ಯುವರತ್ನ ಚಿತ್ರಕ್ಕೆ ನಾಯಕಿ ಫೈನಲ್: ಅಪ್ಪು ಅಭಿಮಾನಿಗಳಿಗೆ ನಿರಾಸೆ ಆಯ್ತಾ?
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಮತ್ತು ರಾಜಕುಮಾರ ನಿರ್ದೇಶಕ ಸಂತೋಷ್ ಆನಂದ್ ರಾಮ್ ಜೋಡಿಯಲ್ಲಿ ಮೂಡಿಬರ್ತಿರುವ ಯುವರತ್ನ ಚಿತ್ರ ಈಗಾಗಲೇ ಶೂಟಿಂಗ್ ಆರಂಭಿಸಿದೆ. ಮಂಗಳೂರು ಸುತ್ತಮುತ್ತಾ ಚಿತ್ರೀಕರಣ ಮಾಡ್ತಿದ್ದು, ನಾಯಕಿ ವಿಚಾರಕ್ಕೆ ಭಾರಿ ಸದ್ದು ಮಾಡಿತ್ತು.
ಯುವರತ್ನ ಚಿತ್ರಕ್ಕೆ ಈಗಾಗಲೇ ಡಾಲಿ ಧನಂಜಯ್, ವಸಿಷ್ಠ ಸಿಂಹ ನಟಿಸುತ್ತಿದ್ದಾರೆ. ಅಪ್ಪುಗೆ ನಾಯಕಿ ಯಾರಾಗ್ತಾರೆ ಎನ್ನುವುದು ಭಾರಿ ಕುತೂಹಲ ಮೂಡಿಸಿತ್ತು. ಅದರಲ್ಲೂ ನಟಸಾರ್ವಭೌಮ ಸಿನಿಮಾ ತೆರೆಕಂಡ ಮೇಲಂತೂ ಅನುಪಮಾ ಪರಮೇಶ್ವರನ್ ಅವರೇ ಯುವರತ್ನಗೂ ನಾಯಕಿಯಾಗಲಿ ಎಂದು ಅಭಿಮಾನಿಗಳು ಒತ್ತಾಯ ಮಾಡಿದ್ರು.
ಇದೀಗ, ಯುವರತ್ನ ಚಿತ್ರದ ನಾಯಕಿ ಫೈನಲ್ ಆಗಿದ್ದು, ಕೆಲವು ಅಪ್ಪು ಅಭಿಮಾನಿಗಳಿಗೆ ನಿರಾಸೆಯಾಗಿದೆ. ಅನುಪಮಾ ಇಷ್ಟಪಟ್ಟಿದ್ದ ಫ್ಯಾನ್ಸ್ ಗಂತೂ ಹೃಯದ ಛಿದ್ರಾ ಆಗಿರೋದಂತೂ ಸುಳ್ಳಲ್ಲಾ. ಹಾಗಿದ್ರೆ, ಯುವರತ್ನಗೆ ನಾಯಕಿ ಯಾರು? ಮುಂದೆ ಓದಿ.....

ಸಯೀಶಾ ಸೈಗಲ್ ಪಕ್ಕಾ
ಇಷ್ಟು ದಿನ ಯುವರತ್ನ ಚಿತ್ರಕ್ಕೆ ಸಯೀಶಾ ಸೈಗಲ್ ನಾಯಕಿಯಾಗ್ತಾರೆ ಎನ್ನಲಾಗಿತ್ತು. ಆ ಸುದ್ದಿ ಈಗ ಅಧಿಕೃತವಾಗಿದೆ. ಸ್ವತಃ ಚಿತ್ರತಂಡವೇ ಸಯೀಶಾ ಸೈಗಲ್ ನಾಯಕಿ ಎಂದು ಪ್ರಕಟಿಸಿದ್ದಾರೆ. ಈ ಮೂಲಕ ಅಪ್ಪು ಮುಂದಿನ ಚಿತ್ರದಲ್ಲಿ ಅಪ್ಪು ಮತ್ತು ಸಯೀಶಾ ಜೋಡಿಯಾಗಿದ್ದಾರೆ.

ಒಂದು ಕಡೆ ಖುಷಿ, ಒಂದು ಕಡೆ ನಿರಾಸೆ
ಸಯೀಶಾ ಸೈಗಲ್ ನಾಯಕಿ ಎಂದು ಅಂತಿಮವಾದ ನಂತರ ಅಪ್ಪು ಅಭಿಮಾನಿಗಳು ಖುಷಿಯಾಗಿದ್ದಾರೆ. ಆದ್ರೆ, ಅನುಪಮಾ ಪರಮೇಶ್ವರನ್ ನಾಯಕಿಯಾಗಬೇಕು ಎಂದು ಒತ್ತಾಯ ಮಾಡ್ತಿದ್ದವರಿಗೆ ಇದು ನಿರಾಸೆ ಉಂಟಾಗಿದೆ.

ಅನುಪಮಾ ನಾಯಕಿಯಾಗಬೇಕಿತ್ತು
ನಟಸಾರ್ವಭೌಮ ಸಿನಿಮಾ ಬಿಡುಗಡೆಯಾದ ಬಳಿಕ ಅನುಪಮಾ ಮತ್ತು ಪುನೀತ್ ರಾಜ್ ಕುಮಾರ್ ಕಾಂಬಿನೇಷನ್ ನೋಡಿ ಕನ್ನಡ ಕಲಾರಸಿಕರು ಬೋಲ್ಡ್ ಆಗಿದ್ದರು. ಇವರಿಬ್ಬರು ಪೇರ್ ಎಷ್ಟು ಮುದ್ದಾಗಿದೆ ಎಂದು ಮೆಚ್ಚಿಕೊಂಡರು. ಚಿತ್ರದ ಸೆಕೆಂಡ್ ಹಾಫ್ ನಲ್ಲಿ ಕಾಣಿಸಿಕೊಂಡಿದ್ದ ಅನುಪಮಾ, ಪೂರ್ಣ ಪ್ರಮಾಣದಲ್ಲಿ ಅಪ್ಪುಗೆ ನಾಯಕಿಯಾಗಬೇಕು ಎಂದು ಬೇಡಿಕೆ ಇಟ್ಟರು.

ಯಾರು ಈ ಸಯೀಶಾ?
ಅಂದ್ಹಾಗೆ, ಸಯೀಶಾ ಸೈಗಲ್ ಬಾಲಿವುಡ್ ಸ್ಟಾರ್ ನಿರ್ಮಾಪಕ ಸುಮೀತ್ ಸೈಗಲ್ ಅವರ ಮಗಳು. ತೆಲುಗಿನಲ್ಲಿ ಅಖಿಲ್ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಇದೀಗ, ತಮಿಳು ನಟ ಆರ್ಯ ಜೊತೆ ಮದುವೆಯಾಗ್ತಿದ್ದಾರೆ.


Click it and Unblock the Notifications











