For Quick Alerts
  ALLOW NOTIFICATIONS  
  For Daily Alerts

  'ಲಕ್ಕಿಮ್ಯಾನ್' ಅಪ್ಪು- ಪ್ರಭು ಅದ್ಭುತ ನರ್ತನ: ಸಾಂಗ್‌ ನೋಡಿ ಭಾವುಕ

  |

  ಕರ್ನಾಟಕ ರತ್ನ ಡಾ. ಪುನೀತ್ ರಾಜ್‌ಕುಮಾರ್ ಹೆಜ್ಜೆ ಹಾಕಿರುವ ಕೊನೆ ಡ್ಯಾನ್ಸಿಂಗ್ ನಂಬರ್ ರಿಲೀಸ್ ಆಗಿದೆ. ಅಪ್ಪು ಅಗಲಿಕೆಯ ನೋವಿನಿಂದ ಇನ್ನು ಅಭಿಮಾನಿಗಳು ಹೊರಬಂದಿಲ್ಲ. ಪ್ರತಿ ದಿನ ಪ್ರತಿಕ್ಷಣ ಅಪ್ಪು ನೆನಪು ಅಭಿಮಾನಿಗಳನ್ನು ಕಾಡುತ್ತಲೇ ಇದೆ. 'ಲಕ್ಕಿಮ್ಯಾನ್' ಚಿತ್ರದ 'ಬಾರೋ ರಾಜಾ' ಸಾಂಗ್‌ ನೋಡಿ ಆ ಮುಗ್ಧ ನಗು ನೋಡಿದವರು ಭಾವುಕರಾಗುತ್ತಿದ್ದಾರೆ. ಅಪ್ಪು ನಟನೆಯ ಕೊನೆಯ ಸಿನಿಮಾಗಳಲ್ಲಿ 'ಲಕ್ಕಿಮ್ಯಾನ್' ಕೂಡ ಒಂದು. ಇನ್ನು ಪುನೀತ್‌ ರಾಜ್‌ಕುಮಾರ್ ಡ್ಯಾನ್ಸ್‌ ಮಾಡಿರುವ ಕೊನೆ ಸಾಂಗ್ ಇದೇ ಅನ್ನಿಸುತ್ತದೆ.

  ಇಂಡಿಯನ್ ಮೈಕಲ್ ಜಾಕ್ಸನ್ ಪ್ರಭುದೇವಾ, ಕರ್ನಾಟಕ ಡ್ಯಾನ್ಸ್ ಮಷಿನ್ ಪುನೀತ್ ರಾಜ್‌ಕುಮಾರ್ ಒಂದೇ ಸಾಂಗ್‌ಗೆ ಹೆಜ್ಜೆ ಹಾಕುವುದನ್ನು ನೋಡುವುದು ಅದೇಷ್ಟೊ ಜನರ ಕನಸಾಗಿತ್ತು. ಸ್ವತಃ ಅವರಿಬ್ಬರಿಗೂ ಅದೊಂದು ಕನಸೇ ಸರಿ. ಅಂತಾದೊಂದು ಕನಸು ನನಸಾಗಿದೆ. ಆದರೆ ಅದನ್ನು ಸಿನಿರಸಿರಕರ ಜೊತೆ ನೋಡಲು ಪುನೀತ್ ರಾಜ್‌ಕುಮಾರ್ ಇಲ್ಲ ಅನ್ನುವುದು ಬೇಸರದ ಸಂಗತಿ. ಪ್ರಭುದೇವಾ ಸಹೋದರ ನಾಗೇಂದ್ರ ಪ್ರಸಾದ್ ನಿರ್ದೇಶನದ ಸಿನಿಮಾ 'ಲಕ್ಕಿಮ್ಯಾನ್'. ಡಾರ್ಲಿಂಗ್ ಕೃಷ್ಣ ಹಾಗೂ ಸಂಗೀತ ಶೃಂಗೇರಿ ಈ ಚಿತ್ರದ ಲೀಡ್‌ ರೋಲ್‌ಗಳಲ್ಲಿ ನಟಿಸಿದ್ದಾರೆ. ಚಿತ್ರದಲ್ಲಿ ಪುನೀತ್ ರಾಜ್‌ಕುಮಾರ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಜೊತೆಗೆ ಚಿತ್ರದ ಸ್ಪೆಷಲ್ ಸಾಂಗ್‌ಗೆ ಪ್ರಭುದೇವಾ ಜೊತೆ ಹೆಜ್ಜೆ ಹಾಕಿದ್ದಾರೆ.

  'ಲಕ್ಕಿ ಮ್ಯಾನ್‌' ಚಿತ್ರದಲ್ಲಿ ಎಷ್ಟು ನಿಮಿಷ ಇರಲಿದ್ದಾರೆ ಪುನೀತ್ ರಾಜ್‌ಕುಮಾರ್!'ಲಕ್ಕಿ ಮ್ಯಾನ್‌' ಚಿತ್ರದಲ್ಲಿ ಎಷ್ಟು ನಿಮಿಷ ಇರಲಿದ್ದಾರೆ ಪುನೀತ್ ರಾಜ್‌ಕುಮಾರ್!

  ವಿ2 ವಿಜಯ್ ವಿಕ್ಕಿ ಟ್ಯೂನ್‌ಗೆ ಧನಂಜಯ್ ರಂಜನ್ ಲಿರಿಕ್ಸ್ ಬರೆದಿದ್ದಾರೆ. ಬೆನ್ನಿ ದಯಾಳ್ ವಾಯ್ಸ್‌ನಲ್ಲಿ'ಬಾರೋ ರಾಜಾ' ಸಾಂಗ್ ಸಿಕ್ಕಾಪಟ್ಟೆ ಕಿಕ್ ಕೊಡ್ತಿದೆ. ಧಾಂ ಧೂಂ ಅನ್ನೋ ಮ್ಯೂಸಿಕ್ ಮಾಡದೇ ನಿಧಾನವಾಗಿ ಮೈ ಕುಣಿಸುವಂತ ಟ್ಯೂನ್ ಹಾಕಿದ್ದಾರೆ. ಪ್ರಭುದೇವಾ ಹಾಗೂ ಅಪ್ಪು ಡ್ಯಾನ್ಸ್ ಪರ್ಫಾರ್ಮೆನ್ಸ್‌ಗೆ ಹೇಳಿ ಮಾಡಿದಂತಹ ಸಾಂಗ್ ಇದು. ಒಂದಷ್ಟು ಮೇಕಿಂಗ್ ವಿಷ್ಯುವಲ್ಸ್ ಮಿಕ್ಸ್ ಮಾಡಿ ಲಿರಿಕಲ್ ವಿಡಿಯೋ ಸಾಂಗ್ ರಿಲೀಸ್ ಮಾಡಿದ್ದಾರೆ.

  ಅಪ್ಪು- ಪ್ರಭು ಅಣ್ಣಾವ್ರ ಗುಣಗಾನ

  ಅಪ್ಪು- ಪ್ರಭು ಅಣ್ಣಾವ್ರ ಗುಣಗಾನ

  'ಬಾರೋ ರಾಜಾ' ಸಾಂಗ್‌ನಲ್ಲಿ ನಟಸಾರ್ವಭೌಮ ಡಾ. ರಾಜ್‌ಕುಮಾರ್ ಗುಣಗಾನ ಮಾಡಲಾಗಿದೆ. ಅಣ್ಣಾವ್ರ ಸೂಪರ್ ಹಿಟ್ ಸಿನಿಮಾಗಳ ಹೆಸರಗಳನ್ನು ಸೇರಿಸಿ ಲಿರಿಕ್ಸ್ ಬರೆದಿದ್ದಾರೆ. ಮೋಹನ್ ಬಿ ಕೆರೆ ಡೈರೆಕ್ಷನ್‌ನಲ್ಲಿ ಬೊಂಬಾಟ್ ಸೆಟ್ ಹಾಕಿ ಸಾಂಗ್ ಶೂಟ್ ಮಾಡಿದ್ದಾರೆ. ಜಗಮಗ ಫ್ಲೋರ್‌ನಲ್ಲಿ ಪ್ರಭುದೇವಾ ಹಾಗೂ ಪುನೀತ್ ಬಿಂದಾಸ್ ಸ್ಟೆಪ್ಸ್ ಹಾಕಿದ್ದಾರೆ.

  ಡ್ಯಾನ್ಸಿಂಗ್‌ ಸ್ಟಾರ್ಸ್‌ನ ಕುಣಿಸಿದ ಜಾನಿ ಮಾಸ್ಟರ್

  ಡ್ಯಾನ್ಸಿಂಗ್‌ ಸ್ಟಾರ್ಸ್‌ನ ಕುಣಿಸಿದ ಜಾನಿ ಮಾಸ್ಟರ್

  ಹೇಳಿ ಕೇಳಿ ಪ್ರಭುದೇವಾ, ಅಪ್ಪು ಇಬ್ಬರೂ ಸೂಪರ್ ಡ್ಯಾನ್ಸರ್ಸ್. ಇನ್ನು ನಿರ್ದೇಶಕ ನಾಗೇಂದ್ರ ಪ್ರಸಾದ್ ಕೂಡ ಒಳ್ಳೆ ಡ್ಯಾನ್ಸ್‌ ಮಾಸ್ಟರ್. ಆದರೂ ದಿಗ್ಗಜ ಡ್ಯಾನ್ಸರ್‌ಗಳನ್ನು ಈ ಸಾಂಗ್‌ನಲ್ಲಿ ಕುಣಿಸುವ ಲಕ್ಕಿ ಛಾನ್ಸ್ ಮಾತ್ರ ಜಾನಿ ಮಾಸ್ಟರ್‌ಗೆ ಸಿಕ್ಕಿದೆ. ಈ ಹಿಂದೆ 'ರಾಜಕುಮಾರ' ಚಿತ್ರದಲ್ಲಿ 'ಅಪ್ಪು ಡ್ಯಾನ್ಸ್ ಡ್ಯಾನ್ಸ್' ಎಂದು ಎಲ್ಲರನ್ನು ಕುಣಿಸಿದ್ದ ಮಾಸ್ಟರ್ ಈಗ 'ಬಾರೋ ರಾಜಾ' ಎಂದು ಕುಣಿಯೋಕೆ ಕರೆದಿದ್ದಾರೆ. ಸಾಂಗ್ ಕೇಳ್ತಾ ಕೇಳ್ತಾ ನಿಮ್ಮ ಭುಜ ಕುಣಿಯೋಕೆ ಶುರು ಮಾಡುತ್ತದೆ.

  ಅಪ್ಪು- ಪ್ರಭು ಮಧ್ಯೆ ಡ್ಯಾನ್ಸ್‌ ಪೈಪೋಟಿ

  ಅಪ್ಪು- ಪ್ರಭು ಮಧ್ಯೆ ಡ್ಯಾನ್ಸ್‌ ಪೈಪೋಟಿ

  ಬ್ಲ್ಯಾಕ್‌ ಕಲರ್ ಡ್ರೆಸ್‌ನಲ್ಲಿ ಪುನೀತ್, ವೈಟ್ ಕಲರ್‌ ಡ್ರೆಸ್‌ನಲ್ಲಿ ಪ್ರಭುದೇವಾ ಮಿಂಚಿದ್ದಾರೆ. ಇಬ್ಬರು ಪೈಪೋಟಿಗೆ ಬಿದ್ದು ಬಿಂದಾಸ್ ಬೀಟ್‌ಗೆ ಹೆಜ್ಜೆ ಹಾಕಿದ್ದಾರೆ. ಕ್ಯಾಮರಾಮನ್ ಜೀವಾ ಶಂಕರ್ ಬಹಳ ಸೊಗಸಾಗಿ ಡ್ಯಾನ್ಸ್‌ನ ಸೆರೆ ಹಿಡಿದಿದ್ದಾರೆ. ಸಣ್ಣ ಝಲಕ್ ನೋಡಿ ಅಭಿಮಾನಿಗಳು ಖುಷಿಯಾಗಿದ್ದು, ಕಂಪ್ಲೀಟ್ ವಿಡಿಯೋ ಸಾಂಗ್ ನೋಡೋಕೆ ತುದಿಗಾಲಲ್ಲಿ ಕಾಯುತ್ತಿದ್ದಾರೆ. ಥಿಯೇಟರ್‌ಗಳಲ್ಲಿ ಈ ಸಾಂಗ್ ಬಂದಾಗ ಅಭಿಮಾನಿಗಳು ಹುಚ್ಚೆದ್ದು ಕುಣಿಯುವುದ ಗ್ಯಾರೆಂಟಿ.

  ಡ್ಯಾನ್ಸಿಂಗ್ ನಂಬರ್ ನೋಡಿದವರು ಭಾವುಕ

  ಡ್ಯಾನ್ಸಿಂಗ್ ನಂಬರ್ ನೋಡಿದವರು ಭಾವುಕ

  ಸಾಂಗ್ ಸೂಪರ್. ಅಪ್ಪು- ಪ್ರಭು ಡ್ಯಾನ್ಸ್ ಬೊಂಬಾಟ್. ಎಲ್ಲವೂ ಸರಿ. ಆದರೆ ಇದು ಅಪ್ಪು ಕೊನೆ ಸಾಂಗ್ ಅನ್ನುವ ನೋವು ಸಾಂಗ್ ನೋಡುವ ಅಷ್ಟೂ ಹೊತ್ತು ಕಾಡುತ್ತದೆ. ಅಭಿಮಾನಿಗಳು ಪುನೀತ್ ರಾಜ್‌ಕುಮಾರ್ ಡ್ಯಾನ್ಸ್ ನೋಡ್ತಾ ನೋಡ್ತಾ ಭಾವುಕರಾಗುತ್ತಿದ್ದಾರೆ. ಆ ಕ್ರೂರ ವಿಧಿಗೆ ಹಿಡಿ ಶಾಪ ಹಾಕುತ್ತಿದ್ದಾರೆ. 'ಮರಳಿ ಹುಟ್ಟಿ ಬನ್ನಿ ಅಪ್ಪು' ಎಂದು ಗೋಗರೆಯುತ್ತಿದ್ದಾರೆ.

  ಸೆಪ್ಟೆಂಬರ್ 9ಕ್ಕೆ 'ಲಕ್ಕಿಮ್ಯಾನ್' ರಿಲೀಸ್

  ಸೆಪ್ಟೆಂಬರ್ 9ಕ್ಕೆ 'ಲಕ್ಕಿಮ್ಯಾನ್' ರಿಲೀಸ್

  ಬಹುನಿರೀಕ್ಷಿತ 'ಲಕ್ಕಿಮ್ಯಾನ್' ಈಗಾಗಲೇ ದಾಖಲೆಗಳನ್ನು ಬರೆಯಲು ಶುರು ಮಾಡಿದೆ. ಭಾರೀ ಮೊತ್ತಕ್ಕೆ ಚಿತ್ರದ ವಿತರಣೆ ಹಕ್ಕು ಮಾರಾಟವಾಗಿದೆ. ಸೆಪ್ಟೆಂಬರ್ 9ಕ್ಕೆ ಚಿತ್ರವನ್ನು ದೊಡ್ಡಮಟ್ಟದಲ್ಲಿ ಬಿಡುಗಡೆ ಮಾಡಲು ಸಿದ್ಧತೆ ನಡೀತಿದ್ದು, ಸಿನಿರಸಿಕರು ಕಾತರದಿಂದ ಕಾಯುತ್ತಿದ್ದಾರೆ. ಈ ರೊಮ್ಯಾಂಟಿಕ್ ಫ್ಯಾಮಿಲಿ ಎಂಟರ್‌ಟೈನರ್‌ನ ಕಂಪ್ಲೀಟ್ ಫ್ಯಾಮಿಲಿ ನೋಡಿ ಎಂಜಾಯ್ ಮಾಡಬಹುದು.

  English summary
  Puneeth Rajkumar Fans Emotional While Watching Luckyman Movie Song. Know More.
  Tuesday, August 23, 2022, 20:41
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X