For Quick Alerts
  ALLOW NOTIFICATIONS  
  For Daily Alerts

  ಅಂಜನಿಪುತ್ರ ಪ್ರದರ್ಶನ ತಡೆಯನ್ನ ವಿರೋಧಿಸಿ ಅಭಿಮಾನಿಗಳ ಹೋರಾಟ

  By Pavithra
  |

  ಪವರ್‌ಸ್ಟಾರ್ ಪುನೀತ್ ‌ರಾಜ್ ಕುಮಾರ್‌ ಸಿನಿಮಾ‌ರಂಗಕ್ಕೆ‌ ಎಂಟ್ರಿಕೊಟ್ಟ ನಂತರ‌ ಹೆಚ್ಚು ವಿವಾದಕ್ಕೆ‌ ಸಿಲುಕಿಕೊಳ್ಳದ ನಾಯಕನಟ. ತಾನಾಯ್ತು ತನ್ನ‌ ಕೆಲಸ ಆಯಿತು ಅಂತಿದ್ದ ಪವರ್ ಸ್ಟಾರ್ ಅಭಿನಯದ ಸಿನಿಮಾ ಸದ್ಯ ವಿವಾದದಲ್ಲಿ‌ ಸಿಲುಕಿರೋದು ಗೊತ್ತಿರೋ ವಿಚಾರ. ಮೂರು ದಿನಗಳ ಹಿಂದೆಯಷ್ಟೇ ಬಿಡುಗಡೆಯಾದ ಅಂಜನಿಪುತ್ರ ಸಿನಿಮಾದಲ್ಲಿ ವಕೀಲರನ್ನ ಅವಹೇಳನ ಮಾಡಲಾಗಿದೆ ಎಂದು‌ ವಕೀಲರೊಬ್ಬರು ಕೋರ್ಟ್ ಮೆಟ್ಟಿಲೇರಿ ಸಿನಿಮಾ ಪ್ರದರ್ಶನಕ್ಕೆ ಅಡ್ಡಿ ತಂದಿದ್ದರು.

  ಅಂಜನಿಪುತ್ರ ಚಿತ್ರವನ್ನ ವಿತರಣೆ ಮಾಡುತ್ತಿರುವ ನಿರ್ಮಾಪಕ ಜಾಕ್ ಮಂಜು ಸಿನಿಮಾ ಯಾವುದೇ ತೊಂದರೆ ಇಲ್ಲದೆ ಪ್ರದರ್ಶನವಾಗಲಿದೆ ಎಂದು ತಿಳಿಸಿದ್ದಾರೆ. ಸುಮಾರು 400ಕ್ಕೂ ಹೆಚ್ಚು ಚಿತ್ರ ಮಂದಿರದಲ್ಲಿ ಅಂಜನಿಪುತ್ರ ಸಿನಿಮಾ ಪ್ರದರ್ಶನವಾಗುತ್ತಿದೆ.

  ಭರ್ಜರಿಯಾಗಿ ಪ್ರದರ್ಶನ ಕಾಣುತ್ತಿರುವ ಚಿತ್ರಕ್ಕೆ ಸ್ಟೇ ತಂದಿರುವ ಹಿನ್ನಲೆಯಲ್ಲಿ ಪುನೀತ್ ರಾಜ್ ಕುಮಾರ್ ಅಭಿಮಾನಿಗಳು ಚಿತ್ರಮಂದಿರದ ಮುಂದೆ ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ.

  ಬೆಂಗಳೂರಿನ ಟೋಲ್ ಗೇಟ್ ಬಳಿ ಇರುವ ಪ್ರಸನ್ನ ಹಾಗೂ ಕೆ ಜಿ ರಸ್ತೆಯಲ್ಲಿರುವ ತ್ರಿವೇಣಿ ಥಿಯೇಟರ್ ಬಳಿ ಕಪ್ಪು ಪಟ್ಟಿ ಧರಿಸಿ ವಕೀಲರ ಈ ನೀತಿಯನ್ನ ವಿರೋಧಿಸಲಿದ್ದಾರೆ.

  English summary
  Puneeth Rajkumar starrer Anjaniputra, which has been running successfully across the State since Thursday, faced a legal hurdle on Saturday. City civil court staying for the movie, Fans will protest in front of the theater.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X