ಪುನೀತ್ ಅಂತ್ಯಕ್ರಿಯೆ ವೇಳೆ ತುಮಕೂರು ರಸ್ತೆಯಲ್ಲಿ ಸಂಚಾರ ಬದಲಾವಣೆ
ನಟ ಪುನೀತ್ ರಾಜ್ ಕುಮಾರ್ ಅವರ ಅಂತ್ಯ ಸಂಸ್ಕಾರ ಹಿನ್ನೆಲೆಯಲ್ಲಿ ಬೆಂಗಳೂರಿನ ಹಲವು ರಸ್ತೆಗಳಲ್ಲಿ ಸಂಚಾರ ಮಾರ್ಗ ಬದಲಿಸಲಾಗಿದೆ. ಪುನೀತ್ ಅಂತ್ಯಕ್ರಿಯೆ ವೇಳೆ ಬೆಂಗಳೂರಿನಲ್ಲಿ ಸಂಚಾರ ಮಾರ್ಗ ಬದಲಾವಣೆ ಕುರಿತು ಎಂದು ಪಶ್ಚಿಮ ವಿಭಾಗದ ಸಂಚಾರ ವಿಭಾಗದ ಡಿಸಿಪಿ ಕುಲದೀಪ್ ಕುಮಾರ್ ಆರ್. ಜೈನ್ ಸ್ಪಷ್ಟನೆ ನೀಡಿದ್ದಾರೆ.
ಪುನೀತ್ ರಾಜ್ ಕುಮಾರ್ ಅಂತ್ಯಕ್ರಿಯೆ ಮಹಾಲಕ್ಷ್ಮೀ ಬಡಾವಣೆಯಲ್ಲಿರುವ ಡಾ. ರಾಜ್ ಕುಮಾರ್ ಸ್ಮಾರಕ ಬಳಿ ಭಾನುವಾರ ನಡೆಯಲಿದೆ.
ಅಂತ್ಯಕ್ರಿಯೆ ನಡೆಯುವ ವೇಳೆ, ಮೈಸೂರು ರಸ್ತೆಯಿಂದ ತುಮಕೂರು ರಸ್ತೆ ಕಡೆ ಬರುವ ವಾಹನ ಸಂಚಾರ ನಿಷೇಧಿಸಲಾಗುತ್ತದೆ. ಮೈಸೂರು ರಸ್ತೆಯಿಂದ ತುಮಕೂರು ರಸ್ತೆ ಕಡೆ ಸಂಚರಿಸುವ ವಾಹನಗಳು ಮಾಗಡಿ ರಸ್ತೆ, ನೈಸ್ ರೋಡ್ ಮೂಲಕ ತುಮಕೂರು ರಸ್ತೆ ಸಂಪರ್ಕಿಸಲು ಬದಲಿಸಲಾಗಿದೆ. ತುಮಕೂರು ರಸ್ತೆಯಿಂದ ಮೈಸೂರು ರಸ್ತೆ ಕಡೆ ಸಂಚರಿಸುವ ವಾಹನಗಳು ನೈಸ್ ರಸ್ತೆ, ನಾಯಂಡಹಳ್ಳಿ, ನಾಗರಭಾವಿ ಮೂಲಕ ಸುಮ್ಮನಹಳ್ಳಿ ಜಂಕ್ಷನ್ ಮೂಲಕ ತುಮಕೂರು ರಸ್ತೆ ತಲುಪಲು ಅವಕಾಶ ಕಲ್ಪಿಸಲಾಗಿದೆ.

ತುಮಕೂರು ರಸ್ತೆ ಕಡೆಯಿಂದ ಬೆಂಗಳೂರು ನಗರಕ್ಕೆ ಮೇಲ್ಸೇತುವೆ ಮೂಲಕ ಹಾದು ಹೋಗುವ ವಾಹನಗಳು ಮತ್ತು ತುಮಕೂರು ರಸ್ತೆಯಿಂದ ಮೈಸೂರು ಕಡೆಗೆ ಹೋಗುವ ವಾಹನಗಳ ಸಿಎಂಟಿಐ ಜಂಕ್ಷನ್‌ನಲ್ಲಿ ತಿರುವು ಪಡೆದು ಚಲಿಸಲು ಅವಕಾಶ ಕಲ್ಪಿಸಲಾಗಿದೆ.
ಜಾಲಹಳ್ಳಿ ಕ್ರಾಸ್ ಕಡೆಯಿಂದ ರಾಜ್ ಕುಮಾರ್ ಸಮಾಧಿ ಕಡೆಗೆ ಹೋಗುವ ವಾಹನಗಳು ಸಿಎಂಟಿಎಐ ಜಂಕ್ಷನಲ್ಲಿ ತಿರುವು ಪಡೆದು ಟಿವಿಎಸ್ ಕ್ರಾಸ್ ಮತ್ತು ಸೊನಾಲ್ ಗಾರ್ಮೆಂಟ್ ರಸ್ತೆ ಮೂಲಕ ಸಂಚರಿಸಲು ಅವಕಾಶ ಕಲ್ಪಿಸಲಾಗಿದೆ.
ಮಹಾಲಕ್ಷ್ಮೀ ಬಡಾವಣೆಯಿಂದ ರಾಜ್ ಕುಮಾರ್ ಸಮಾಧಿ ವರೆಗೆ ಹೋಗುವ ವಾಹನಗಳು ಕೃಷ್ಣಾನಂದ ನಗರ ಜಂಕ್ಷನ್ ಬಳಿ ಮಾರ್ಗ ಬದಲಾವಣೆ ಮಾಡಲಾಗಿದೆ. ಈ ಸಂಚಾರ ಮಾರ್ಗ ಕೇವಲ ಪುನೀತ್ ರಾಜ್ ಕುಮಾರ್ ಅವರ ಅಂತ್ಯಕ್ರಿಯೆ ವೇಳೆಗೆ ಅನ್ವಯಿಸಲಿದೆ ಎಂದು ಪಶ್ಚಿಮ ವಿಭಾಗದ ಸಂಚಾರ ಡಿಸಿಪಿ ಕುಲದೀಪ್ ಕುಮಾರ್ ಆರ್. ಜೈನ್ ತಿಳಿಸಿದ್ದಾರೆ.
Recommended Video
ಪುನೀತ್ ರಾಜ್ ಕುಮಾರ್ ಅವರ ಅಂತ್ಯಕ್ರಿಯೆ ಶನಿವಾರ ಸಂಜೆ ಮಾಡಲಾಗುತ್ತದೆ ಎಂಬ ಮಾಹಿತಿ ಮೊದಲು ಬಂದಿತ್ತು. ಅವರ ಅಂತ್ಯಕ್ರಿಯೆ ದಿನಾಂಕವನ್ನು ಭಾನುವಾರಕ್ಕೆ ಮುಂದೂಡಲಿದ್ದು, ವಾಹನ ಸಂಚಾರಕ್ಕೆ ಅಡಚಣೆಯಾಗದಂತೆ ಸಂಚಾರ ನಿಯಮದಲ್ಲಿ ಬದಲಾವಣೆ ಮಾಡಲಾಗಿದೆ. ಆದರೆ ಈ ಬದಲಾವಣೆ ಅಂತ್ಯಕ್ರಿಯೆ ವೇಳೆ ಇರಲಿದ್ದು, ಉಳಿದ ಸಮಯ ಎಂದಿನಂತೆ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.


Click it and Unblock the Notifications











