ಪುನೀತ್ ರಾಜ್‌ಕುಮಾರ್ ಅಭಿಮಾನಿಗಳಿಂದ ರವಿಚಂದ್ರನ್‌ಗೊಂದು ಬೇಡಿಕೆ
ಇಂದು ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಹುಟ್ಟುಹಬ್ಬ. ಚಂದನವನದ ಸ್ಟಾರ್ ನಟ-ನಟಿಯರು ರವಿಚಂದ್ರನ್ ಹುಟ್ಟುಹಬ್ಬಕ್ಕೆ ಶುಭ ಕೋರುತ್ತಿದ್ದಾರೆ.
Recommended Video
ಪುನೀತ್ ರಾಜ್‌ಕುಮಾರ್ ಸಹ ರವಿಚಂದ್ರನ್ ಹುಟ್ಟುಹಬ್ಬಕ್ಕೆ ಶುಭ ಕೋರಿದ್ದಾರೆ. ರವಿಚಂದ್ರನ್ ಒಟ್ಟಿಗಿರುವ ಚಿತ್ರವನ್ನು ಪೋಸ್ಟ್ ಮಾಡಿ ಶುಭ ಕೋರಿದ್ದಾರೆ ಅಪ್ಪು.
ಪುನೀತ್ ರಾಜ್‌ಕುಮಾರ್ ಅಭಿಮಾನಿಗಳೂ ಸಹ ರವಿಚಂದ್ರನ್ ಅವರಿಗೆ ಶುಭ ಕೋರಿದ್ದಾರೆ. ಜೊತೆಗೆ ಕೆಲವು ಪುನೀತ್ ರಾಜ್‌ಕುಮಾರ್ ಅಭಿಮಾನಿಗಳು ರವಿಚಂದ್ರನ್ ಬಳಿ ಸಾಮಾಜಿಕ ಜಾಲತಾಣದಲ್ಲಿ ಬೇಡಿಕೆಯೊಂದನ್ನಿಟ್ಟಿದ್ದಾರೆ.

ಅಣ್ಣ-ಅಪ್ಪ ಪಾತ್ರಗಳಿಗೆ ಹೊರಳಿದ್ದಾರೆ ರವಿಚಂದ್ರನ್
ನಾಯಕನಟನಾಗಿ ಮಿಂಚುತ್ತಿದ್ದ ನಟ ರವಿಚಂದ್ರನ್ ಹಿರಿಯ ನಟನ ಪಾತ್ರಗಳಿಗೆ ಹೊರಳಿಕೊಂಡಿದ್ದಾಗಿದೆ. ಅವರು ಅಣ್ಣನ ಪಾತ್ರಗಳಲ್ಲಿ ಅಭಿನಯಿಸಿ ಅಪ್ಪನ ಪಾತ್ರಗಳನ್ನೂ ಅಭಿನಯಿಸಿದ್ದಾರೆ.

ಸುದೀಪ್‌ಗೆ ಅಣ್ಣ-ಅಪ್ಪನ ಪಾತ್ರದಲ್ಲಿ ಅಭಿನಯ
ಸುದೀಪ್ ಗೆ ಅಣ್ಣನಾಗಿ, ಅಪ್ಪನಾಗಿ ಅಭಿನಯಿಸಿರುವ ರವಿಚಂದ್ರನ್ ದರ್ಶನ್ ಜೊತೆಗೂ ಕುರುಕ್ಷೇತ್ರದಲ್ಲಿ ಅಭಿನಯಿಸಿದ್ದಾರೆ. ಆದರೆ ಪುನೀತ್ ರಾಜ್‌ಕುಮಾರ್ ಜೊತೆಗೆ ಈವರೆಗೆ ಬೆಳ್ಳಿ ತೆರೆ ಮೇಲೆ ಕಾಣಿಸಿಕೊಂಡಿಲ್ಲ.

ರವಿಚಂದ್ರನ್-ಅಪ್ಪು ಒಟ್ಟಿಗೆ ನಟಿಸಲಿ: ಅಭಿಮಾನಿಗಳ ಬೇಡಿಕೆ
ಇಂದು ರವಿಚಂದ್ರನ್ ಹುಟ್ಟುಹಬ್ಬಕ್ಕೆ ವಿಶ್ ಮಾಡಿರುವ ಪುನೀತ್ ರಾಜ್‌ಕುಮಾರ್ ಫ್ಯಾನ್ ಪೇಜ್‌ನ ಅಭಿಮಾನಿಗಳು. ರವಿಚಂದ್ರನ್, ಅಪ್ಪುಗೆ ಅಣ್ಣನಾಗಿ, ತಂದೆಯಾಗಿ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿ ಎಂಬ ಆಸೆ ವ್ಯಕ್ತಪಡಿಸಿದ್ದಾರೆ.

ಪುನೀತ್ ಸಿನಿಮಾಗಳಿಗೆ ರವಿಚಂದ್ರನ್ ಕ್ಲ್ಯಾಪ್
ಪುನೀತ್ ರಾಜ್‌ಕುಮಾರ್ ಮತ್ತು ರವಿಚಂದ್ರನ್ ಒಟ್ಟಿಗೆ ನಟಿಸಿಲ್ಲ ಆದರೆ ಪುನೀತ್ ಅವರ ಬಹುತೇಕ ಸಿನಿಮಾಗಳಿಗೆ ಮೊದಲ ಕ್ಲ್ಯಾಪ್ ಮಾಡುವುದು ರವಿಚಂದ್ರನ್. ದೊಡ್ಮನೆ ಹಾಗೂ ರವಿಚಂದ್ರನ್ ನಡುವೆ ಬಹು ಆತ್ಮೀಯ ಬಂಧ ಮೊದಲಿನಿಂದಲೂ ಇದೆ.


Click it and Unblock the Notifications