ಸ್ವಜನಪಕ್ಷಪಾತ ಚಿತ್ರರಂಗದಲ್ಲಿ ಪುನೀತ್ ರಾಜ್‌ಕುಮಾರ್ ಎಂಬ 'ಹೃದಯವಂತ'

ಸುಶಾಂತ್ ಸಿಂಗ್ ಸಾವು ಸಿನಿಮಾರಂಗದಲ್ಲಿ ದೊಡ್ಡ ಚರ್ಚೆಯನ್ನೇ ಹುಟ್ಟುಹಾಕಿದೆ. ಇಷ್ಟುದಿನ ಅಲ್ಲೊಬ್ಬರು ಇಲ್ಲೊಬ್ಬರು ಮಾತನಾಡುತ್ತಿದ್ದ 'ಸ್ವಜನಪಕ್ಷಪಾತ' ಅಥವಾ ನೆಪೊಟಿಸಮ್ ವಿರುದ್ಧ ಈಗ ದೊಡ್ಡ ಸಂಖ್ಯೆಯ ಮಂದಿ ತಿರುಗಿಬಿದ್ದಿದ್ದಾರೆ.

Recommended Video

ಹೊಸ ಪ್ರತಿಭೆಗಳು ಅಂದ್ರೆ ಪುನೀತ್ ರಾಜಕುಮಾರ್ ಹೇಗೆ ಸಪೋರ್ಟ್ ಮಾಡ್ತಾರೆ ನೋಡಿ

ಸ್ವಜನಪಕ್ಷಪಾತ ಅಥವಾ ನೆಪೊಟಿಸಮ್ (ಸಿನಿಮಾರಂಗದಲ್ಲಿ ಅಥವಾ ಯಾವುದೇ ಉದ್ಯಮದಲ್ಲಿ ಹೆಸರುಮಾಡಿರುವವರ ಮಕ್ಕಳಿಗೆ ಅಥವಾ ಅವರ ಸಂಬಂಧಿಗಳಿಗೆ ಮಾತ್ರವೇ ಅವಕಾಶ ನೀಡುವುದು) ಎಲ್ಲಾ ಚಿತ್ರರಂಗದಲ್ಲೂ ಇದೆ. ಕನ್ನಡ ಚಿತ್ರರಂಗದಲ್ಲಂತೂ 'ಸ್ವಜನಪಕ್ಷಪಾತ' ಎನ್ನುವುದು 'ಸಾಮಾನ್ಯ' ಎಂಬಂತಾಗಿಬಿಟ್ಟಿದೆ ಇಲ್ಲಿ.

ಕನ್ನಡದಲ್ಲಿ ಇಂದು ಸ್ಟಾರ್ ಎನಿಸಿಕೊಂಡಿರುವ ಬಹಳಷ್ಟು ನಟರು ಸ್ವಜನಪಕ್ಷಪಾತ ಅಥವಾ ನೆಪೊಟಿಸಮ್‌ನ ಪ್ರಾಡಕ್ಟ್‌ಗಳೇ. ಆದರೆ ತಾವು ನೆಪೊಟಿಸಮ್‌ನ ಪ್ರಾಡಕ್ಟ್‌ಗಳಾದರು ಹೊಸಬರಿಗೆ, ಪ್ರತಿಭೆ ಇದ್ದವರಿಗೆ ಸಿನಿಮಾ ರಂಗದಲ್ಲಿ ಅವಕಾಶ ನೀಡುತ್ತಿರುವ ಕೆಲವು ನಟರಿದ್ದಾರೆ, ಅವರಲ್ಲಿ ಪ್ರಮುಖರು ಪುನೀತ್ ರಾಜ್‌ಕುಮಾರ್.

ಪುನೀತ್‌ ತಂದೆ ಡಾ.ರಾಜ್‌ಕುಮಾರ್ ಅವರು ನಾಡುಕಂಡ ಶ್ರೇಷ್ಟ ನಟರಾಗಿದ್ದರು. ಅವರದ್ದು ಸಿನಿಮಾ ಕುಟುಂಬ ಹಾಗಾಗಿಯೇ ಅವರಿಗೆ ಸಿನಿಮಾ ರಂಗಕ್ಕೆ ಪ್ರವೇಶ ಅತ್ಯಂತ ಸುಲಭವಾಗಿ ಸಿಕ್ಕಿತು. ಪುನೀತ್‌ ಅವರಿಗೆ ಪ್ರತಿಭೆಯೂ ಇತ್ತು ಹಾಗಾಗಿ ಅವರು ಇಂದು ಈ ಮಟ್ಟಕ್ಕೆ ಬೆಳೆದು ನಿಂತಿದ್ದಾರೆ.

ಪುನೀತ್ ಆರಂಭಿಸಿದ್ದಾರೆ ಸಣ್ಣ ಪ್ರಯತ್ನ

ಪುನೀತ್ ಆರಂಭಿಸಿದ್ದಾರೆ ಸಣ್ಣ ಪ್ರಯತ್ನ

ಆದರೆ ತಮಗೆ ಸಿಕ್ಕ ಸುಲಭ ಅವಕಾಶ ಬೇರೆಯವರಿಗೆ ಸಿಗಬೇಕು ಎನ್ನುವ ಕಾರಣಕ್ಕೆ ತಮ್ಮ ಒಡೆತನದ ಸಿನಿಮಾ ನಿರ್ಮಾಣ ಸಂಸ್ಥೆಯಲ್ಲಿ ಹೊಸಬರಿಗೆ ಅವಕಾಶ ನೀಡುತ್ತಿದ್ದಾರೆ ಪುನೀತ್‌ ರಾಜ್‌ಕುಮಾರ್. ನೆಪೊಟಿಸಮ್‌ನ ಪ್ರಾಡಕ್ಟ್ ಆದರೂ ನೆಪೊಟಿಸಮ್ ಅನ್ನು ಅಂತ್ಯ ಮಾಡುವ ಪ್ರಯತ್ನ ಪುನೀತ್‌ ಸಣ್ಣಗೆ ಮಾಡುತ್ತಿದ್ದಾರೆ.

ಹೊಸಬರಿಗೆ, ಉತ್ಸಾಹಿಗಳಿಗೆ ಅವಕಾಶ ನೀಡಲಾಗುತ್ತಿದೆ

ಹೊಸಬರಿಗೆ, ಉತ್ಸಾಹಿಗಳಿಗೆ ಅವಕಾಶ ನೀಡಲಾಗುತ್ತಿದೆ

ಪುನೀತ್‌ ರಾಜ್‌ಕುಮಾರ್ ಒಡೆತನದ ಪಿಆರ್‌ಕೆ ಪ್ರೊಡಕ್ಷನ್‌ನಿಂದ ತಯಾರಾಗುತ್ತಿರುವ ಸಿನಿಮಾಗಳ ಮೇಲೆ ಕಣ್ಣಾಡಿಸಿದರೆ ಇದು ಗೊತ್ತಾಗುತ್ತದೆ. ಸಿನಿಮಾ ಕುಟುಂಬದ ಹಿನ್ನೆಲೆಯಿಲ್ಲದವರಿಗೆ, ಹೊಸಬರಿಗೆ, ಉತ್ಸಾಹಿಗಳಿಗೆ, ಕತೆ ನೆಚ್ಚಿಕೊಂಡು ಸಿನಿಮಾ ಮಾಡುವವರಿಗೆ ಪಿಆರ್‌ಕೆ ಪ್ರೊಡಕ್ಷನ್ಸ್‌ ಅವಕಾಶ ನೀಡುತ್ತಿದೆ.

 ಗುಣಮಟ್ಟದ ಸಿನಿಮಾ ನೀಡುತ್ತಿರುವ ಪಿಆರ್‌ಕೆ

ಗುಣಮಟ್ಟದ ಸಿನಿಮಾ ನೀಡುತ್ತಿರುವ ಪಿಆರ್‌ಕೆ

ಪಿಆರ್‌ಕೆ ಪ್ರೊಡಕ್ಷನ್‌ನಿಂದ ಹೊರಬರುತ್ತಿರುವ ಸಿನಿಮಾಗಳ ಗುಣಮಟ್ಟ ಸಹ ಉತ್ತಮವಾಗಿಯೇ ಇದೆ. ಪಿಆರ್‌ಕೆ ಪ್ರೊಡಕ್ಷನ್‌ನ ಸಿನಿಮಾಗಳು ಸ್ಟಾರ್‌ ಅನ್ನು ನೆಚ್ಚಿಕೊಂಡು ಮಾಡಲಾಗುತ್ತಿರುವ ಸಿನಿಮಾಗಳಲ್ಲ ಬದಲಿಗೆ ಕತೆ, ನಿರೂಪಣೆ ನೆಚ್ಚಿಕೊಂಡು ಮಾಡಲಾಗುತ್ತಿರುವ ಸಿನಿಮಾಗಳು.

ಹಲವು ಪ್ರತಿಭಾವಂತರಿಗೆ ಅವಕಾಶ ನೀಡಲಾಗುತ್ತಿದೆ

ಹಲವು ಪ್ರತಿಭಾವಂತರಿಗೆ ಅವಕಾಶ ನೀಡಲಾಗುತ್ತಿದೆ

ಪ್ರತಿಭಾವಂತರಾಗಿದ್ದರೂ ಚಿತ್ರರಂಗದಲ್ಲಿ ಎತ್ತರಕ್ಕೆ ಏರಲಾರದೆ ತೊಳಲಾಡುತ್ತಿರುವವರಿಗೆ ಅವಕಾಶ ಕೊಡಲಾಗುತ್ತಿದೆ ಪಿಆರ್‌ಕೆ ನಲ್ಲಿ. ದಾನಿಶ್ ಸೇಠ್, ಪನ್ನಗಾಭರಣ, ರಘು ಸಮರ್ಥ್, ವಶಿಷ್ಟ ಸಿಂಹ, ರಾಜ್‌ ಶೆಟ್ಟಿ ಇನ್ನೂ ಹಲವರು ಪಿಆರ್‌ಕೆಗಾಗಿ ಸಿನಿಮಾ ಮಾಡಿಕೊಟ್ಟಿದ್ದಾರೆ, ನಟಿಸಿದ್ದಾರೆ.

ಓ2 ಸಿನಿಮಾಕ್ಕಾಗಿ ಆಡಿಶನ್ ಮಾಡಲಾಗಿದೆ

ಓ2 ಸಿನಿಮಾಕ್ಕಾಗಿ ಆಡಿಶನ್ ಮಾಡಲಾಗಿದೆ

ಪಿಆರ್‌ಕೆ ಪ್ರೊಡಕ್ಷನ್‌ನಲ್ಲಿ ನಿರ್ಮಾಣವಾಗುತ್ತಿರುವ ಓ2 ಸಿನಿಮಾದ ಪಾತ್ರಗಳಿಗಾಗಿ ಹೊಸನಟರಿಗೆ ಅವಕಾಶ ನೀಡಲೆಂದು ಆಡಿಷನ್‌ಗೆ ಕರೆ ಮಾಡಿ ಕಲಾವಿದರನ್ನು ಆಯ್ಕೆ ಮಾಡಲಾಗಿದೆ. ಸಿನಿಮಾ ಕೊರೊನಾ ಕಾರಣಕ್ಕೆ ನಿಂತು ಹೋಗಿದೆ. ಇನ್ನುಳಿದಂತೆ ಪಿಆರ್‌ಕೆ ಪ್ರೊಡಕ್ಷನ್‌ನ ಮಹಿಳಾ ಪ್ರಧಾನ ಸಿನಿಮಾ 'ಲಾ' ಇದೇ ಜೂನ್ 24 ಕ್ಕೆ ಅಮೆಜಾನ್‌ ಪ್ರೈಂನಲ್ಲಿ ಬಿಡುಗಡೆ ಆಗುತ್ತಿದೆ. ದಾನಿಶ್ ಸೇಠ್ ನಟಿಸಿರುವ 'ಫ್ರೆಂಚ್ ಬಿರಿಯಾನಿ' ಸಿನಿಮಾ ಜುಲೈ 24 ಕ್ಕೆ ಬಿಡುಗಡೆ ಆಗುತ್ತಿದೆ.

More from Filmibeat

English summary
Actor Puneeth Rajkumar giving opportunities to fresh talent from his PRK movie production company.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X