ಕೊನೆಗೂ ಟ್ವಿಟ್ಟರ್ ಲೋಕಕ್ಕೆ ಕಾಲಿಟ್ಟ ಪವರ್ ಸ್ಟಾರ್, ಮೊದಲ ಟ್ವೀಟ್ ಏನು.?
Recommended Video

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚಾಗಿ ಸಕ್ರೀಯರಾಗಿಲ್ಲ. ಆದ್ರೆ, ಪುನೀತ್ ಹೆಸರಲ್ಲಿ ಫೇಕ್ ಖಾತೆಗಳು ಮಾತ್ರ ಕಮ್ಮಿಯಿಲ್ಲ.
ಅನೇಕರು ಇದು ಪುನೀತ್ ರಾಜ್ ಕುಮಾರ್ ಅವರ ಖಾತೆ ಎಂದುಕೊಂಡೇ ಫಾಲೋ ಮಾಡ್ತಿದ್ದರು. ಈ ನಡುವೆ ಸ್ವತಃ ಪುನೀತ್ ರಾಜ್ ಕುಮಾರ್ ಅವರೇ ನನ್ನದು ಅಧಿಕೃತ ಟ್ವಿಟ್ಟರ್ ಖಾತೆ ಇಲ್ಲ. ನನ್ನ ಅಭಿಮಾನಿಗಳ ಟ್ವಿಟ್ಟರ್ ಖಾತೆ ಮಾತ್ರ ಎಂದು ಹೇಳಿದ್ದರು. ನಕಲಿ ಖಾತೆಗಳನ್ನ ನಂಬಬೇಡಿ ಎಂದು ಎಚ್ಚರಿಕೆ ನೀಡಿದ್ದರು.
ಇದೀಗ, ಕೊನೆಗೂ ಪವರ್ ಸ್ಟಾರ್ ಅಧಿಕೃತವಾಗಿ ಟ್ವಿಟ್ಟರ್ ಲೋಕಕ್ಕೆ ಕಾಲಿಟ್ಟಿದ್ದಾರೆ. ಪುನೀತ್ ಟ್ವಿಟ್ಟರ್ ಗೆ ಪ್ರವೇಶ ಮಾಡ್ತಿದ್ದಾಗೆ ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಫಾಲೋ ಮಾಡ್ತಿದ್ದಾರೆ. ಹಾಗಿದ್ರೆ, ಪುನೀತ್ ರಾಜ್ ಕುಮಾರ್ ಮೊದಲ ಟ್ವೀಟ್ ಏನು.? ಮುಂದೆ ಓದಿ.....

ಅಭಿಮಾನಿಗಳ ಆಸೆ ಈಡೇರಿತು
ಪುನೀತ್ ರಾಜ್ ಕುಮಾರ್ ಟ್ವಿಟ್ಟರ್ ಲೋಕಕ್ಕೆ ಬರಬೇಕು ಎನ್ನುವುದು ಕೋಟ್ಯಾಂತರ ಅಭಿಮಾನಿಗಳ ಬೇಡಿಕೆ ಮತ್ತು ಆಸೆ ಆಗಿತ್ತು. ಅಂತಿಮವಾಗಿ ಅಭಿಮಾನಿಗಳ ಕೋರಿಕೆಯನ್ನ ಪುನೀತ್ ಪೂರೈಸಿದ್ದಾರೆ. ಅಧಿಕೃತವಾಗಿ ಪುನೀತ್ ರಾಜ್ ಕುಮಾರ್ ಹೆಸರಲ್ಲಿ ಖಾತೆಯೊಂದು ಚಾಲ್ತಿಗೆ ಬಂದಿದೆ. ಆದ್ರೆ, ಅದನ್ನ ಪುನೀತ್ ಬಳಸುತ್ತಾರಾ ಅಥವಾ ಅವರ ಹೆಸರಲ್ಲಿ ಯಾರಾದರೂ ಆಪ್ತರು ಬಳಸುತ್ತಾರಾ ಎಂಬುದು ಗೌಪ್ಯವಾಗಿದೆ.

ಫಾಲೋವರ್ಸ್ ಸಂಖ್ಯೆ ಎಷ್ಟಿದೆ.?
ಜುಲೈ 28 ರಂದು ಪುನೀತ್ ರಾಜ್ ಕುಮಾರ್ ಅವರು ಟ್ವಿಟ್ಟರ್ ಗೆ ಪ್ರವೇಶ ಮಾಡಿದ್ದಾರೆ. ಇದುವರೆಗೂ ಪುನೀತ್ ಖಾತೆಯಲ್ಲಿ 5 ಸಾವಿರಕ್ಕೂ ಹೆಚ್ಚು ಫಾಲೋವರ್ಸ್ ಇದ್ದಾರೆ. ಆದ್ರೆ, ಪುನೀತ್ ರಾಜ್ ಕುಮಾರ್ ಮಾತ್ರ ಯಾರನ್ನ ಫಾಲೋ ಮಾಡ್ತಿಲ್ಲ.

ಪುನೀತ್ ಮೊದಲ ಟ್ವೀಟ್ ಏನು.?
ಪುನೀತ್ ರಾಜ್ ಕುಮಾರ್ ಅವರು ಟ್ವಿಟ್ಟರ್ ಗೆ ಕಾಲಿಟ್ಟು ಸುಮಾರು ಒಂದು ತಿಂಗಳು ಆಗಿದೆ. ಆದ್ರೆ, ಇದುವರೆಗೂ ಯಾವುದೇ ಟ್ವೀಟ್ ಕೂಡ ಮಾಡಿಲ್ಲ. ಹೀಗಾಗಿ, ಈ ಬಗ್ಗೆ ಅನುಮಾನ, ಕುತೂಹಲ ಕಾಡುತ್ತಿದೆ. ಮೊದಲೇ ಪುನೀತ್ ಅವರಿಗೆ ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಆಸಕ್ತಿ ಇಲ್ಲ. ಹಾಗಾಗಿ, ಏನೂ ಟ್ವೀಟ್ ಮಾಡಿಲ್ಲ ಎನ್ನಲಾಗಿದೆ.

ಪುನೀತ್ ಬಗ್ಗೆ ಮಾಹಿತಿಗಾಗಿ
ಇನ್ಮುಂದೆ ಪುನೀತ್ ರಾಜ್ ಕುಮಾರ್ ಅವರ ಬಗ್ಗೆ ಯಾವುದೇ ಮಾಹಿತಿ ಬೇಕು ಅಂದ್ರೆ ಪುನೀತ್ ರಾಜ್ ಕುಮಾರ್ ಅವರ ಅಧಿಕೃತ ಟ್ವಿಟ್ಟರ್ ಖಾತೆಯಿಂದ ಸಿಗಲಿದೆ. ಇದನ್ನೇ ಅವರ ಎಲ್ಲಾ ಅಭಿಮಾನಿಗಳು ಫಾಲೋ ಮಾಡ್ತಿದ್ದಾರೆ.


Click it and Unblock the Notifications











