For Quick Alerts
  ALLOW NOTIFICATIONS  
  For Daily Alerts

  ದುಬಾರಿ ಉಡುಗೊರೆಯನ್ನು ಪಡೆಯದೆ, ಅಭಿಮಾನಿಗೆ ವಾಪಸ್ ಕೊಟ್ಟ ಅಪ್ಪು.!

  |

  ನೆಚ್ಚಿನ ನಟನನ್ನು ನೋಡಬೇಕು, ಭೇಟಿ ಆಗಬೇಕು, ಮಾತನಾಡಬೇಕು, ಒಂದು ಫೋಟೋ ತೆಗೆದುಕೊಳ್ಳಬೇಕು ಎಂಬ ಆಸೆ ಯಾರಿಗ್ತಾನೆ ಇರಲ್ಲ ಹೇಳಿ.?! ಇಷ್ಟದ ನಟನ ಪೋಸ್ಟರ್ ಗಳನ್ನು ಮನೆಯಲ್ಲಿ ಹಾಕಿಕೊಳ್ಳುವುದು, ಕಟೌಟ್ ಗಳಿಗೆ ಹೂವಿನ ಅಲಂಕಾರ, ಹಾಲಿನ ಅಭಿಷೇಕ ಮಾಡುವುದು, ಫೇವರಿಟ್ ನಟನ ಹೆಸರನ್ನ ಟಾಟ್ಯೂ ಹಾಕಿಸಿಕೊಳ್ಳುವ ಅಭಿಮಾನಿಗಳನ್ನು ನೀವು ನೋಡಿದ್ದೀರಾ.

  ಆದ್ರೆ, ಇಲ್ಲೊಬ್ಬರು ತನ್ನ ಅಚ್ಚುಮೆಚ್ಚಿನ ನಟನಿಗೆ ಚಿನ್ನದ ಸರ ಮತ್ತು ಪೆಂಡಿಂಟ್ ನ ಉಡುಗೊರೆಯಾಗಿ ನೀಡಲು ಮುಂದಾಗಿದ್ದರು.! ಆದ್ರೆ, ದುಬಾರಿ ಬೆಲೆಯ ಈ ಉಡುಗೊರೆಯನ್ನು ಕನ್ನಡದ ಸ್ಟಾರ್ ನಟ ಪಡೆದುಕೊಂಡಿಲ್ಲ.

  ಆ ಕನ್ನಡದ ಸ್ಟಾರ್ ನಟ ಬೇರೆ ಯಾರೂ ಅಲ್ಲ. ಅಣ್ಣಾವ್ರ ಮಗ, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್.!

  ಪುನೀತ್ ಸರಳತೆ ಹಾಗೂ ಸೌಜನ್ಯತೆಗೆ 'ಇದೇ' ಸಾಕ್ಷಿ.!ಪುನೀತ್ ಸರಳತೆ ಹಾಗೂ ಸೌಜನ್ಯತೆಗೆ 'ಇದೇ' ಸಾಕ್ಷಿ.!

  ಹೌದು, ಡಾ.ರಾಜ್ ಕುಮಾರ್ ಮತ್ತು ಪುನೀತ್ ರಾಜ್ ಕುಮಾರ್ ರವರ ಅಪ್ಪಟ ಅಭಿಮಾನಿಯಾಗಿರುವ ವ್ಯಕ್ತಿಯೊಬ್ಬರು ಇತ್ತೀಚೆಗಷ್ಟೇ ಅಪ್ಪು ನಿವಾಸಕ್ಕೆ ಭೇಟಿ ಕೊಟ್ಟಿದ್ದರು. ಆಗ, ಅಣ್ಣಾವ್ರ ಭಾವಚಿತ್ರವಿರುವ ಪೆಂಡೆಂಟ್ ಮತ್ತು ಚಿನ್ನದ ಸರವನ್ನು ಪುನೀತ್ ರಾಜ್ ಕುಮಾರ್ ಗೆ ಉಡುಗೊರೆಯಾಗಿ ನೀಡಲು ಮುಂದಾದರು.

  ಅಭಿಮಾನಿಗೆ ನಿರಾಸೆ ಮಾಡಬಾರದು ಅಂತ ಒಮ್ಮೆ ಆ ಸರ ಮತ್ತು ಪೆಂಡೆಂಟ್ ನ ಅಪ್ಪು ಧರಿಸಿದರು. ಬಳಿಕ ಆ ಸರ ಮತ್ತು ಪೆಂಡೆಂಟ್ ನ ತೆಗೆದು ಆ ಅಭಿಮಾನಿಯ ಕೊರಳಿಗೆ ಹಾಕಿದರು. ''ನಿಮ್ಮ ಪ್ರೀತಿ, ಅಭಿಮಾನವಷ್ಟೇ ನಮಗೆ ಬೇಕು. ಬೇರೇನೂ ಬೇಡ'' ಅಂತ ಹೇಳಿ ಕೆಲ ಕಾಲ ಆ ಅಭಿಮಾನಿಯ ಜೊತೆಗೆ ಅಪ್ಪು ಮಾತುಕತೆ ನಡೆಸಿದರು.

  ಪುನೀತ್ ರಾಜ್ ಕುಮಾರ್ ಬಳಿ ಇರುವ ತುಂಬಾ ಕಾಸ್ಟ್ಲೀ ವಸ್ತು ಇದೆಪುನೀತ್ ರಾಜ್ ಕುಮಾರ್ ಬಳಿ ಇರುವ ತುಂಬಾ ಕಾಸ್ಟ್ಲೀ ವಸ್ತು ಇದೆ

  ಅಣ್ಣಾವ್ರ ಮಕ್ಕಳ ಸರಳತೆಗೆ ಇದೊಂದು ಸಾಕ್ಷಿ. ಹಾಗೇ, ಎಂತೆಂಥ ಅಭಿಮಾನಿಗಳು ಇರ್ತಾರೆ ಅನ್ನೋದಕ್ಕೆ ಇದೊಂದು ಉದಾಹರಣೆ ಅಷ್ಟೇ.

  English summary
  Kannada Actor Puneeth Rajkumar gives back the costly gift given by his fan.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X