ಪುನೀತ್ ಹುಟ್ಟುಹಬ್ಬ ಆಚರಣೆ ವೇಳೆ ಅಭಿಮಾನಿ ಸಾವು

By ಮೈಸೂರು ಪ್ರತಿನಿಧಿ

ಪುನೀತ್ ರಾಜ್‌ಕುಮಾರ್ ಅಕಾಲಿಕ ಮರಣ ಈಗಲೂ ಅಭಿಮಾನಿಗಳ ಹೃದಯವನ್ನು ಹಿಂಡುತ್ತದೆ. ನಿನ್ನೆ ಅಪ್ಪು ಹುಟ್ಟುಹಬ್ಬ, ಅಪ್ಪು ಕಾಲವಾದ ಬಳಿಕ ಆಚರಿಸಲಾಗುತ್ತಿರುವ ಮೊದಲ ಹುಟ್ಟುಹಬ್ಬ ಇದು. ಇದು ಅಭಿಮಾನಿಗಳ ಹೃದಯವನ್ನು ಇನ್ನಷ್ಟು ಹಿಂಡುತ್ತಿದೆ.

ಪುನೀತ್ ರಾಜ್‌ಕುಮಾರ್ ಅವರ ಹುಟ್ಟುಹಬ್ಬವನ್ನು ನಾಡಿನಾದ್ಯಂತ ಅಭಿಮಾನಿಗಳು ಆಚರಣೆ ಮಾಡಿದ್ದಾರೆ. ವಿಷಾಧದ ಭಾವದಿಂದಲೇ ಹುಟ್ಟುಹಬ್ಬ ಆಚರಣೆ ನಡೆದಿದೆ. ಕಣ್ಣೀರು ಹಾಕುತ್ತಾ ಕೇಕ್ ಕತ್ತರಿಸುತ್ತಿರುವ ದೃಶ್ಯಗಳು ಅಲ್ಲಲ್ಲಿ ಕಂಡು ಬಂದಿವೆ. ಹೀಗೆ ಮೈಸೂರಿನಲ್ಲಿ ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬ ಆಚರಣೆ ವೇಳೆಯೇ ಅಭಿಮಾನಿಯೊಬ್ಬ ಹೃದಯಾಘಾತದಿಂದ ಮೃತಪಟ್ಟಿದ್ದಾನೆ.

ನಂಜನಗೂಡು ತಾಲೂಕಿನ ಹೆಡಿಯಾಲ ಗ್ರಾಮದಲ್ಲಿ ನಡೆದ ಈ ಘಟನೆ. ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬದ ಸಂಭ್ರಮಾಚರಣೆಯಲ್ಲಿದ್ದ ವೇಳೆ ಅಭಿಮಾನಿಯೊಬ್ಬ ತೀವ್ರ ಹದಯಾಘಾತದಿಂದ ಮತಪಟ್ಟಿದ್ದಾನೆ.

Puneeth Rajkumar Fan Dies From Heart Attack While Celebrating His Birthday

ಹೆಡಿಯಾಲ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಂಜುಳಾ ಹಾಗೂ ಮಲ್ಲಿಕಾರ್ಜುನ ದಂಪತಿ ಪುತ್ರ ಆಕಾಶ್(22) ಮೃತ ದುರ್ದೈವಿ. ಗುರುವಾರ ಪುನೀತ್‌ರಾಜಕುಮಾರ್ ಹುಟ್ಟು ಹಬ್ಬ ಹಾಗೂ 'ಜೇಮ್ಸ್' ಚಿತ್ರದ ಬಿಡುಗಡೆಯ ಸಂಭ್ರಮವನ್ನು ಸಂಜೆ ಗ್ರಾಮದಲ್ಲಿ ಸಡಗರ ಸಂಭ್ರಮದೊಂದಿಗೆ ಆಚರಿಸಲಾಗುತ್ತಿತ್ತು. ಈ ವೇಳೆ ಕೆಲ ಯುವಕರ ಜೊತೆಗೂಡಿ ಡಿಜೆ ಸೌಂಡ್‌ಗೆ ನತ್ಯ ಮಾಡುತ್ತಿದ್ದ ಆಕಾಶ್ ಏಕಾಏಕಿ ಕುಸಿದು ಬಿದ್ದಿದ್ದಾನೆ. ತಕ್ಷಣ ಸ್ಥಳೀಯರು ಆತನನ್ನು ಸಮೀಪದ ಸರಗೂರಿನ ಖಾಸಗಿ ಆಸ್ಪತ್ರೆಗೆ ಸೇರಿಸಲಾಯಿತು. ಅಷ್ಟರಾಗಲೇ ಆತ ಹದಯಾಘಾತದಿಂದ ಮತಪಟ್ಟಿದ್ದಾನೆ ಎಂಬ ಮಾಹಿತಿಯನ್ನು ವೈದ್ಯರು ದೃಢೀಕರಿಸಿದರು.

ಯುವಕ ಆಕಾಶ್ ಹಠಾತ್ ನಿಧನ ಸುದ್ದಿ ತಿಳಿದು ಇಡೀ ಗ್ರಾಮದಲ್ಲಿ ನೀರವ ವೌನ ಆವರಿಸಿತ್ತು. ಶುಕ್ರವಾರ ಮಧ್ಯಾಹ್ನ ಸ್ವಗ್ರಾಮದ ಜಮೀನಿನಲ್ಲಿ ಅಂತ್ಯಕ್ರಿಯೆ ನೆರವೇರಿತು. ಈ ಕುರಿತು ಯಾವುದೇ ಪೊಲೀಸ್ ದೂರು ದಾಖಲಾಗಿಲ್ಲ.

ಪುನೀತ್ ಕಾಲವಾದ ಸಮಯದಲ್ಲಿ ರಾಜ್ಯದಲ್ಲಿ ಸುಮಾರು 12 ಕ್ಕೂ ಹೆಚ್ಚು ಮಂದಿ ಅಭಿಮಾನಿಗಳು ಸಾವನ್ನಪ್ಪಿದ್ದರು. ಅದರಲ್ಲಿ ಕೆಲವರು ಆತ್ಮಹತ್ಯೆ ಮಾಡಿಕೊಂಡರೆ ಇನ್ನು ಕೆಲವರು ಆಘಾತದಿಂದ ಮೃತಪಟ್ಟಿದ್ದರು.

More from Filmibeat

English summary
Puneeth Rajkumar fan dies from heart attack while celebrating his birthday in Mysore Nanjangudu's Hediyala village.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X