'ಟಗರು' 125ರ ಸಂಭ್ರಮದಲ್ಲಿ ಫುಲ್ ಖುಷ್ ಆದ ಪುನೀತ್
ಸೆಂಚುರಿಸ್ಟಾರ್ ಶಿವರಾಜ್ ಕುಮಾರ್ ಅಭಿನಯದ 'ಟಗರು' ಸಿನಿಮಾ ಶತದಿನೋತ್ಸವ ಮುಗಿಸಿ 150ನೇ ದಿನದತ್ತ ಮುನ್ನುಗ್ಗುತ್ತಿದೆ. ಈ ಮಧ್ಯೆ 'ಟಗರು' ಚಿತ್ರದ 125ನೇ ದಿನದ ಸಂಭ್ರಮವನ್ನ ಚಿತ್ರತಂಡ ಆಚರಿಸಿದೆ.
ರೆಬೆಲ್ ಸ್ಟಾರ್ ಅಂಬರೀಶ್ ಮತ್ತು ಪುನೀತ್ ರಾಜ್ ಕುಮಾರ್, ರೋರಿಂಗ್ ಸ್ಟಾರ್ ಶ್ರೀಮುರಳಿ ಈ ವಿಶೇಷ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಶಿವರಾಜ್ ಕುಮಾರ್ ಸೇರಿದಂತೆ ಚಿತ್ರದ ಕಲಾವಿದರು, ತಂತ್ರಜ್ಞರನ್ನ ಈ ಕಾರ್ಯಕ್ರಮದಲ್ಲಿ ಗೌರವಿಸಲಾಯಿತು.
ಈ ವೇಳೆ ಮಾತನಾಡಿದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ದೊಡ್ಡ ಮಟ್ಟದ ಸಂತೋಷ ವ್ಯಕ್ತಪಡಿಸಿದರು. ಯಾಕಂದ್ರೆ, 'ಟಗರು' ಚಿತ್ರದ ಆಡಿಯೋ ಖರೀದಿಸಿದ್ದು, ಅಪ್ಪು ಒಡೆತನದ 'ಪಿ.ಆರ್.ಕೆ' ಆಡಿಯೋ ಕಂಪನಿ. ಹೀಗಾಗಿ, ಹಾಡುಗಳು ಸೂಪರ್ ಹಿಟ್ ಆದವು, ಸಿನಿಮಾ ಹಿಟ್ ಆಯ್ತು ಎಂದು ಪುನೀತ್ ಹರ್ಷಗೊಂಡರು.

''ಮೊದಲು ಈ ಚಿತ್ರದ ನಿರ್ಮಾಪಕರು ಶ್ರೀಕಾಂತ್ ಅವರಿಗೆ ಥ್ಯಾಂಕ್ಸ್ ಹೇಳಬೇಕು, ಅದಾದ ನಂತರ ಮ್ಯೂಸಿಕ್ ಗೆ ಹೀರೋ ಚರಣ್ ರಾಜ್ ಅವರು ಅದ್ಭುತವಾದ ಹಾಡುಗಳು ನೀಡಿದ್ರು. ಇದೆಲ್ಲವನ್ನ ಮಾಡಿಸಿರುವುದು ನಿರ್ದೇಶಕ ಸೂರಿ, ಅದ್ಬುತವಾಗಿ ಡ್ಯಾನ್ಸ್ ಮಾಡಿರುವುದು ಶಿವಣ್ಣ ಅವರು, ಮತ್ತು ಸಿನಿಮಾದಲ್ಲಿ ಮಾಡಿರುವ ಪ್ರತಿಯೊಂದು ಪಾತ್ರಗಳು, ಡಾಲಿ, ಚಿಟ್ಟೆ, ಕಾಕ್ರೋಚ್, ಭಾವನಾ ಎಲ್ಲರೂ ತುಂಬಾ ಚೆನ್ನಾಗಿ ಅಭಿನಯಿಸಿದ್ದಾರೆ. ವಿಶೇಷವಾಗಿ ಹೊಸ ರೀತಿಯ ತಂತ್ರಜ್ಞರು ಈ ಚಿತ್ರದಲ್ಲಿ ಕೆಲಸ ಮಾಡಿದ್ದಾರೆ. ಅವರಿಗೆಲ್ಲಾ ಥ್ಯಾಂಕ್ಸ್'' ಎಂದು ಪವರ್ ಸ್ಟಾರ್ ಹೇಳಿದರು.
ಇನ್ನುಳಿದಂತೆ ದುನಿಯಾ ಸೂರಿ ನಿರ್ದೇಶನದ 'ಟಗರು' ಚಿತ್ರವನ್ನ ಕೆ.ಪಿ ಶ್ರೀಕಾಂತ್ ನಿರ್ಮಾಣ ಮಾಡಿದ್ದರು. ಶಿವರಾಜ್ ಕುಮಾರ್, ಧನಂಜಯ್, ವಸಿಷ್ಠ ಸಿಂಹ, ಮಾನ್ವಿತ ಹರೀಶ್, ಭಾವನಾ ಸೇರಿದಂತೆ ಹಲವರು ಕಾಣಿಸಿಕೊಂಡಿದ್ದಾರೆ.


Click it and Unblock the Notifications











