ಪರಮಾತ್ಮನ ಎಂಟ್ರಿ ದೇವಸ್ಥಾನವಾದ ಥಿಯೇಟರ್‌ಗಳು: 'ಲಕ್ಕಿಮ್ಯಾನ್' ನೋಡಿ ಕಣ್ಣೀರಾದ ಅಭಿಮಾನಿಗಳು!

'ಲಕ್ಕಿಮ್ಯಾನ್' ಸಿನಿಮಾ ನೋಡಿ ಹೊರ ಬಂದವರ ಉದ್ಘಾರ ಅಪ್ಪು.. ಅಪ್ಪು.. ಅಪ್ಪು.. ರಾಜ್ಯಾದ್ಯಂತ ಹಲವೆಡೆ ನಿನ್ನೆ(ಸೆಪ್ಟೆಂಬರ್ 8) ಸಂಜೆಯಿಂದಲೇ 'ಲಕ್ಕಿಮ್ಯಾನ್' ಪೇಯ್ಡ್ ಪ್ರೀಮಿಯರ್ ಶೋಗಳು ಶುರುವಾಗಿದೆ. ಸಿನಿಮಾ ನೋಡಿದ ಅಭಿಮಾನಿಗಳ ಕಣ್ಣೀರಿನ ಕಟ್ಟೆ ಒಡೆದು ದುಃಖ ಉಮ್ಮಳಿಸಿ ಬಂತು. ತೆರೆಮೇಲೆ ಅಪ್ಪುನ ನೋಡಿ ಜೈಕಾರ ಹಾಕಿದರು. ಶಿಳ್ಳೆ ಚಪ್ಪಾಳೆ ಹೊಡೆದು, ಕೊನೆಗೆ ಎದ್ದು ನಿಂತು ಭಾವುಕರಾದರು.

'ಜೇಮ್ಸ್' ಹೀರೊ ಆಗಿ ಪುನೀತ್ ರಾಜ್‌ಕುಮಾರ್ ಕೊನೆಯ ಸಿನಿಮಾ. ಆದರೆ ಅಪ್ಪು ನಟಿಸಿದ ಮತ್ತೊಂದು ಕಮರ್ಷಿಯಲ್ ಸಿನಿಮಾ 'ಲಕ್ಕಿಮ್ಯಾನ್'. ಡಾರ್ಲಿಂಗ್ ಕೃಷ್ಣ, ಸಂಗೀತಾ ಶೃಂಗೇರಿ ಲೀಡ್ ರೋಲ್‌ಗಳಲ್ಲಿ ನಟಿಸಿದರೂ ವಿಶೇಷ ಪಾತ್ರದಲ್ಲಿ ಅಪ್ಪು ಎಲ್ಲರನ್ನು ಮರೆಸಿಬಿಟ್ಟಿದ್ದಾರೆ. ಇಂದು 400ಕ್ಕೂ ಅಧಿಕ ಸ್ಕ್ರೀನ್‌ಗಳಲ್ಲಿ ಸಿನಿಮಾ ರಿಲೀಸ್ ಆಗ್ತಿದೆ. ಒಂದು ದಿನ ಮೊದಲೇ ಶುರುವಾದ ಪ್ರೀಮಿಯರ್ ಶೋಗಳಿಗೂ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ.

ಪುನೀತ್‌ ರಾಜ್‌ಕುಮಾರ್ ಅಗಲಿಕೆಯ ನೋವು ಕರಗುತ್ತಲೇ ಇಲ್ಲ. ಒಂದೆಡೆ 'ಲಕ್ಕಿಮ್ಯಾನ್' ಚಿತ್ರದಲ್ಲಿ ಅಪ್ಪುನ ನೋಡುವ ಸಂಭ್ರಮ. ಮತ್ತೊಂದೆಡೆ ಅಯ್ಯೋ ಅಪ್ಪು ಈಗ ನಮ್ಮೊಂದಿಗೆ ಇಲ್ಲ ಅನ್ನುವ ನೋವು ಅಭಿಮಾನಿಗಳನ್ನು ಕಾಡುತ್ತಲೇ ಇದೆ. ನಟ ಸುದೀಪ್ ಹೇಳಿದಂತೆ ಕೊನೆಯ ಸಿನಿಮಾದಲ್ಲಿ ಅಪ್ಪುನ ಅಭಿಮಾನಿಗಳು ಕೈಚಾಚಿ ಅಪ್ಪಿಕೊಳ್ಳುತ್ತಿದ್ದಾರೆ.

ಎಲ್ಲಾ ಕಡೆ 'ಲಕ್ಕಿಮ್ಯಾನ್' ಹೌಸ್‌ಫುಲ್

ಎಲ್ಲಾ ಕಡೆ 'ಲಕ್ಕಿಮ್ಯಾನ್' ಹೌಸ್‌ಫುಲ್

ಬೆಂಗಳೂರು, ಮೈಸೂರು, ಶಿವಮೊಗ್ಗ, ತುಮಕೂರಿನ ಕೆಲವೆಡೆ 'ಲಕ್ಕಿಮ್ಯಾನ್' ಪೇಯ್ಡ್ ಪ್ರೀಮಿಯರ್‌ ಶೋಗಳನ್ನು ಆಯೋಜಿಸಲಾಗಿತ್ತು. ಎಲ್ಲಾ ಶೋಗಳು ಹೌಸ್‌ಫುಲ್‌ ಪ್ರದರ್ಶನ ಕಂಡಿದೆ. ಗುರುವಾರ ರಾಯರ ವಾರ. ಪುನೀತ್‌ ರಾಜ್‌ಕುಮಾರ್‌ ಅವರಿಗೂ ಪ್ರಿಯವಾದ ವಾರ. ಗುರುವಾರವೇ ಅಭಿಮಾನಿಗಳು ದೇವರ ರೂಪದಲ್ಲಿ ನೆಚ್ಚಿನ ನಟನನ್ನು ಕಣ್ತುಂಬಿಕೊಂಡಿದ್ದಾರೆ.

ಪರಮಾತ್ಮನ ಎಂಟ್ರಿಗೆ ದೇಗುಲವಾದ ಥಿಯೇಟರ್

ಪರಮಾತ್ಮನ ಎಂಟ್ರಿಗೆ ದೇಗುಲವಾದ ಥಿಯೇಟರ್

ಪುನೀತ್‌ ರಾಜ್‌ಕುಮಾರ್ ಎಂಟ್ರಿ ಸೀನ್ ವೇಳೆ ಅಭಿಮಾನಿಗಳು ಥಿಯೇಟರ್‌ಗಳಲ್ಲಿ ಪಟಾಕಿ ಸಿಡಿಸಿ ಜೈಕಾರ ಹಾಕಿ ಸಂಭ್ರಮಿಸಿದ್ದಾರೆ. ಪರಮಾತ್ಮನಾಗಿ ಕಾಣಿಸಿಕೊಂಡಿರುವ ಅಪ್ಪು ಒಂದು ಸೀನ್‌ನಲ್ಲಿ ಶ್ರೀವಿಷ್ಣು ರೂಪದಲ್ಲಿ ದರ್ಶನ ಕೊಡುವುದನ್ನು ನೋಡಬಹುದು. ಈ ಸಂದರ್ಭದಲ್ಲಿ ಥಿಯೇಟರ್‌ಗಳು ಅಕ್ಷರಶಃ ದೇವಸ್ಥಾನದಂತೆ ಭಾಸವಾಗುತ್ತಿತ್ತು.

ಬಿಕ್ಕಿ ಬಿಕ್ಕಿ ಕಣ್ಣೀರು ಹಾಕಿದ ಅಭಿಮಾನಿಗಳು

ಬಿಕ್ಕಿ ಬಿಕ್ಕಿ ಕಣ್ಣೀರು ಹಾಕಿದ ಅಭಿಮಾನಿಗಳು

ಮಲ್ಟಿಪ್ಲೆಕ್ಸ್‌ಗಳಲ್ಲೂ 'ಲಕ್ಕಿಮ್ಯಾನ್' ಸಿನಿಮಾ ನೋಡಿ ಅಭಿಮಾನಿಗಳು ಕುಣಿದು ಕುಪ್ಪಳಿಸಿದ್ದಾರೆ. ಅದೇ ಕ್ಷಣ ಅಪ್ಪು ಇಲ್ಲ ಎಂದು ನೆನೆದು ಭಾವುಕರಾಗಿದ್ದಾರೆ. ಅಪ್ಪು ನಮ್ಮೊಂದಿಲ್ಲ ಎನ್ನುವ ಸತ್ಯವನ್ನು ಅರಗಿಸಿಕೊಳ್ಳಲಾಗದೇ ಕಣ್ಣೀರಾಕುತ್ತಲೇ ಥಿಯೇಟರ್‌ಗಳಿಂದ ಹೊರ ಬಂದಿದ್ದಾರೆ. ಅಪ್ಪು ಎಲ್ಲೂ ಹೋಗಿಲ್ಲ ನಮ್ಮೊಂದಿಗೆ ಇದ್ದಾರೆ ಎಂದು ಮಾಧ್ಯಮಗಳ ಮುಂದೆ ನೋವು ತೋಡಿಕೊಳ್ಳುತ್ತಿದ್ದಾರೆ. ಕೆಲವರು ಮಾತನಾಡಲಾಗದೇ ಅಳ್ಳುತ್ತಾ ಹೊರಬಂದಿದ್ದಾರೆ. ಜೆಪಿ ನಗರದ ಸಿದ್ಧಲಿಂಗೇಶ್ವರ ಥಿಯೇಟರ್‌ನಲ್ಲಿ ರಾತ್ರಿ 12ಗಂಟೆಗೆ ಅಭಿಮಾನಿಗಳ ಜೊತೆ ಸಿನಿಮಾ ನೋಡಿ ನಟ ಡಾರ್ಲಿಂಗ್ ಕೃಷ್ಣ ಸಂಭ್ರಮಿಸಿದ್ದಾರೆ. ಅಪ್ಪು ಫೋಟೊ ಹಿಡಿದು ಅಭಿಮಾನಿಗಳ ಜೊತೆ ಕುಣಿದಿದ್ದಾರೆ.

'ಲಕ್ಕಿಮ್ಯಾನ್' ಸೂಪರ್ ಹಿಟ್ ಟಾಕ್

'ಲಕ್ಕಿಮ್ಯಾನ್' ಸೂಪರ್ ಹಿಟ್ ಟಾಕ್

'ಲಕ್ಕಿಮ್ಯಾನ್' ಸಿನಿಮಾ ಎಲ್ಲಾ ವಿಭಾಗದಲ್ಲೂ ಸೂಪರ್ ಎನ್ನುವ ಮಾತುಗಳು ಕೇಳಿಬಂದಿದೆ. ಪ್ರೇಕ್ಷಕರು ಹಾಗೂ ವಿಮರ್ಶಕರು ಮೆಚ್ಚಿಕೊಂಡಿದ್ದಾರೆ. ಪಕ್ಕಾ ಫ್ಯಾಮಿಲಿ ಎಂಟರ್‌ಟೈನರ್‌ ಸಿನಿಮಾ. ಪುನೀತ್ ರಾಜ್‌ಕುಮಾರ್ ಸ್ಕ್ರೀನ್‌ ಪ್ರಸೆನ್ಸ್‌ನಿಂದ ಸಿನಿಮಾ ಮತ್ತಷ್ಟು ಸೊಗಸಾಗಿದೆ. ಕಾಮಿಡಿ, ಎಮೋಷನ್ ಜೊತೆಗೆ ಒಳ್ಳೆ ಮೆಸೇಜ್ ಇರುವ ಸಿನಿಮಾ ಪಕ್ಕಾ ಸೂಪರ್ ಹಿಟ್ ಆಗುತ್ತೆ ಎನ್ನಲಾಗ್ತಿದೆ.

More from Filmibeat

English summary
Puneeth Rajkumar Fans Become Emotional In Luckyman Premiere Show. Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X