ಅಪ್ಪು ಓಪನ್ ಟಾಕ್ : ''ನಾನು ಸ್ಮಗ್ಲಿಂಗ್, ಮೈನಿಂಗ್ ಮಾಡುತ್ತೇನೆ ಎಂದಿದ್ದರು!''

Recommended Video

''ನಾನು ಸ್ಮಗ್ಲಿಂಗ್, ಮೈನಿಂಗ್ ಮಾಡುತ್ತೇನೆ ಎಂದಿದ್ದರು ಪುನೀತ್ ರಾಜ್ ಕುಮಾರ್..! | FILMIBEAT KANNADA

ಸಿನಿಮಾ ಎಂದ ಮೇಲೆ ಗಾಸಿಪ್ ಗಳು ಇದ್ದೇ ಇರುತ್ತದೆ. ಆದರೆ, ಕೆಲವು ಬಾರಿ ಬರುವ ಗಾಸಿಪ್ ಗಳು ನಟರಿಗೆ ಬಹಳ ಬೇಸರ ಉಂಟು ಮಾಡುತ್ತದೆ. ಯಾವುದೇ ಆಧಾರ ಇಲ್ಲದೆ ಏನೋ ಬಂದು ಸುದ್ದಿ ಗಾಳಿಯಲ್ಲಿ ತೇಲಿ ಬಂದು ಬಿಡುತ್ತದೆ.

ನಟ ಪುನೀತ್ ರಾಜ್ ಕುಮಾರ್ ಅವರ ಬಗ್ಗೆ ಕೂಡ ಆ ರೀತಿಯ ಒಂದು ಸುದ್ದಿ ಬಂದಿತಂತೆ. ಚಿತ್ರರಂಗಕ್ಕೆ ಬರುವ ಮುನ್ನ ಪುನೀತ್ ಸ್ಮಗ್ಲಿಂಗ್ ಹಾಗೂ ಕಾನೂನುಬಾಹಿರವಾಗಿ ಮೈನಿಂಗ್ ಮಾಡುತ್ತಾರೆ ಎಂದು ಸುಳ್ಳು ಸುದ್ದಿ ಹಬ್ಬಿಸಿದ್ದರಂತೆ. ಅಂತಹ ವಿಷಯಗಳನ್ನು ಅಪ್ಪು ತಮ್ಮ ಪ್ರಾರಂಭದ ದಿನಗಳಲ್ಲಿ ಎದುರಿಸಿದ್ದರಂತೆ.

ಇಂತಹ ಘಟನೆಗಳ ಬಗ್ಗೆ ಪುನೀತ್ ಇದೀಗ ಮಾತನಾಡಿದ್ದಾರೆ. ಸದ್ಯ, ಸುದ್ದಿ ವಾಹಿನಿ ನಡೆಸಿರುವ ಸಂದರ್ಶನದಲ್ಲಿ ಪುನೀತ್ ಈ ಬಗ್ಗೆ ಹೇಳಿಕೊಂಡಿದ್ದಾರೆ. 'ನಟ ಸಾರ್ವಭೌಮ' 25 ದಿನಗಳ ಸಂಭ್ರಮದಲ್ಲಿ ನಿರ್ದೇಶಕ ಪವನ್ ಒಡೆಯರ್ ಈ ವಿಶೇಷ ಸಂದರ್ಶನ ಮಾಡಿದರು. ಈ ವೇಳೆ ಅಪ್ಪು ತಮ್ಮ ಜೀವನದ ಅನೇಕ ಸಂಗತಿಗಳ ಬಗ್ಗೆ ಓಪನ್ ಆಗಿ ಮಾತನಾಡಿದರು. ಮುಂದೆ ಓದಿ...

ಬಿಸಿನೆಸ್ ನಲ್ಲಿ ಆಸಕ್ತಿ ಇತ್ತು

ಬಿಸಿನೆಸ್ ನಲ್ಲಿ ಆಸಕ್ತಿ ಇತ್ತು

ಪುನೀತ್ ರಾಜ್ ಕುಮಾರ್ ಬಾಲ ನಟನಾಗಿ ಹೆಸರು ಮಾಡಿದ್ದರು. ತಮ್ಮ ನಟನೆಗೆ ರಾಷ್ಟ್ರ ಪ್ರಶಸ್ತಿ ಪಡೆದರು. ಅದರ ನಂತರ ನಾಯಕನಾಗುವ ಮುಂಚೆ ಬಹಳ ವರ್ಷಗಳು ಚಿತ್ರರಂಗದಲ್ಲಿ ಇರಲಿಲ್ಲ. ಆ ವೇಳೆ ಪುನೀತ್ ಗೆ ಬಿಸಿನೆಸ್ ಮಾಡುವ ಆಸೆ ಇತ್ತು. ಅದೇ ರೀತಿ ವ್ಯವಹಾರಗಳಲ್ಲಿ ತೊಡಗಿದ್ದ ಪುನೀತ್ ಬಗ್ಗೆ ಅನೇಕ ಸುಳ್ಳು ಸುದ್ದಿಗಳು ಬಂದವಂತೆ.

ಸ್ಮಗ್ಲಿಂಗ್, ಮೈನಿಂಗ್ ಎಂಬ ಸುಳ್ಳು ಸುದ್ದಿಗಳು

ಸ್ಮಗ್ಲಿಂಗ್, ಮೈನಿಂಗ್ ಎಂಬ ಸುಳ್ಳು ಸುದ್ದಿಗಳು

ಪುನೀತ್ ಬಿಸಿನೆಸ್ ಮಾಡುವ ವೇಳೆ ಅನೇಕ ಸುಳ್ಳು ಸುದ್ದಿಗಳು ಬಂದವಂತೆ. ಪುನೀತ್ ಸ್ಮಗ್ಲಿಂಗ್ ಹಾಗೂ ಕಾನೂನುಬಾಹಿರವಾಗಿ ಮೈನಿಂಗ್ ಮಾಡುತ್ತಿದ್ದಾರೆ ಅಂತ ಕೆಲವು ಪೇಪರ್ ಗಳಲ್ಲಿ ಬರೆದರಂತೆ. ಯಾವುದೇ ರೀತಿಯ ತಪ್ಪು ಮಾಡದೆ ಇದ್ದರೂ ಆ ಸಮಯದಲ್ಲಿ ಈ ರೀತಿ ಸುದ್ದಿ ಬಂತು ಎಂದು ಹೇಳಿದ್ದಾರೆ ಪುನೀತ್.

ಗೌರವ ನೀಡುವ ಕೆಲಸ ಮಾಡಬೇಕು

ಗೌರವ ನೀಡುವ ಕೆಲಸ ಮಾಡಬೇಕು

ಪುನೀತ್ ರಾಜ್ ಕುಮಾರ್ ಯಾವತ್ತಿಗೂ ಜನ ಗೌರವ ನೀಡುವ ಕೆಲಸ ಮಾಡಬೇಕು ಎಂದು ಇಷ್ಟ ಪಡುತ್ತಾರಂತೆ. ''ಮನೆಗೆ ಒಳ್ಳೆಯ ಮಗ ಆಗಬೇಕು ಎನ್ನುವುದು ನನಗೆ ಇತ್ತು. ತಂದೆ ನೋಡಿದರೆ ಭಯ ಇತ್ತು. ಅವರಿಂದ ಬಯ್ಯಿಸಿಕೊಳ್ಳಬಾರದು ಅಂತ ಸರಿಯಾಗಿ ನಡೆದುಕೊಳ್ಳುತಿದೆ. ಮರ್ಯಾದೆ ಎನ್ನುವುದನ್ನು ನಾನು ಯಾವಾಗಲು ಮನಸ್ಸಿನಲ್ಲಿ ಇಟ್ಟುಕೊಂಡಿರುತ್ತೇನೆ.'' ಅಂತಾರೆ ಅಪ್ಪು.

ತಂದೆಯನ್ನು ನೋಡಿ ಹೀರೋ ಆಗುವ ಆಸೆ

ತಂದೆಯನ್ನು ನೋಡಿ ಹೀರೋ ಆಗುವ ಆಸೆ

ಚಿಕ್ಕ ಹುಡುಗ ಆಗಿದ್ದಾಗ ತಂದೆಯ ಜೊತೆಗೆ ಹೋಗುತ್ತಿದ್ದ ಪುನೀತ್ ಗೆ ನಾನು ಹೀರೋ ಆಗಬೇಕು, ಹೀರೋ ಆದರೆ ಎಲ್ಲರೂ ಗೌರವ ನೀಡುತ್ತಾರೆ ಎನ್ನುವ ಆಸೆ ಇತಂತೆ. ಆದರೆ, ದೊಡ್ಡವರಾದ ಮೇಲೆ ನನ್ನನ್ನು ಯಾರೂ ನೋಡುತ್ತಾರೆ ಅಂತ ಅನಿಸಿತ್ತು. ಬಳಿಕ ಒಂದಷ್ಟು ತಯಾರಿ ಮಾಡಿಕೊಂಡು ಬಂದೆ. ಎಂದು ತಿಳಿಸಿದರು ಪವರ್ ಸ್ಟಾರ್.

More from Filmibeat

English summary
Power Star Puneeth Rajkumar gave clarification about rumors in his recent interview. Puneeth said there was a rumor that i did smuggling, but i dind't do that.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X