Gandhada Gudi Release Date : ಕೊನೆಯ ಬಾರಿ 'ಗಂಧದ ಗುಡಿ'ಯಲ್ಲಿ ಅಪ್ಪು ದರ್ಶನ!
ಕನ್ನಡದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಎಲ್ಲರ ಮನಸ್ಸಿನಲ್ಲಿ ಎಲ್ಲರನ್ನೂ ಪ್ರೀತಿಸುವವರ ಹೃದಯದಲ್ಲಿ ಜೀವಂತವಾಗಿದ್ದಾರೆ. ಅಪ್ಪು ಎಂದರೆ ಕನ್ನಡಿಗರಿಗೆ ಅಚ್ಚುಮೆಚ್ಚು. ಅಪ್ಪು ಅವರ ಅಪ್ಪುಗೆಯ ಪ್ರೀತಿಯನ್ನು ಕನ್ನಡಿಗರು ಎಂದಿಗೂ ಮರೆಯುವುದಿಲ್ಲ.
'ಜೇಮ್ಸ್' ಸಿನಿಮಾ ಅಪ್ಪು ಅಭಿನಯದ ಕೊನೆಯ ಸಿನಿಮಾವಾಗಿತ್ತು. ಲಕ್ಷಾಂತರ ಮಂದಿ ವೀಕ್ಷಿಸಿ, ಬಿಗ್ ಸ್ಕ್ರೀನ್ ಮೇಲೆ ಅಪ್ಪುವನ್ನು ಕಣ್ತುಂಬಿಕೊಂಡರು. ಇದೀಗ ಮತ್ತೊಮ್ಮೆ ಪುನೀತ್ ರಾಜ್‌ಕುಮಾರ್‌ರನ್ನು ಬೆಳ್ಳಿಪರದೆ ಮೇಲೆ ನೋಡಲು ಪ್ರತಿಯೊಬ್ಬರು ಕಾತರರಾಗಿದ್ದಾರೆ.
ಇನ್ನು ಅಪ್ಪು ಅವರ ಬಹುನಿರೀಕ್ಷಿತ 'ಗಂಧದಗುಡಿ' ಸಾಕ್ಷ್ಯ ಚಿತ್ರ ನೋಡಲು ಅಭಿಮಾನಿಗಳು, ಕನ್ನಡಿಗರು ಪ್ರತಿಯೊಬ್ಬರು ಕಾಯುತ್ತಿದ್ದಾರೆ. ಈಗ ಈ ಸಮಯ ಹತ್ತಿರ ಬಂದಿದೆ.
ಅಕ್ಟೋಬರ್ 28ರಂದು 'ಗಂಧದ ಗುಡಿ' ರಿಲೀಸ್!
'ಗಂಧದ ಗುಡಿ' ನಟ ಪುನೀತ್ ರಾಜ್‌ಮಾರ್ ಅಭಿನಯದ ಕೊನೆಯ ಸಿನಿಮಾ. 'ಗಂಧದ ಗುಡಿ' ಸಾಕ್ಷ್ಯಚಿತ್ರ ರಿಲೀಸ್‌ಗೆ ರೆಡಿಯಾಗಿದೆ. ಸದ್ಯ 'ಗಂಧದ ಗುಡಿ' ಚಿತ್ರದ ರಿಲೀಸ್ ದಿನಾಂಕ ಪ್ರಕಟಗೊಂಡಿದೆ. ಇದೇ ಅಕ್ಟೋಬರ್ 28ಕ್ಕೆ 'ಗಂಧದ ಗುಡಿ' ರಿಲೀಸ್ ಆಗಲಿದೆ. ಈ ವಿಚಾರ ಅಧಿಕೃತವಾಗಿ ರಿವೀಲ್ ಆಗಿದೆ. ಹೊಸ ಪೋಸ್ಟರ್ ಜೊತೆಗೆ ರಿಲೀಸ್ ದಿನಂಕವನ್ನು ಪ್ರಕಟ ಮಾಡಲಾಗಿದೆ.
ಅಶ್ವಿನಿ ಪುನೀತ್ ರಾಜ್‌ಕುಮಾರ್ ಟ್ವೀಟ್!
ಈ ಬಗ್ಗೆ ಟ್ಟೀಟ್ ಮಾಡಿರುವ ಅಶ್ವಿನಿ ಪುನೀತ್ ರಾಜ್‌ಕುಮಾರ್ "ಅಪ್ಪು ಅವರ ಕೊನೆಯ ಚಿತ್ರ. ಅವರು ಅವರಾಗಿಯೇ ಕಾಣಿಸಿಕೊಂಡಿರುವ ವಿಶಿಷ್ಟ ಕಥನ. ಕರ್ನಾಟಕದ ಅದ್ಭುತ ಜಗತ್ತನ್ನು ಅನ್ವೇಷಿಸುವ ಪಯಣ. ಅವರಿಗೆ ಅಪಾರ ಪ್ರೀತಿಯನ್ನು ಕೊಟ್ಟ ನಾಡಿಗೆ ಅವರ ಪ್ರೀತಿಯ ಕಾಣಿಕೆ." ಎಂದು ಅಶ್ವಿನಿ ಪುನೀತ್ ರಾಜ್‌ಕುಮಾರ್ ಬರೆದುಕೊಂಡಿದ್ದಾರೆ.

ಅಪ್ಪು ಆಗೇ ಬರಲಿದ್ದಾರೆ ಅಪ್ಪು!
ಅಕ್ಟೋಬರ್ 28ಕ್ಕೆ ಚಿತ್ರಮಂದಿರಗಳಲ್ಲಿ ಮತ್ತೊಮ್ಮೆ ಅಪ್ಪು ಹಬ್ಬ ನಡೆಯಲಿದೆ. ಪವರ್ ಸ್ಟಾರ್ ನಾದ ಮೊಳಗಲಿದೆ. ಇದರಲ್ಲಿ ನಟ ಪುನೀತ್ ರಾಜ್‌ಕುಮಾರ್ ನಟಿಸಿಲ್ಲ. ನೈಜವಾಗಿ ಕಾಣಿಸಿಕೊಂಡಿದ್ದಾರೆ. ಅಪ್ಪು ನಿಜ ಜೀನವದಲ್ಲಿ ಹೇಗಿ ಇದ್ದರೋ ಹಾಗಿ ಕಾಣಿಸಿಕೊಂಡಿದ್ದಾರೆ. ಇಲ್ಲಿ ಯಾವುದೋ ಪಾತ್ರಕ್ಕೆ ಅಪ್ಪು ಜೀವ ತುಂಬಿಲ್ಲ. ಇಲ್ಲಿ ಪುನೀತ್ ರಾಜ್‌ಕುಮಾರ್ ಅವರಾಗಿಯೇ ತೆರೆಮೇಲೆ ಬರಲಿದ್ದಾರೆ.

ಕನ್ನಡ ರಾಜ್ಯೋತ್ಸವಕ್ಕೆ ರಿಲೀಸ್ ಆಗ್ಬೇಕಿತ್ತು!
ಇನ್ನು 'ಗಂಧದ ಗುಡಿ' ನವೆಂಬರ್‌ನಲ್ಲಿ ರಿಲೀಸ್ ಆಗ್ಬೇಕಿತ್ತು. ನವೆಂಬರ್‌ನಲ್ಲಿ ರಿಲೀಸ್ ಆಗಲಿದೆ ಎಂದು ಅಧಿಕೃತವಾಗಿ ಪ್ರಕಟಣೆ ಹೊರಡಿಸಲಾಗಿತ್ತು. ಆದರೆ ಅದು ಸಾಧ್ಯವಾಗಿಲ್ಲ. ಹಾಗಾಗಿ ಒಂದು ತಿಂಗಳು ಮೊದಲೇ ಅಕ್ಟೋಬರ್‌ನಲ್ಲಿ 'ಗಂಧದ ಗುಡಿ'ಯನ್ನು ರಿಲೀಸ್ ಮಾಡಲಾಗುತ್ತಿದೆ. ಈ ಸುದ್ದಿ ಅಪ್ಪು ಅಭಿಮಾನಿಗಳಲ್ಲಿ ಖುಷಿ ತಂದಿದೆ.


Click it and Unblock the Notifications











