ಡಬ್ಬಿಂಗ್ 'ಧೀರ'ನಿಗೆ ಪುನೀತ್ ರಾಜ್ ಕುಮಾರ್ ಅಭಿಮಾನಿಗಳು ಫುಲ್ ಕ್ಲಾಸ್.!

By Pavithra

Recommended Video

ಡಬ್ಬಿಂಗ್ ಸಿನಿಮಾ ಧೀರನ ವಿರುದ್ಧ ಪುನೀತ್ ರಾಜ್ ಕುಮಾರ್ ಫ್ಯಾನ್ಸ್ ಗರಂ | Filmibeat Kannada

'ಡಬ್ಬಿಂಗ್' ಬೇಕು ಬೇಡ ಎಂಬ ವಿರೋಧಗಳ ನಡುವೆ.... 'ಡಬ್ಬಿಂಗ್' ಚಿತ್ರಗಳಿಗೆ ವಿರೋಧ ಮಾಡುವಂತಿಲ್ಲ ಅಂತ ಕೋರ್ಟ್ ನಿಂದ ಆದೇಶ ಬಂದಾಯ್ತು. ಆದ್ರೆ ''ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ ನಮಗೆ ಡಬ್ಬಿಂಗ್ ಸಿನಿಮಾ ಬೇಡವೇ ಬೇಡ'' ಎನ್ನುವ ಅಭಿಮಾನಿಗಳೇ ಹೆಚ್ಚು. ಇವರುಗಳ ಮಧ್ಯೆ ಕೆಲ ಕನ್ನಡದ ನಿರ್ಮಾಪಕರೇ ತಮಿಳು-ತೆಲುಗಿನಲ್ಲಿ ಹಿಟ್ ಆಗಿರುವ ಚಿತ್ರಗಳನ್ನ ಡಬ್ಬಿಂಗ್ ಮಾಡಿ ರಾಜ್ಯದಲ್ಲಿ ಬಿಡುಗಡೆ ಮಾಡಲು ಮುಂದಾಗಿದ್ದಾರೆ.

ಆದ್ರೆ, ಡಬ್ಬಿಂಗ್ ಸಿನಿಮಾಗಳನ್ನ ಧೈರ್ಯವಿದ್ದರೆ ಬೆಂಗಳೂರಿನಲ್ಲಿ ಬಿಡುಗಡೆ ಮಾಡಿ ಅಂತ ಕನ್ನಡಿಗರು ಸವಾಲು ಹಾಕಿದರು. ಅದರಂತೆಯೇ ಡಬ್ಬಿಂಗ್ ಸಿನಿಮಾ ಬೆಂಗಳೂರಿನ ಯಾವ ಚಿತ್ರಮಂದಿರದಲ್ಲೂ ತೆರೆಗೆ ಬರಲಿಲ್ಲ. ಈಗ ಸದ್ದಿಲ್ಲದೆ ಇಂದು ಬೆಂಗಳೂರಿನಲ್ಲೇ ಡಬ್ಬಿಂಗ್ ಚಿತ್ರ ರಿಲೀಸ್ ಆಗಿದೆ. ಇದನ್ನ ಗಮನಿಸಿರುವ ಪವರ್ ಸ್ಟಾರ್ ಪುನೀತ್ ಅಭಿಮಾನಿಗಳು ಚಿತ್ರತಂಡದ ವಿರುದ್ದ ಸಿಡಿದೆದ್ದಿದ್ದಾರೆ.

ಕೋಕಿಲ ಸಿನಿಮಾಮಂದಿರದಲ್ಲಿ ಚಿತ್ರ

ಕೋಕಿಲ ಸಿನಿಮಾಮಂದಿರದಲ್ಲಿ ಚಿತ್ರ

ಅಜಿತ್ ಅಭಿನಯದ ತಮಿಳಿನಿಂದ ಕನ್ನಡಕ್ಕೆ ಡಬ್ಬಿಂಗ್ ಆಗಿರುವ 'ಧೀರ' ಚಿತ್ರ ಇಂದು ಕತ್ತರಿಗುಪ್ಪೆ ಬಳಿಯ ಹೊಸಕೆರೆಹಳ್ಳಿ ಚಿತ್ರಮಂದಿರದಲ್ಲಿ ಬಿಡುಡಗೆಯಾಗಿದೆ. ಪ್ರತಿದಿನ ನಾಲ್ಕು ಶೋಗಳನ್ನ ನಿಗದಿ ಮಾಡಲಾಗಿದೆ.

ಸೋಷಿಯಲ್ ಮೀಡಿಯಾದಲ್ಲಿ 'ಧೀರ'ನಿಗೆ ಫುಲ್ ಕ್ಲಾಸ್

ಸೋಷಿಯಲ್ ಮೀಡಿಯಾದಲ್ಲಿ 'ಧೀರ'ನಿಗೆ ಫುಲ್ ಕ್ಲಾಸ್

ಟ್ವಿಟ್ಟರ್ ನಲ್ಲಿ 'ಧೀರ' ಚಿತ್ರ ಬಿಡುಗಡೆ ಬಗ್ಗೆ ಸಿನಿಮಾ ತಂಡ ಅಪ್ಡೇಟ್ ಮಾಡಿದೆ. ಇದಕ್ಕೆ ಕೋಪಗೊಂಡ ಕನ್ನಡ ಸಿನಿಮಾ ಅಭಿಮಾನಿಗಳು ಕ್ವಾಲಿಟಿ ಇಲ್ಲದ ಡಬ್ಬಿಂಗ್ ಸಿನಿಮಾ ಮಾಡುವ ಬದಲು ಬಡವರಿಗೆ ಹಣವನ್ನ ದಾನ ಮಾಡಿ ಅಂತ ಸಲಹೆ ನೀಡಿದ್ದಾರೆ.

ಬುಕ್ ಮೈ ಶೋನಲ್ಲಿ ಟಿಕೆಟ್ ಲಭ್ಯ

ಬುಕ್ ಮೈ ಶೋನಲ್ಲಿ ಟಿಕೆಟ್ ಲಭ್ಯ

ಡಬ್ಬಿಂಗ್ 'ಧೀರ' ಚಿತ್ರಕ್ಕೆ ತಕ್ಕಮಟ್ಟದ ರೆಸ್ಪಾನ್ಸ್ ಸಿಕ್ಕಿದೆ. ಬೆಳಗಿನ ಶೋ ಪ್ರಾರಂಭವಾಗಿದ್ದು, ಸದ್ಯ ಮಧ್ಯಾಹ್ನದ ಪ್ರದರ್ಶನಕ್ಕೆ ಟಿಕೆಟ್ ಬುಕ್ ಆಗುತ್ತಿದೆ. ಡಬ್ಬಿಂಗ್ ಪರವಾಗಿರುವ ಕೆಲ ಪ್ರೇಕ್ಷಕರು ಟ್ರೇಲರ್ ಮತ್ತು ಹಾಡುಗಳನ್ನ ನೋಡಿ ಅನಂದಿಸಿದ್ದಾರೆ.

ಇನ್ನು ಮುಂದೆ ಹೆಚ್ಚಾಗುತ್ತಾ ಡಬ್ಬಿಂಗ್ ಸಿನಿಮಾ

ಇನ್ನು ಮುಂದೆ ಹೆಚ್ಚಾಗುತ್ತಾ ಡಬ್ಬಿಂಗ್ ಸಿನಿಮಾ

ರಾಜ್ಯದಲ್ಲಿ ಅದರಲ್ಲೂ ಬೆಂಗಳೂರಿನಲ್ಲಿ ಡಬ್ಬಿಂಗ್ ಸಿನಿಮಾ ಬಿಡುಗಡೆ ಮಾಡಲು ಬಿಡೋದಿಲ್ಲ ಎಂದಿದ್ದ ವಾಟಾಳ್ ನಾಗರಾಜ್ ರ ಗಮನಕ್ಕೆ ಈ ಸುದ್ದಿ ಬಂದಿಲ್ಲ ಅನ್ಸುತ್ತೆ. ಹೊಸಕೆರೆ ಹಳ್ಳಿಯಲ್ಲಿ ರಿಲೀಸ್ ಆಗಿರೋ ಡಬ್ಬಿಂಗ್ ಸಿನಿಮಾ ಕೆ.ಜಿ.ರಸ್ತೆಯ ಸಂತೋಷ್ ಚಿತ್ರಮಂದಿರಕ್ಕೆ ಬರೋದಕ್ಕೆ ಹೆಚ್ಚು ಸಮಯ ಬೇಕಾಗಿಲ್ಲ.

More from Filmibeat

English summary
Kannada Actor Puneeth Rajkumar fans are against the release of Dubbing (Tamil to Kannada) Film 'Dheera', which has hit the screens today in Bengaluru. ತಮಿಳಿನಿಂದ ಕನ್ನಡಕ್ಕೆ ಡಬ್ ಆಗಿರುವ ಚಿತ್ರ ಧೀರ ಬೆಂಗಳೂರಿನ ಹೊಸಕೆರೆಹಳ್ಳಿಯ ಚಿತ್ರಮಂದಿರದಲ್ಲಿ ಇಂದು ಬಿಡುಗಡೆಯಾಗಿದೆ.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X