ಮುಂದುವರೆದ ಅಪ್ಪು ಅಭಿಮಾನಿಗಳ ಆತ್ಮಹತ್ಯೆ ಸರಣಿ

ನಟ ಪುನೀತ್ ರಾಜ್‌ಕುಮಾರ್ ಅಗಲಿಕೆ ಅವರ ಅಭಿಮಾನಿಗಳಿಗೆ ದೊಡ್ಡ ಆಘಾತ ಉಂಟುಮಾಡಿದೆ. ಪುನೀತ್ ಅಗಲಿಕೆ ಸುದ್ದಿ ಕೇಳಿ ಕೆಲವರಂತೂ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಇನ್ನು ಕೆಲವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಪುನೀತ್ ರಾಜ್‌ಕುಮಾರ್ ನಿಧನವಾದ ದಿನವೇ ಏಳು ಮಂದಿ ಅಭಿಮಾನಿಗಳು ಆತ್ಮಹತ್ಯೆ ಮಾಡಿಕೊಂಡರು. ಒಬ್ಬ ಅಭಿಮಾನಿ ಹೃದಯಾಘಾತದಿಂದ ನಿಧನ ಹೊಂದಿದ. ಅಪ್ಪು ಅಭಿಮಾನಿಗಳ ಸಾವಿನ ಸರಣಿ ಇಷ್ಟೆ ನಿಂತಿಲ್ಲ ಇನ್ನೂ ಮುಂದುವರೆದಿದೆ.

ಅಪ್ಪುವಿನ ಅದಮ್ಯ ಅಭಿಮಾನಿ ಆಗಿದ್ದ ತುಮಕೂರಿನ ಭರತ್ ಎಂಬಾತ ನಿನ್ನೆ ಪತ್ರ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಗಾರೆ ಕೆಲಸ ಮಾಡಿಕೊಂಡಿದ್ದ ಭರತ್, ನಾನು ಅಪ್ಪುವಿನ ಅಭಿಮಾನಿ, ಅವರು ಇರುವ ಲೋಕಕ್ಕೆ ಹೋಗುತ್ತಿದ್ದೇನೆ. ಅವರಂತೆ ನಾನೂ ಕಣ್ಣು ದಾನ ಮಾಡಬೇಕು ಎಂದು ಪತ್ರದಲ್ಲಿ ಬರೆದಿಟ್ಟು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಭರತ್‌ನ ಪೋಷಕರು ಅವನ ಆಸೆಯಂತೆ ಕಣ್ಣುಗಳನ್ನು ದಾನ ಮಾಡಿದ್ದಾರೆ.

Puneeth Rajkumar Fans Died Today Also

ತುಮಕೂರಿನ ಹಿರೇಹಳ್ಳಿಯ ಮತ್ತೊಬ್ಬ ಅಪ್ಪು ಅಭಿಮಾನಿ ಇಂದು ಹೃದಯಾಘಾತದಿಂದ ನಿಧನ ಹೊಂದಿದ್ದಾನೆ. ಶ್ರೀಅಪ್ಪು ಶ್ರೀನಿವಾಸ್ ಹೆಸರಿನ ಅಭಿಮಾನಿ ಸತತ ಎರಡು ದಿನ ಕಷ್ಟಪಟ್ಟು ಪುನೀತ್ ರಾಜ್‌ಕುಮಾರ್ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದಿದ್ದ. ಅಪ್ಪು ಅಂತ್ಯಕ್ರಿಯೆ ಬಳಿಕ ಮನೆಗೆ ವಾಪಸ್ಸಾಗಿದ್ದ ಶ್ರೀಅಪ್ಪು ಶ್ರೀನಿವಾಸ್ ಇಂದು ಹೃದಯಾಘಾತದಿಂದ ನಿಧನ ಹೊಂದಿದ್ದಾನೆ.

ಪುನೀತ್ ರಾಜ್‌ಕುಮಾರ್ ನಿಧನ ಹೊಂದಿದ ದಿನ ಬೆಳಗಾವಿ ರಾಹುಲ್ ಗಡಿವಡ್ಡಾರ ಎಂಬ ಯುವಕ ಅಪ್ಪುಗೆ ಶ್ರದ್ಧಾಂಜಲಿ ಸಲ್ಲಿಸಿ ಬಳಿಕ ಆತ್ಮಹತ್ಯೆ ಮಾಡಿಕೊಂಡು ನಿಧನ ಹೊಂದಿದ್ದ. ಅದೇ ದಿನ ಹೊಸಪೇಟೆಯ ನಿವಾಸಿ ಸಾದಪ್ಪ ಎಂಬಾತ ಕಾಲುವೆಗೆ ಹಾರಿ ಪ್ರಾಣ ಬಿಟ್ಟ. ಚಿಕ್ಕಮಗಳೂರಿನಲ್ಲಿ ಶರತ್ ಎಂಬಾತ ಆತ್ಮಹತ್ಯೆಗೆ ಶರಣಾಗಿದ್ದರು.

ಚಾಮರಾಜನಗರ ಜಿಲ್ಲೆಯ ಹನೂರಿನ ಮುನಿಯಪ್ಪ ಎಂಬಾತ ಅಪ್ಪು ಇನ್ನಿಲ್ಲ ಎಂಬ ಸುದ್ದಿ ಕೇಳಿ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಬೆಳಗಾವಿಯ ಶಿಂದೊಳ್ಳಿ ಗ್ರಾಮದ ಪರುಶಾರಾಮ್ ಎಂಬ ಪುನೀತ್ ಅಭಿಮಾನಿ ಸಹ ನಿಧನದ ಸುದ್ದಿ ಕೇಳಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಕೊಪ್ಪಳದ ಚಿಕ್ಕ ಬನಿಗೋಳದಲ್ಲಿ ಕಿರಾಣಿ ಅಂಗಡಿ ಇಟ್ಟುಕೊಂಡಿದ್ದ ಜ್ಞಾನಮೂರ್ತಿ ಎಂಬುವರಿಗೂ ಪುನೀತ್ ನಿಧನದ ಸುದ್ದಿ ಕೇಳಿ ಹೃದಯಾಘಾತವಾಗಿದೆ.

ಮಂಡ್ಯದ ಕೆರೆಗೋಡು ಗ್ರಾಮದ ಕೆ.ಎಂ.ರಾಜೇಶ್ ಎಂಬುವರು ಅಪ್ಪು ನಿಧನದ ಸುದ್ದಿ ಕೇಳಿ ತೀವ್ರ ಆಘಾತಕ್ಕೆ ಒಳಗಾಗಿದ್ದರು. ಆಹಾರ, ನೀರು ಸೇವಿಸದೆ ಅಸ್ವಸ್ಥರಾಗಿದ್ದರು. ಕೊನೆಗೆ ಅಪ್ಪುವಿನ ಅಂತಿಮ ದರ್ಶನಕ್ಕೆ ಹೋಗುತ್ತೇನೆಂದು ಹೋಗಿ ತೀವ್ರ ಅಸ್ವಸ್ಥಗೊಂಡು ಮಂಡ್ಯದ ಪಾರ್ಕ್‌ ಒಂದರ ಬಳಿ ಕುಸಿದು ಬಿದ್ದಿದ್ದರು ಅವರನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲಾಯ್ತಾದರೂ ಅವರು ನಿಧನ ಹೊಂದಿದರು. ರಾಜ್‌ಕುಮಾರ್ ಕುಟುಂಬದ ಬಹುದೊಡ್ಡ ಅಭಿಮಾನಿ ಆಗಿದ್ದ ರಾಜೇಶ್, ರಾಜ್‌ಕುಮಾರ್ ಹೆಸರಿನ ಹೋಟೆಲ್ ನಡೆಸುತ್ತಿದ್ದರು.

More from Filmibeat

English summary
Puneeth Rajkumar fan commit suicide in Tumkur today. another fan died of heart attack. On Pueeth's death day 7 fans died.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X