'ಪಡ್ಡೆಹುಲಿ' ಚಿತ್ರದಲ್ಲಿ ಪವರ್ ಸ್ಟಾರ್ ಪುನೀತ್ ಅತಿಥಿ ಪಾತ್ರ
ನಿರ್ಮಾಪಕ ಕೆ ಮಂಜು ಅವರ ಮಗ ಶ್ರೇಯಸ್ ಅಭಿನಯದ ಚೊಚ್ಚಲ ಸಿನಿಮಾ ಪಡ್ಡೆಹುಲಿ ಇದೇ ತಿಂಗಳು ತೆರೆಕಾಣುತ್ತಿದೆ. ಈಗಾಗಲೇ ಟ್ರೈಲರ್ ಮತ್ತು ಹಾಡುಗಳ ಮೂಲಕ ಪಡ್ಡೆಹುಲಿ ಘರ್ಜಸುತ್ತಿದೆ.
ಯುವನಟ ಶ್ರೇಯಸ್ ಗೆ ಕ್ರೇಜಿಸ್ಟಾರ್ ರವಿಚಂದ್ರನ್ ಸಾಥ್ ನೀಡಿದ್ದು, ಚಿತ್ರದಲ್ಲಿ ತಂದೆ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಸರ್ಪ್ರೈಸ್ ಎಂಬಂತೆ ನಟ ರಕ್ಷಿತ್ ಶೆಟ್ಟಿ ಕೂಡ ಅತಿಥಿ ಪಾತ್ರದಲ್ಲಿ ನಟಿಸಿದ್ದು, ಪಡ್ಡೆಹುಲಿಗೆ ಶಕ್ತಿ ತುಂಬಿದ್ದಾರೆ.
ಇದೀಗ, ಪಡ್ಡೆಹುಲಿ ಶ್ರೇಯಸ್ ಗೆ ಪವರ್ ಹೆಚ್ಚಿಸಲು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಕೂಡ ಸಾಥ್ ನೀಡಿದ್ದಾರೆ. ಹೌದು, ಕೆ ಮಂಜು ಮಗನ ಸ್ವಾಗತಕ್ಕೆ ಅಪ್ಪು ಬಾಸ್ ಜೊತೆಯಾಗಿದ್ದು, ಪಡ್ಡೆಹುಲಿ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ.

ಪುನೀತ್ ಅವರ ಪಾತ್ರ ಏನೂ ಎಂಬುದು ಸದ್ಯಕ್ಕೆ ಗೊತ್ತಿಲ್ಲ. ಏಪ್ರಿಲ್ 10 ರಂದು ಪಡ್ಡೆಹುಲಿ ಸೆಕೆಂಡ್ ಟ್ರೈಲರ್ ರಿಲೀಸ್ ಆಗುತ್ತಿದ್ದು, ಬಹುಶಃ ಈ ಟ್ರೈಲರ್ ನಲ್ಲಿ ಪುನೀತ್ ಪಾತ್ರದ ಬಗ್ಗೆ ಮಾಹಿತಿ ಸಿಗಬಹುದು ಎಂಬ ನಿರೀಕ್ಷೆ ಇದೆ.
ಗುರುದೇಶಪಾಂಡೆ ಈ ಚಿತ್ರವನ್ನ ನಿರ್ದೇಶನ ಮಾಡಿದ್ದು, ರಮೇಶ್ ರೆಡ್ಡಿ ನಿರ್ಮಾಣ ಮಾಡಿದ್ದಾರೆ. ಏಪ್ರಿಲ್ 19 ರಂದು ಪಡ್ಡೆಹುಲಿ ಸಿನಿಮಾ ತೆರೆಕಾಣುತ್ತಿದೆ.


Click it and Unblock the Notifications











