twitter
    For Quick Alerts
    ALLOW NOTIFICATIONS  
    For Daily Alerts

    ಪುನೀತ್ ರಾಜ್‌ಕುಮಾರ್ ನಾಯಕನಾದ ಮೊದಲ ಸಿನಿಮಾ 'ಅಪ್ಪು'ಗೆ 20 ವರ್ಷ

    |

    ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್‌ಗೆ ಸಿನಿಮಾವೇನು ಹೊಸದಾಗಿರಲಿಲ್ಲ. ಬಾಲ್ಯದಲ್ಲೇ ಬಣ್ಣ ಹಚ್ಚಿ ಅನುಭವಿದ್ದ ಪುನೀತ್ ನಾಯಕನಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಡಲು ವೇದಿಕೆ ಸಜ್ಜಾಗಿತ್ತು. ಅಣ್ಣಾವ್ರ ಮೂರನೇ ಸುಪುತ್ರ ಸ್ಯಾಂಡಲ್‌ವುಡ್‌ಗೆ ನಾಯಕನಾಗಿ ಎಂಟ್ರಿ ಕೊಡಲು ಸಕಲ ಸಿದ್ಧತೆಗಳು ಕೂಡ ನಡೆಯುತ್ತಿತ್ತು. ಪುನೀತ್ ಸ್ಯಾಂಡಲ್‌ವುಡ್‌ಗೆ ಪವರ್‌ಫುಲ್ ಆಗಿ ಎಂಟ್ರಿ ಕೊಡಬೇಕು ಅಂತ ಡಾ.ರಾಜ್‌ ಕುಟುಂಬ ನಿರ್ಧರಿಸಿತ್ತು.

    Puneeth Rajkumar: 102 ಕವಿಗಳಿಂದ ಕವನ ಸಂಗ್ರಹಿಸಿ ಬಿಡುಗಡೆಗೆ ಮುಂದಾದ ಅಪ್ಪು ಫ್ಯಾನ್ಸ್Puneeth Rajkumar: 102 ಕವಿಗಳಿಂದ ಕವನ ಸಂಗ್ರಹಿಸಿ ಬಿಡುಗಡೆಗೆ ಮುಂದಾದ ಅಪ್ಪು ಫ್ಯಾನ್ಸ್

    ಪಾರ್ವತಮ್ಮ ರಾಜ್‌ಕುಮಾರ್ ತಮ್ಮದೇ ನಿರ್ಮಾಣ ಸಂಸ್ಥೆ ಪೂರ್ಣಿಮಾ ಎಂಟರ್‌ಪ್ರೈಸಸ್ ಈ ಸಿನಿಮಾ ನಿರ್ಮಾಣಕ್ಕೆ ಮುಂದಾಗಿತ್ತು. ಆಗ ದೊಡ್ಮನೆ ಕಣ್ಣಿಗೆ ಬಿದ್ದಿದ್ದೇ ಟಾಲಿವುಡ್‌ನ ಸ್ಟಾರ್ ನಿರ್ದೇಶಕ ಪುರಿ ಜಗನ್ನಾಥ್‌. 2001ರಲ್ಲಿ ಪುರಿ ಜಗನ್ನಾಥ್ 'ಯುವರಾಜ' ಸಿನಿಮಾವನ್ನು ನಿರ್ದೇಶಿಸಿದ್ದರು. ಶಿವಣ್ಣ, ಭಾವನಾ ಬಾನಿ, ಲಿಸಾ ರೇ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಈ ಸಿನಿಮಾ ಹಿಟ್ ಆಗುತ್ತಿದ್ದಂತೆ ನಾಯಕನಾಗಿ ಪುನೀತ್ ರಾಜ್‌ಕುಮಾರ್ ಪರಿಚಯ ಮಾಡಲು ಪುರಿ ಜಗನ್ನಾಥ್‌ಗೆ ಆಹ್ವಾನ ನೀಡಲಾಗಿತ್ತು. ಇದೇ ಸಿನಿಮಾ ಇಂದು ( ಏಪ್ರಿಲ್ 26) 20 ವರ್ಷಗಳನ್ನು ಮುಗಿಸಿದೆ.

    ಅಪ್ಪುಗೆ 20 ವರ್ಷ

    ಅಪ್ಪುಗೆ 20 ವರ್ಷ

    ಪುನೀತ್ ರಾಜ್‌ಕುಮಾರ್‌ರನ್ನು ಸ್ಯಾಂಡಲ್‌ವುಡ್‌ಗೆ ಪರಿಚಯ ಮಾಡಲು ಪವರ್‌ಫುಲ್ ಸಬ್ಜೆಕ್ಸ್ ಬೇಕಿತ್ತು. ಕಾಲೇಜ್ ಲವ್ ಸ್ಟೋರಿಯಾಗಿದ್ದರೂ, ಫ್ಯಾಮಿಲಿ ಓರಿಯೆಂಟೆಡ್ ಸಿನಿಮಾ ಆಗಿರಬೇಕು ಎಂದು ಅಣ್ಣಾವ್ರ ಕುಟುಂಬ ಬಯಸಿತ್ತು. ಹೀಗಾಗಿ ಪುರಿ ಜಗನ್ನಾಥ್ ಕಂಪ್ಲೀಟ್ ಫ್ಯಾಮಿಲಿ ಕಥೆಯನ್ನು ತೆರೆಮೇಲೆ ತರಲು ಮುಂದಾಗಿದ್ದರು. ಅದುವೇ 'ಅಪ್ಪು'. ಪುನೀತ್ ಪವರ್‌ಫುಲ್ ಆಗಿ ಎಂಟ್ರಿ ಕೊಟ್ಟ ಈ ಸಿನಿಮಾ, 2002, ಏಪ್ರಿಲ್ 26 ರಂದು ಗ್ರ್ಯಾಂಡ್ ಆಗಿ ರಿಲೀಸ್ ಆಗಿತ್ತು. ಸ್ಯಾಂಡಲ್‌ವುಡ್ ಬಾಕ್ಸಾಫೀಸ್‌ನಲ್ಲಿ ಗುಡುಗಿದ್ದ ಈ ಸಿನಿಮಾ ತೆರೆಕಂಡು ಇಂದಿಗೆ 20 ವರ್ಷಗಳನ್ನು ಕಳೆದಿವೆ.

    Puneeth Rajkumar Birthday: ಪುನೀತ್ ಬದುಕು ಆದರ್ಶಪ್ರಾಯ: ಸಿಎಂ ಬಸವರಾಜ ಬೊಮ್ಮಾಯಿPuneeth Rajkumar Birthday: ಪುನೀತ್ ಬದುಕು ಆದರ್ಶಪ್ರಾಯ: ಸಿಎಂ ಬಸವರಾಜ ಬೊಮ್ಮಾಯಿ

    'ಅಪ್ಪು' ಚಿತ್ರಮಂದಿರಲ್ಲಿ 200 ದಿನ ಪ್ರದರ್ಶನ

    'ಅಪ್ಪು' ಚಿತ್ರಮಂದಿರಲ್ಲಿ 200 ದಿನ ಪ್ರದರ್ಶನ

    ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ನಾಯಕನಾಗಿ ಎಂಟ್ರಿ ಕೊಟ್ಟ ಮೊದಲ ಸಿನಿಮಾ ನೋಡಿ ದೊಡ್ಮನೆ ಅಭಿಮಾನಿಗಳು ಫುಲ್ ಖುಷಿಯಾಗಿದ್ದರು. ಅಪ್ಪು ಆಕ್ಷನ್, ಅಪ್ಪು ಡ್ಯಾನ್ಸ್ ನೋಡಿ ಅಭಿಮಾನಿಗಳು ಕುಣಿದು ಕುಪ್ಪಳಿಸಿದ್ದರು. ಲವ್‌ಸ್ಟೋರಿ, ಆಕ್ಷನ್, ಕಾಮಿಡಿ ಎಲ್ಲಾ ಎಲಿಮೆಂಟ್ಸ್‌ ಈ ಸಿನಿಮಾದಲ್ಲಿ ಇತ್ತು. ಹೀಗಾಗಿ ಪ್ರೇಕ್ಷಕರು ಮುಗಿಬಿದ್ದು ಸಿನಿಮಾ ನೋಡಿದ್ದರು. ಅಪ್ಪು ನಾಯಕನಾದ ಮೊದಲ ಸಿನಿಮಾ ಥಿಯೇಟರ್‌ಗಳಲ್ಲಿ 100 ದಿನ ಅಲ್ಲ 200 ದಿನ ಓಡಿತ್ತು.

    ಅಪ್ಪು 100ನೇ ದಿನದ ಸಂಭ್ರಮಕ್ಕೆ ರಜನಿ ಅತಿಥಿ

    ಅಪ್ಪು 100ನೇ ದಿನದ ಸಂಭ್ರಮಕ್ಕೆ ರಜನಿ ಅತಿಥಿ

    ಅಣ್ಣಾವ್ರ ಮೂರನೇ ಪುತ್ರ ಪುನೀತ್ ಚೊಚ್ಚಲ ಸಿನಿಮಾ 100 ದಿನಗಳನ್ನು ಪೂರೈಸಿದ ಖುಷಿಯಲ್ಲಿ ಅದ್ಧೂರಿ ಸಂಭ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಖುಷಿಯನ್ನು ಅಭಿಮಾನಿಗಳೊಂದಿಗೆ ಹಂಚಿಕೊಳ್ಳಲು ದೊಡ್ಮನೆ ಕುಟುಂಬ ನಿರ್ಧರಿಸಿತ್ತು. ಈ ವಿಶೇಷ ಕಾರ್ಯಕ್ರಮಕ್ಕೆ ರಜನಿಕಾಂತ್ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಅಪ್ಪು ಅಭಿನಯ ಕಂಡ ರಜನಿಕಾಂತ್ ಕೂಡ ಹರ್ಷ ವ್ಯಕ್ತಪಡಿಸಿದ್ದರು. ಅಪ್ಪು ಫೈಟ್, ಡ್ಯಾನ್ಸ್ ಎಲ್ಲವೂ ಸೂಪರ್‌ಸ್ಟಾರ್‌ಗೆ ತುಂಬಾನೇ ಇಷ್ಟ ಆಗಿತ್ತು.

    ಡಿ ಬಾಸ್ ಅಮ್ಮ ಮೀನಾ ದರ್ಶನ್‌ರನ್ನು ಅಪ್ಪು ಎಂದು ಕರೆಯುವುದೇಕೆ? ಏನಿದರ ಸೀಕ್ರೆಟ್?ಡಿ ಬಾಸ್ ಅಮ್ಮ ಮೀನಾ ದರ್ಶನ್‌ರನ್ನು ಅಪ್ಪು ಎಂದು ಕರೆಯುವುದೇಕೆ? ಏನಿದರ ಸೀಕ್ರೆಟ್?

    ಅಪ್ಪು ನಾಲ್ಕು ಭಾಷೆಗಳಿಗೆ ರಿಮೇಕ್

    ಅಪ್ಪು ನಾಲ್ಕು ಭಾಷೆಗಳಿಗೆ ರಿಮೇಕ್

    ಪುನೀತ್ ನಾಯಕನಾದ ಮೊದಲ ಸಿನಿಮಾ 'ಅಪ್ಪು' ಬೇರೆ ಬೇರೆ ಭಾಷೆಗಳಿಗೆ ರಿಮೇಕ್ ಆಗಿದೆ. ಪುರಿ ಜಗನ್ನಾಥ್ ಇದೇ ಸಿನಿಮಾವನ್ನು ತೆಲುಗಿನಲ್ಲಿ 'ಇಡಿಯಟ್' ಎಂಬ ಹೆಸರಿನಲ್ಲಿ ರಿಮೇಕ್ ಮಾಡಿದ್ದರು. ಅಲ್ಲಿ ಅಪ್ಪು ಪಾತ್ರದಲ್ಲಿ ರವಿತೇಜ ನಟಿಸಿದ್ದರು. ತಮಿಳಿನಲ್ಲಿ 'ಧಮ್' ಎಂಬ ಹೆಸರಲ್ಲಿ ರಿಮೇಕ್ ಆಗಿತ್ತು. ಅಂದ್ಹಾಗೆ ತೆಲುಗು ಹಾಗೂ ತಮಿಳು ಎರಡೂ ಅವತರಣಿಕೆಗೂ ರಕ್ಷಿತಾ ನಾಯಕಿಯಾಗಿದ್ದರು. ಬೆಂಗಾಲಿಯಲ್ಲಿ 'ಹೀರೊ' ಹಾಗೂ ಬಾಂಗ್ಲಾದೇಶಿ ಬೆಂಗಾಲಿಯಲ್ಲಿ 'ಪ್ರಿಯಾ ಅಮರ್ ಪ್ರಿಯಾ' ಎಂಬ ಟೈಟಲ್‌ನಲ್ಲಿ ಈ ಸಿನಿಮಾ ರಿಮೇಕ್ ಆಗಿದೆ.

    English summary
    Puneeth Rajkumar First Movie As A Lead Actor Appu Completes 20 Years. Know More,
    Tuesday, April 26, 2022, 16:33
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X