'ಜೇಮ್ಸ್' ಸ್ವಾಗತಕ್ಕೆ ಅಪ್ಪು ಅಭಿಮಾನಿಗಳ ಅದ್ಧೂರಿ ತಯಾರಿ: ವಿಶೇಷತೆಗಳು ಏನೇನು?

ಪುನೀತ್ ರಾಜ್‌ಕುಮಾರ್ ಪೂರ್ಣ ಪ್ರಮಾಣದ ನಾಯಕ ನಟನಾಗಿ ನಟಿಸಿದ ಕೊನೆಯ ಸಿನಿಮಾ 'ಜೇಮ್ಸ್' ಅಪ್ಪು ಹುಟ್ಟುಹಬ್ಬದಂದು (ಮಾರ್ಚ್ 17) ಬಿಡುಗಡೆ ಆಗುತ್ತಿದ್ದು, ಸಿನಿಮಾವನ್ನು ಅದ್ಧೂರಿಯಾಗಿ ಸ್ವಾಗತಿಸಲು ಅಪ್ಪು ಅಭಿಮಾನಿಗಳು ಈಗಾಗಲೇ ಸಂಕಲ್ಪ ಮಾಡಿದ್ದಾರೆ.

ಹಿಂದೆ ಯಾವ ಹೀರೋನ ಸಿನಿಮಾ ಬಿಡುಗಡೆಗೂ ಮಾಡಿರದ ಅಬ್ಬರ 'ಜೇಮ್ಸ್' ಸಿನಿಮಾ ಬಿಡುಗಡೆಗೆ ಅಪ್ಪು ಅಭಿಮಾನಿಗಳು ಮಾಡಲಿದ್ದಾರೆ. 'ಜೆಮ್ಸ್' ಬಿಡುಗಡೆ ದಿನಾಂಕ ಅಭಿಮಾನಿಗಳು ಆಯೋಜಿಸಿರುವ ಕಾರ್ಯಕ್ರಮದ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದ್ದು, ಕಾರ್ಯಕ್ರಮದ ಪಟ್ಟಿ ನೋಡಿದರೆ ಇದ್ಯಾವ ಬೃಹತ್ ಜಾತ್ರೆಗೂ ಕಡಿಮೆ ಇಲ್ಲ ಎಂದೆನಿಸುತ್ತದೆ.

'ಜೇಮ್ಸ್' ಬಿಡುಗಡೆ ದಿನ ವೀರೇಶ್ ಚಿತ್ರಮಂದಿರದ ಬಳಿ ನಡೆಯಲಿರುವ ಕಾರ್ಯಕ್ರಮದ ಪಟ್ಟಿ ಇಂದು ಬಿಡುಗಡೆ ಆಗಿದ್ದು, ಕಾರ್ಯಕ್ರಮಗಳ ಪಟ್ಟಿ ಈ ಕೆಳಕಂಡಂತಿದೆ.

Puneeth Rajkumar Fans Welcoming James Movie Never Before Style

* ಅಪ್ಪು ನಾಯಕ ನಟನಾಗಿ ನಟಿಸಿರುವ 31 ಚಿತ್ರಗಳ ಬೃಹತ್ ಕಟೌಟ್​ ಹಾಕಲಾಗುವುದು. ಎಲ್ಲಾ ಕಟೌಟ್​ಗಳಿಗೂ ಬಾರಿ ಹೂವಿನ ಹಾರ ಹಾಕಲಾಗುವುದು.

* ಹೆಲಿಕ್ಯಾಫ್ಟರ್​ನಿಂದ ಅಪ್ಪು ಕಟೌಟ್​ಗಳಿಗೆ ಪುಷ್ಪಾರ್ಚನೆ ಮಾಡಲಾಗುವುದು.

* ಮಾರ್ಚ್ 18ರ ಬೆಳಗ್ಗೆ ಸಿಹಿ ಹಂಚಿಕೆ, ಮಧ್ಯಾಹ್ನ ಅನ್ನದಾನ, ಸಂಜೆ ದೀಪೋತ್ಸವ

* ಮಾರ್ಚ್‌ 19ಕ್ಕೆ ಅನ್ನದಾನ, ನೇತ್ರದಾನ ತಪಾಸಣೆ, ರಕ್ತದಾನ ಶಿಬಿರ

* ಮಾರ್ಚ್ 20ಕ್ಕೆ ಚಿಕ್ಕನ್ ಬಿರಿಯಾನಿ ಹಂಚಿಕೆ

* ಸಂಜೆ ಹೂವಿನ ಪಲ್ಲಕಿಯಲ್ಲಿ ಅಪ್ಪು-ರಾಜ್ ಭಾವಚಿತ್ರವನ್ನು ರಾಜಾಜಿನಗರ ಸಮುದಾಯ ಭವನದಿಂದ ವೀರೇಶ್ ಚಿತ್ರಮಂದಿರಕ್ಕೆ ಮೆರವಣಿಗೆ.

* ಸಂಜೆ 6 ಗಂಟೆಗೆ ಡಿಜೆ ಅಳವಡಿಸಿ ನೃತ್ಯ ಕಾರ್ಯಕ್ರಮ

Puneeth Rajkumar Fans Welcoming James Movie Never Before Style

ಕಮಲಾನಗರದ ವೀರಭದ್ರೇಶ್ವರ ಚಿತ್ರಮಂದಿರದಲ್ಲಿ ಜೇಮ್ಸ್ ಸ್ಪೆಷಲ್

* ಅಭಿಮಾನಿಗಳ ಜೊತೆ 'ಜೇಮ್ಸ್' ಚಿತ್ರದ ಕಲಾವಿದರು ಸಿನಿಮಾ ವೀಕ್ಷಣೆ.

* ಸ್ಯಾಂಡಲ್​ವುಡ್​ನ ಹಲವು ನಟ-ನಟಿಯರು ಅಭಿಮಾನಿಗಳ ಜೊತೆ 'ಜೇಮ್ಸ್' ವೀಕ್ಷಣೆ.

* ರಾಜ್ ಕುಮಾರ್, ಪಾರ್ವತಮ್ಮ, ಪುನೀತ್ ಅವರ ಬೃಹತ್ ಕಟೌಟ್ ಹಾಕಲಾಗುವುದು.

* ಹೆಲಿಕ್ಯಾಫ್ಟರ್​ನಿಂದ ಪುನೀತ್​ ಕಟೌಟ್​​ಗೆ ನಿರಂತರ 1 ಗಂಟೆ ಪುಷ್ಪಾರ್ಚನೆ.

* ಹೆಲಿಕ್ಯಾಫ್ಟರ್​ನಿಂದ 40 ಅಡಿಯ ಪುನೀತ್ ಫೋಟೋ ತೂಗು ಬಿಡಲಾಗುವುದು.

* ಡೊಳ್ಳು ಕುಣಿತ, ಪೂಜಾಕುಣಿತ, ವೀರಗಾಸೆ, ಕೇರಳದ ಪ್ರಸಿದ್ಧ ವಾದ್ಯದವರಿಂದ ವಾದ್ಯಗೋಷ್ಠಿ ಮತ್ತು ಬೆಂಗಳೂರು ತಮಟೆ.

* ಬೆಳ್ಳಿಪರದೆ ಮುಂದೆ ಪುನೀತ್​ರವರ ವಿಶೇಷ ಲೈಟಿಂಗ್ಸ್ ವ್ಯವಸ್ಥೆ೦.

* ಬಸವೇಶ್ವರನಗರ ಸರ್ಕಲ್​ನಿಂದ ಚಿತ್ರಮಂದಿರವರೆಗೂ ಬೆಳ್ಳಿರಥದ ಮೆರವಣಿಗೆ.

* 4 ಗಂಟೆ ಶೋಗೆ ಕಾಫಿ, ಟೀ, ಬಿಸ್ಕೆಟ್

* 10 ಗಂಟೆ ಶೋಗೆ ಮಸಾಲ ದೋಸೆ

* 1 ಗಂಟೆ ಶೋಗೆ ಚಿಕ್ಕನ್ ಬಿರಿಯಾನಿ

* 4 ಗಂಟೆ ಶೋಗೆ ಸಮೋಸ, ಟೀ

* 7 ಗಂಟೆ ಶೋಗೆ ಗೋಬಿ ಮಂಚೂರಿ ವಿತರಣೆ ಮಾಡಲಾಗುತ್ತದೆ.

More from Filmibeat

English summary
Puneeth Rajkumar fans welcoming his last movie James in never before style. Many fans associations already released the list of programs they are going to do on the release day.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X