾಕಷ್ಟಿವೆ. ಕಷ್ಟ ಎಂದು ಬಂದವರಿಗೆ ನೆರವಾಗಿದ್ದಾರೆ. ಹೊಸ ಹೊಸ ಪ್ರತಿಭೆಗಳನ್ನು ಗುರುತಿಸಿ ತಮ್ಮದೇ ನಿರ್ಮಾಣ ಸಂಸ್ಥೆಯಿಂದ ಸಿನಿಮಾ ಮಾಡಲು ಅವಕಾಶ ನೀಡಿದ್ದಾರೆ. ಮಕ್ಕಳಿಂದ ಹಿಡಿದು ಹಿರಿಯರವರೆಗೂ ಪುನೀತ್ ತನ್ನ ಕೈಲಾದ ಸಹಾಯ ಮಾಡಿ, ಉತ್ತೇಜನ ನೀಡಿದ್ದಾರೆ.

    ಇಲ್ಲೊಬ್ಬ ಮಗುವಿನ ಕಥೆಯೂ ಹಾಗೇ ಇದೆ. ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಆರು ವರ್ಷದ ಪುಣಾಣಿ ಶ್ರೀಶಾಳ ಬುದ್ದಿ ಸಾಮರ್ಥ್ಯದ ಕಥೆಯಿದು. ಇನ್ನೂ ತೊದಲು ನುಡಿಯುತ್ತಿರುವ ಈ ಪೋರಿಯ ಜ್ಞಾನ ಹಾಗೂ ನೆನಪಿನ ಶಕ್ತಿ ಅಸಾಧಾರಣವಾದದ್ದು. ಈ ಬಾಲಕಿಯ ನೆನಪಿನ ಶಕ್ತಿಯನ್ನು ಕಂಡು ಸ್ವತಃ ಪುನೀತ್ ರಾಜ್‌ಕುಮಾರ್ ಬೆರಗಾಗಿದ್ದರು. ಶ್ರೀಶಾಳನ್ನು ತನ್ನ ಕಚೇರಿಗೆ ಕರೆಸಿಕೊಂಡು ಭೇಟಿ ಮಾಡಿದ್ದರು.

    ಬಿಡದೇ ಕಾಡುತ್ತಿದೆ ಅಪ್ಪು ಸಾವು: ಕಿರಿಯವನೆ ಬಿಟ್ಟು ಹೋದ ಎಂದು ರಾಘಣ್ಣ ಭಾವುಕ!ಬಿಡದೇ ಕಾಡುತ್ತಿದೆ ಅಪ್ಪು ಸಾವು: ಕಿರಿಯವನೆ ಬಿಟ್ಟು ಹೋದ ಎಂದು ರಾಘಣ್ಣ ಭಾವುಕ!

    ಅಣ್ಣಾವ್ರ 206 ಸಿನಿಮಾಗಳನ್ನು ಪಟಪಟನೇ ಹೇಳಿದ್ದ ಬಾಲಕಿ

    ಅಣ್ಣಾವ್ರ 206 ಸಿನಿಮಾಗಳನ್ನು ಪಟಪಟನೇ ಹೇಳಿದ್ದ ಬಾಲಕಿ

    ಶ್ರೀಶಾ ತಾಯಿ ಕೀರ್ತಿ ಮುದಗೊಣ್ಣವರ್ ಮಗಳ ಒಂದು ವೀಡಿಯೋವನ್ನು ಫೇಸ್ ಬುಕ್‌ನಲ್ಲಿ ಪೋಸ್ಟ್ ಮಾಡಿದ್ದರು. ಈ ವೀಡಿಯೋದಲ್ಲಿ ಡಾ.ರಾಜ್‌ಕುಮಾರ್ ನಟಿಸಿದ 206 ಸಿನಿಮಾಗಳ ಹೆಸರುಗಳನ್ನು ಶ್ರೀಶಾ ಒಂದೇ ಏಟಿಗೆ ಹೇಳಿದ್ದಳು. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಧಾರವಾಡದ ಲೋಕಲ್ ಚಾನಲ್‌ಗಳಲ್ಲೂ ಪ್ರಸಾರ ಆಗಿತ್ತು. ಆಗ ರಾಜ್‌ಕುಮಾರ್ ಅಭಿಮಾನಿಗಳು ಶ್ರೀಶಾಳನ್ನು ಬೆಂಗಳೂರಿಗೆ ಕರೆಸಿಕೊಂಡು ಸನ್ಮಾನ ಮಾಡಿದ್ದರು. ಈ ವಿಷಯವನ್ನು ಅಭಿಮಾನಿಗಳು ಪುನೀತ್ ರಾಜ್‌ಕುಮಾರ್ ಅವರಿಗೆ ತಿಳಿಸಿದ್ದರು. ಈ ವಿಷಯ ತಿಳಿಯುತ್ತಿದ್ದಂತೆ ಖುದ್ದು, ಅಪ್ಪುನೇ ತಮ್ಮ ಕಚೇರಿಗೆ ಕರೆಸಿಕೊಂಡಿದ್ದರು.

    ಶ್ರೀಶಾ ನೆನಪಿನ ಶಕ್ತಿ ಕಂಡು ಬೆರಗಾಗಿದ್ದ ಪುನೀತ್

    ಶ್ರೀಶಾ ನೆನಪಿನ ಶಕ್ತಿ ಕಂಡು ಬೆರಗಾಗಿದ್ದ ಪುನೀತ್

    ಪುನೀತ್ ರಾಜ್‌ಕುಮಾರ್ ಕೆರೆ ಮೇಲೆ ಶ್ರೀಶಾ ಹಾಗೂ ಆಕೆಯ ಪೋಷಕರು ಪಿಆರ್‌ಕೆ ಕಚೇರಿಗೆ ಹೋಗಿದ್ದರು. ಆ ವೇಳೆ ಪ್ರೀತಿಯಿಂದ ಮಾತಾಡಿಸಿದ್ದ ಅಪ್ಪು, ಶ್ರೀಶಾಳ ನೆನಪಿನ ಶಕ್ತಿ ಕಂಡು ಬೆರಗಾಗಿದ್ದರು. ಪುನೀತ್ ರಾಜ್‌ಕುಮಾರ್ ಮುಂದೆ ಬಾಲಕಿ ಅಣ್ಣಾವ್ರು ನಟಿಸಿದ 206 ಸಿನಿಮಾಗಳ ಹೆಸರನ್ನು ಪಟಪಟನೇ ಒಪ್ಪಿಸಿದ್ದಳು. ಶ್ರೀಶಾಳ ಈ ಪ್ರತಿಭೆ ಮೆಚ್ಚಿ ಪುನೀತ್ ರಾಜ್‌ಕುಮಾರ್ ಹೊಗಳಿ ಕೊಂಡಿದ್ದರು.

    ಚಾಕೋಲೆಟ್ ಬಾಕ್ಸ್ ಹಾಗೂ ಆಟೋಗ್ರಾಫ್ ನೀಡಿದ್ದ ಅಪ್ಪು

    ಚಾಕೋಲೆಟ್ ಬಾಕ್ಸ್ ಹಾಗೂ ಆಟೋಗ್ರಾಫ್ ನೀಡಿದ್ದ ಅಪ್ಪು

    ಈ ವರ್ಷ ಆಗಸ್ಟ್ 20 ರಂದು ಪುನೀತ್ ರಾಜ್‌ಕುಮಾರ್ ಮೆಮೋರಿ ಕಿಡ್ ಶ್ರೀಶಾಳನ್ನು ಭೇಟಿಯಾಗಿದ್ದರು. ಸುಮಾರು ಅರ್ಧ ಗಂಟೆಗಳ ಕಾಲ ಈ ಮಗುವಿನೊಂದಿಗೆ ಕಾಲ ಕಳೆದಿದ್ದರು. ಶ್ರೀಶಾ ಹಾಗೂ ಆಕೆಯ ತಮ್ಮನಿಗೆ ಚಾಕೋಲೆಟ್ ಬಾಕ್ಸ್ ನೀಡಿದ್ದರು. ಜೊತೆಗೆ ತಾವೇ ಖುದ್ಧಾಗಿ ಯುವರತ್ನ ಚಿತ್ರದ ನೋಟ್ ಪ್ಯಾಡ್‌ನಲ್ಲಿ ತಮ್ಮ ಆಟೋಗ್ರಾಫ್ ನೀಡಿ, ಉಡುಗೊರೆಯಾಗಿ ಬ್ಯಾಗ್ ಸಹ ನೀಡಿದ್ದರು. ಅಂದು ಪುನೀತ್ ರಾಜ್‌ಕುಮಾರ್ ಅವ್ರೊಂದಿಗೆ ಕಳೆದ ಆ ನೆನಪುಗಳನ್ನು ಶ್ರೀಶಾ ಇಂದಿಗೂ ನೆನಪಿಸಿಕೊಳ್ಳುತ್ತಾಳೆ.

    ಸಿನಿಮಾದಲ್ಲಿ ನಟಿಸಲು ಆಹ್ವಾನ ನೀಡಿದ್ದ ದೊಡ್ಮನೆ ಮಗ

    ಸಿನಿಮಾದಲ್ಲಿ ನಟಿಸಲು ಆಹ್ವಾನ ನೀಡಿದ್ದ ದೊಡ್ಮನೆ ಮಗ

    ಶ್ರೀಶಾಳಿಗೆ ಸಿನಿಮಾದಲ್ಲಿ ನಟಿಸುವಂತೆ ಆಫರ್ ಕೂಡ ಕೊಟ್ಟಿದ್ದರು. "ಅಣ್ಣಾವ್ರ 206 ಸಿನಿಮಾಗಳ ಹೆಸರನ್ನೂ ಹೇಳುವ ಒಂದು ವಿಡಿಯೊ ಮಾಡಿ ಕಳಿಸಿ, ನಾವು ಮುಂದಿನ ಸಿನಿಮಾದಲ್ಲಿ ಶ್ರೀಶಾಳಿಗಾಗಿಯೇ ಒಂದು ಪಾತ್ರವನ್ನು ಸೃಷ್ಟಿಸುತ್ತೇವೆ. ಆಗ ಹೇಳಿ ಕಳುಹಿಸುತ್ತೇನೆ ಬನ್ನಿ" ಅಂತ ಶ್ರೀಶಾ ಪೋಷಕರಿಗೆ ಭರವಸೆ ನೀಡಿದ್ದರು. ಅಂದು ಪುನೀತ್ ರಾಜ್‌ಕುಮಾರ್ ಮಾಡಿದ ಸತ್ಕಾರವನ್ನು ಇಂದು ನೆನಪಿಸಿಕೊಂಡು ಭಾವುಕರಾಗುತ್ತಾರೆ ಶ್ರೀಶಾ ಅಮ್ಮ ಕೀರ್ತಿ ಮುದಗೊಣ್ಣವರ್.

    ಹೊರ ರಾಜ್ಯದಲ್ಲೂ ಶ್ರೀಶಾ ಮೆಮೋರಿ ಕಿಡ್ ಶ್ರೀಶಾ ಸಾಧನೆ!

    ಹೊರ ರಾಜ್ಯದಲ್ಲೂ ಶ್ರೀಶಾ ಮೆಮೋರಿ ಕಿಡ್ ಶ್ರೀಶಾ ಸಾಧನೆ!

    ಶ್ರೀಶಾ ಭಾರತದ ಇದುವರೆಗಿನ ರಾಷ್ಟ್ರಪತಿಗಳು, ಪ್ರಧಾನ ಮಂತ್ರಿಗಳು, ಭಾರತ ರತ್ನ ಪ್ರಶಸ್ತಿ ವೀಜೇತರು, ನೋಬೆಲ್ ಪ್ರಶಸ್ತಿ ವಿಜೇತರು, ವಿಶ್ವ ಸದಸ್ಯತ್ವ ಹೊಂದಿರುವ ದೇಶಗಳು, ಕರ್ನಾಟಕದ ವಿಶ್ವವಿದ್ಯಾಲಯಗಳ ಪಟ್ಟಿ, ಹಾಗೂ ಕರ್ನಾಟಕವನ್ನಾಳಿದ ರಾಜ ಮನೆತಗಳು ಸೇರಿದಂತೆ ಅನೇಕ ವಿಷಯಗಳ ಬಗ್ಗೆ ಅಪಾರ ಜ್ಞಾನ ಹೊಂದಿದ್ದಾಳೆ. ಈ ಬಾಲಕಿಯು ಯಾವುದೇ ಪ್ರಶ್ನೆ ಕೇಳಿದರೂ ಪಟಪಟನೆ ಉತ್ತರ ನೀಡುತ್ತಾಳೆ. ಶ್ರೀಶಾಳ ಅಗಾಧವಾದ ಬುದ್ದಿ ಸಾಮರ್ಥ್ಯದ ಸಾಧನೆಯನ್ನು ಗುರುತಿಸಿ ದಿ ಯುನಿವರ್ಸಲ್‌ ತಮಿಳ್ ಯುನಿರ್ವಸಿಟಿಯು ಗೌರವ ಡಾಕ್ಟರೇಟ್ ನೀಡಿದೆ.

    English summary
    Power Star Puneeth Rajkumar expressed wonder on 6 year old Shrisha's memory.
    Saturday, November 6, 2021, 14:35
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X