ಮೊಣಕೈನಲ್ಲಿ ಅಪ್ಪು ಚಿತ್ರ ಬಿಡಿಸಿದ ಕಲಾವಿದ: ಪುನೀತ್ ದಿಲ್ ಖುಷ್
''ಕಲೆಗೆ ಬೆಲೆ ಕಟ್ಟೋದಕ್ಕೆ ಆಗಲ್ಲ ನಿಜ, ಆದರೆ ಅಭಿಮಾನಿಗಳ ಪ್ರೀತಿಗೂ ಬೆಲೆ ಕಟ್ಟೋದಕ್ಕೆ ಆಗಲ್ಲ'' ಎಂದು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿಮಾನಿಯೊಬ್ಬನ ಅಭಿಮಾನಕ್ಕೆ ಮನಸೋತಿದ್ದಾರೆ.
ತನ್ನ ಮೊಣಕೈ ಬಳಸಿಕೊಂಡು ತನ್ನ ಚಿತ್ರ ಬಿಡಿಸಿದ ಕಲಾವಿದನ ಪ್ರತಿಭೆ ಕಂಡು ಪವರ್ ಸ್ಟಾರ್ ಖುಷ್ ಆಗಿದ್ದು, ಆ ಅಭಿಮಾನಿಗೆ ಥ್ಯಾಂಕ್ಸ್ ಹೇಳಿದ್ದಾರೆ.
ಪುನೀತ್ ಚಿತ್ರ ಬಿಡಿಸುತ್ತಿರುವ ಅಭಿಮಾನಿಯ ವಿಡಿಯೋವನ್ನು ತಮ್ಮ ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿರುವ ಅಪ್ಪು ''ಕಲೆಗೆ ಬೆಲೆ ಕಟ್ಟೋದಕ್ಕೆ ಆಗಲ್ಲ ನಿಜ, ಆದರೆ ಅಭಿಮಾನಿಗಳ ಪ್ರೀತಿಗೂ ಬೆಲೆ ಕಟ್ಟೋದಕ್ಕೆ ಆಗಲ್ಲ, ಮಾತುಗಳಲ್ಲಿ ಅಂತೂ ಏನು ಹೇಳೋದಕ್ಕೆ ಆಗಲ್ಲ. ತುಂಬಾ ತುಂಬಾ ಥ್ಯಾಂಕ್ಸ್'' ಎಂದು ಪುನೀತ್ ರಾಜ್ ಕುಮಾರ್ ಧನ್ಯವಾದ ತಿಳಿಸಿದ್ದಾರೆ.

ಪುನೀತ್ ಅಭಿಮಾನಿಗಳು ಸಹ ಈ ವಿಡಿಯೋವನ್ನು ಹಂಚಿಕೊಂಡು ಸಂಭ್ರಮಿಸುತ್ತಿದ್ದಾರೆ.
ನಿನ್ನೆಯಷ್ಟೇ ಫಿಲ್ಮಿಬೀಟ್ ಕನ್ನಡದಲ್ಲಿ ರಶ್ಮಿಕಾ ಮಂದಣ್ಣ ಅವರ ಅಭಿಮಾನಿಯೊಬ್ಬರ ಕುರಿತು ಸುದ್ದಿ ಪ್ರಕಟ ಮಾಡಿತ್ತು. ಅಲ್ಲಿಯೂ ಸಹ ರಶ್ಮಿಕಾ ಮಂದಣ್ಣ ಅವರ ಚಿತ್ರವನ್ನು ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಹಿಮ್ಮುಖವಾಗಿ ಚಿತ್ರ ಬಿಡಿಸಿ ಅಚ್ಚರಿ ಮೂಡಿಸಿದ್ದರು.


Click it and Unblock the Notifications










