For Quick Alerts
  ALLOW NOTIFICATIONS  
  For Daily Alerts

  ಅಪ್ಪು 'ಹೇರ್ ಸ್ಟೈಲ್' ವಿರೋಧಿಸಿದವರಿಗೆ ತಿರುಗೇಟು ನೀಡಿದ ಫ್ಯಾನ್ಸ್

  By Bharath Kumar
  |

  ಕಳೆದ ಎರಡ್ಮೂರು ದಿನಗಳಿಂದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಹೊಸ ಹೇರ್ ಸ್ಟೈಲ್ ಟ್ರೆಂಡಿಂಗ್ ಆಗಿದೆ. ಪಾತ್ರಗಳಲ್ಲಿ ಬದಲಾವಣೆ ಮಾಡೋ ಪುನೀತ್ ಹೇರ್ ಸ್ಟೈಲ್ ಗೆ ಹೆಚ್ಚು ಮೇಕ್ ಓವರ್ ಮಾಡಿಲ್ಲ. ಅಲ್ಲೊಂದು ಇಲ್ಲೊಂದು ಸಿನಿಮಾದಲ್ಲಿ ಡಿಫ್ರೆಂಟ್ ಕೇಶವಿನ್ಯಾಸ ಮಾಡಿದ್ದರು.

  ಇದೀಗ, ರಾಕ್ ಲೈನ್ ವೆಂಕಟೇಶ್ ಅವರ ಹೊಸ ಚಿತ್ರದಲ್ಲಿ ಪುನೀತ್ ಹೊಸ ಸ್ಟೈಲ್ ಮೂಲಕ ಜಬರ್ ದಸ್ತ್ ಎಂಟ್ರಿ ಕೊಟ್ಟಿದ್ದಾರೆ. ಇದನ್ನ ನೋಡಿದ ಅಭಿಮಾನಿಗಳು ಫುಲ್ ಥ್ರಿಲ್ ಆಗಿದ್ದು, ತಾವು ಕೂಡ ಫಾಲೋ ಮಾಡ್ತಿದ್ದಾರೆ. ಈ ನಡುವೆ ಕನ್ನಡ ಪರ ಸಂಘಟನೆಯೊಂದು ಅಪ್ಪು ಹೇರ್ ಸ್ಟೈಲ್ ಗೆ ವಿರೋಧ ವ್ಯಕ್ತಪಡಿಸಿದೆ.

  ಟಾಲಿವುಡ್ ನಲ್ಲಿ ಸುದ್ದಿ ಆಯ್ತು ಪುನೀತ್ ಹೊಸ ಹೇರ್ ಸ್ಟೈಲ್ಟಾಲಿವುಡ್ ನಲ್ಲಿ ಸುದ್ದಿ ಆಯ್ತು ಪುನೀತ್ ಹೊಸ ಹೇರ್ ಸ್ಟೈಲ್

  ''ನಮ್ಮೆಲ್ಲರ ಹೆಮ್ಮೆಯ ಸಾಂಸ್ಕೃತಿಕ ರಾಯಭಾರಿ ಡಾ|| ರಾಜ್ ರ ಹಾದಿಯಲ್ಲಿ ಸಾಗುವ ಭರವಸೆ ಮೂಡಿಸಿದ್ದ, ರಾಜ್ ರ ಹೆಸರನ್ನು ಚಿರಸ್ಥಾಯಿ ಮಾಡುವ ತಾಕತ್ತುಳ್ಳ ಪುನೀತ್ ಗೆ ಇಂತಹ ಹೇರ್ ಸ್ಟೈಲ್ ಬೇಕಾ. ಸುದೀಪ್ ರನ್ನು ಅನುಸರಿಸಿದ ಯುವಕರ ದಂಡು ಅರ್ಧ ಕತ್ತರಿಸಿ ಇನ್ನರ್ಧ ಹಾಗೆ ಬಿಟ್ಟಿದ್ದರು. ಇದೀಗ ಪುನೀತ್ ರ ಸರದಿ. ಹೇರ್ ಸ್ಟೈಲ್ ವಯಕ್ತಿಕ ವಿಚಾರವೇ ಅಗಿದ್ದರೂ ನಿಮ್ಮಲ್ಲೊಬ್ಬ ರಾಜ್ ಇದ್ದಾರೆ ಎಂಬುದನ್ನು ನಾವು ಗಮನಿಸಿದ್ದೇವೆ. ಸ್ಟಾರ್ ವಾರ್ ಬಿಟ್ಟು ನೈಜ ನಾಯಕನಾಗುವ ಎಲ್ಲಾ ಅರ್ಹತೆ ನಿಮಗಿದೆ. ಸಿನಿಮಾ, ನಟನೆಯಲ್ಲಿ ಓ.ಕೆ. ನಿಮ್ಮ ನಿಜ ಜೀವನದಲ್ಲಿ ಇದೆಲ್ಲಾ ಬೇಕೆ....?'' ಎಂದು ಹೇಳಿದ್ದರು. ಇದನ್ನ ಖಂಡಿಸಿರುವ ಅಭಿಮಾನಿಗಳು ಕನ್ನಡ ಸಂಘಟನೆ ವಿರುದ್ಧ ವಾಗ್ವಾದ ನಡೆಸಿದ್ದಾರೆ. ಅಭಿಮಾನಿಗಳು ಕೇಳುತ್ತಿರುವ ಪ್ರಶ್ನೆಗಳು.? ಮುಂದೆ ಓದಿ....

  ಸುದ್ದಿಯಲ್ಲಿರೋದಕ್ಕೆ ಈ ಕೆಲಸ ಬೇಡ

  ಸುದ್ದಿಯಲ್ಲಿರೋದಕ್ಕೆ ಈ ಕೆಲಸ ಬೇಡ

  ಪುನೀತ್ ರಾಜ್ ಕುಮಾರ್ ಅವರ ಹೇರ್ ಸ್ಟೈಲ್ ಗೆ ಇಷ್ಟೊಂದು ತಲೆಕೆಡಿಸಿಕೊಂಡಿರುವ ಕನ್ನಡ ಸಂಘಟನೆ ಮಾಡಬೇಕಾದ ಕೆಲಸಗಳನ್ನ ಬಿಟ್ಟು ಈ ವಿಷ್ಯಕ್ಕೆ ಹೆಚ್ಚು ತಲೆಕೆಡಿಸಿಕೊಂಡಿದೆ ಎಂದು ಸಾಮಾನ್ಯ ಜನರು ಅಭಿಪ್ರಾಯ ಪಟ್ಟಿದ್ದಾರೆ. ''ಮೆಟ್ರೋದಲ್ಲಿ ಕನ್ನಡಿಗರಿಗೆ ಕೆಲಸ ಕೊಡುತ್ತಿಲ್ಲ, ತೆಲುಗು ತಮಿಳು ಬೋರ್ಡ್ ಗಳ ಹಾವಳಿ, ಈ ವಿಷ್ಯಗಳ ಬಗ್ಗೆ ಹೋರಾಡಿ. ಆಮೇಲೆ ಇದರ ಬಗ್ಗೆ ಚಿಂತಿಸಿ. ಸುದ್ದಿಯಲ್ಲಿರಲು ಈ ರೀತಿ ಮಾಡಬೇಡಿ'' ಎಂದು ಟೀಕಿಸಿದ್ದಾರೆ.

  ಡಾ ರಾಜ್ ಕುಮಾರ್ ಅವರೇ ಮಾಡಿದ್ದಾರೆ

  ಡಾ ರಾಜ್ ಕುಮಾರ್ ಅವರೇ ಮಾಡಿದ್ದಾರೆ

  ''ಸಿನಿಮಾ ವಿಚಾರದಲ್ಲಿ ಮಾತಾಡೋದಾದರೇ ಡಾ ರಾಜ್ ಕುಮಾರ್ ಕೂಡ ಅನೇಕ ಪಾತ್ರಗಳನ್ನ ನಿರ್ವಹಿಸಿದ್ದಾರೆ. ಪಾತ್ರಗಳಿಗಾಗಿ ವಿಶೇಷವಾಗಿ ಕೇಶ ವಿನ್ಯಾಸ, ವಸ್ತ್ರ ವಿನ್ಯಾಸ ಮಾಡಿ ರಂಜಿಸಿದ್ದಾರೆ. ಹೀಗೆ ನೋಡುವುದಾರೇ ಇದು ಸಿನಿಮಾಗಾಗಿ, ಅಭಿಮಾನಿಗಳನ್ನ ರಂಜಿಸುವುದಕ್ಕಾಗಿ. ರಾಜಕುಮಾರ ಅವರ ಕುಟುಂಬದ ಮೇಲಿನ ಅಭಿಮಾನದಿಂದ ಬೇರೆ ನಟರನ್ನ ಅವಮಾನಿಸುವುದು ಸರಿಯಿಲ್ಲ'' ಎಂದು ಖಂಡಿಸಿದ್ದಾರೆ.

  ಸ್ಯಾಂಡಲ್ ವುಡ್ ನಲ್ಲಿ ನಾಯಕರ ಟ್ರೆಂಡಿ ಹೇರ್ ಸ್ಟೈಲ್ ಹವಾಸ್ಯಾಂಡಲ್ ವುಡ್ ನಲ್ಲಿ ನಾಯಕರ ಟ್ರೆಂಡಿ ಹೇರ್ ಸ್ಟೈಲ್ ಹವಾ

  ಪಾತ್ರಕ್ಕೆ ಬೇಕು ಮಾಡಿದ್ದಾರೆ. ನಿಮಗೇನು.?

  ಪಾತ್ರಕ್ಕೆ ಬೇಕು ಮಾಡಿದ್ದಾರೆ. ನಿಮಗೇನು.?

  ಒಂದೇ ರೀತಿಯ ಸಿನಿಮಾ ಮಾಡಿದ್ರೆ ಜನರು ಇಷ್ಟಪಡುವುದಿಲ್ಲ. ಚಿತ್ರದಿಂದ ಚಿತ್ರಕ್ಕೆ, ಪಾತ್ರಗಳಿಂದ ಪಾತ್ರಕ್ಕೆ ವಿಭಿನ್ನತೆ, ಹೊಸತನ ನೀಡಬೇಕು. ಅಂತಹ ಪ್ರಯತ್ನವನ್ನ ಕಲಾವಿದರು ಮಾಡುತ್ತಾರೆ. ಈ ಹೇರ್ ಸ್ಟೈಲ್ ನಿಂದ ನಿಮಗೆ ನೋವುಂಟಾಗಿರಬಹುದು. ಆದ್ರೆ, ಈಗಿನ ಪ್ರೇಕ್ಷಕರು ಇದನ್ನೇ ನಿರೀಕ್ಷೆ ಮಾಡೋದು'' ಎಂದು ಮತ್ತೊಬ್ಬರು ಅಪ್ಪು ಹೇರ್ ಸ್ಟೈಲ್ ನ ಸಮರ್ಥಿಸಿಕೊಂಡಿದ್ದಾರೆ.

  ಅಪ್ಪು ಚಿತ್ರಕ್ಕೆ ಫೈಟ್ ಹೇಳಿಕೊಡುತ್ತಾರೆ 'ಬಾಹುಬಲಿ' ಖ್ಯಾತಿಯ ಸಾಹಸ ನಿರ್ದೇಶಕಅಪ್ಪು ಚಿತ್ರಕ್ಕೆ ಫೈಟ್ ಹೇಳಿಕೊಡುತ್ತಾರೆ 'ಬಾಹುಬಲಿ' ಖ್ಯಾತಿಯ ಸಾಹಸ ನಿರ್ದೇಶಕ

  ನಟರು ಹೀಗೆ ಮಾಡಬಾರದು

  ನಟರು ಹೀಗೆ ಮಾಡಬಾರದು

  ರಾಜ್ ಕುಮಾರ್ ಕುಟುಂಬ ಅಂದ್ರೆ ಕನ್ನಡತನ. ಈ ರೀತಿಯ ಹೇರ್ ಸ್ಟೈಲ್ ರಾಜ್ ಮಕ್ಕಳಿಗೆ ಸೂಕ್ತವಲ್ಲ, ಇದು ಪರಭಾಷಿಗರಿಗೆ ಸರಿ'' ಎಂದು ಕನ್ನಡ ಸಂಘಟನೆಯ ಪರವಾಗಿ ಮಾತನಾಡಿಕೊಳ್ಳುವವರು ಇದ್ದಾರೆ.

  English summary
  Puneeth Rajkumar will be sporting his new hairstyle. But, Kannada pro-organization has opposed Puneet's new hair style. after that, Fans have condemned it.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X