»   » ಪವರ್ ಸ್ಟಾರ್ ಪುನೀತ್ ಹೊಸ ಚಿತ್ರ 'ಜೇಮ್ಸ್'

ಪವರ್ ಸ್ಟಾರ್ ಪುನೀತ್ ಹೊಸ ಚಿತ್ರ 'ಜೇಮ್ಸ್'

Posted By:
Subscribe to Filmibeat Kannada

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಸದ್ಯ 'ಧೀರ ರಣವಿಕ್ರಮ' ಚಿತ್ರದಲ್ಲಿ ಬಿಜಿಯಾಗಿದ್ದಾರೆ. ಇಟಲಿಯಲ್ಲಿ ಚಿತ್ರದ ಶೂಟಿಂಗ್ ಭರದಿಂದ ಸಾಗುತ್ತಿದೆ. ಅಷ್ಟುಬಿಟ್ಟರೆ ಅಪ್ಪು ಕೈಯಲ್ಲಿ ಯ್ಯಾವ್ಯಾವ ಚಿತ್ರಗಳಿವೆ?

ಈಗಾಗಲೇ ಗಾಂಧಿನಗರದಲ್ಲಿ ಸುದ್ದಿಯಾಗಿರುವ ಪ್ರಕಾರ ಸೂರಿ ಆಕ್ಷನ್ ಕಟ್ ನಲ್ಲಿ 'ದೊಡ್ಮನೆ ಹುಡುಗ' ಮತ್ತು 'ಉಗ್ರಂ' ಖ್ಯಾತಿಯ ಪ್ರಶಾಂತ್ ನೀಲ್ ನಿರ್ದೇಶನದಲ್ಲಿ 'ಆಹ್ವಾನ' ಚಿತ್ರದಲ್ಲಿ ಪುನೀತ್ ನಾಯಕನಾಗಿ ನಟಿಸಲಿದ್ದಾರೆ.


Puneeth Rajkumar has given a nod to Chethan's Directorial James

ವರ್ಷಕ್ಕೆ ಒಂದೇ ಸಿನಿಮಾ ಮಾಡುವ ಅಪ್ಪು ಮೊನ್ನೆಮೊನ್ನೆಯಷ್ಟೇ ಹೊಸ ಚಿತ್ರಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಆ ಚಿತ್ರವೇ 'JAMES'. ಈ ಹೆಸರು ಎಲ್ಲೋ ಕೇಳಿದ ಹಾಗಿದ್ಯಲ್ಲ ಅಂತ ಅನಿಸ್ತಿದೆ ಅಲ್ವಾ?


ಹೌದು, ಕೆಲ ದಿನಗಳ ಹಿಂದೆಯಷ್ಟೇ 'ಜೇಮ್ಸ್' ಆಗುವುದಕ್ಕೆ ಪುನೀತ್ ರಾಜ್ ಕುಮಾರ್ ಮತ್ತು ಯಶ್ ಪೈಪೋಟಿ ನಡೆಸುತ್ತಿದ್ದಾರೆ ಅನ್ನುವ ಸುದ್ದಿಯನ್ನ ಇದೇ 'ಫಿಲ್ಮಿಬೀಟ್ ಕನ್ನಡ'ದಲ್ಲಿ ನೀವು ಓದಿದ್ರಿ. ['ಜೇಮ್ಸ್' ಬಾಂಡ್ ಚಿತ್ರಕ್ಕೆ ಯಶ್, ಪುನೀತ್ ಗೆ ಆಹ್ವಾನ]


Puneeth Rajkumar has given a nod to Chethan's Directorial James

'ಬಹದ್ದೂರ್' ಚಿತ್ರದ ನಿರ್ದೇಶಕ ಚೇತನ್ ರಚಿಸಿರುವ 'ಜೇಮ್ಸ್' ಕಥೆಗೆ ಯಶ್ ಮತ್ತು ಪುನೀತ್ ರಾಜ್ ಕುಮಾರ್ ಕ್ಲೀನ್ ಬೌಲ್ಡ್ ಆಗಿದ್ದಾರೆ. ಆದ್ರೆ 'ಜೇಮ್ಸ್' ಆಗುವುದಕ್ಕೆ ಯಾರು ಒಪ್ಪಿಕೊಳ್ಳುತ್ತಾರೆ ಅನ್ನುವ ಕುತೂಹಲ ಎಲ್ಲರನ್ನ ಕಾಡುತ್ತಿತ್ತು. ಆ ಕುತೂಹಲಕ್ಕೀಗ ತೆರೆ ಬಿದ್ದಿದೆ.


'ಜೇಮ್ಸ್' ಚಿತ್ರಕ್ಕೆ ಪುನೀತ್ ರಾಜ್ ಕುಮಾರ್ 'ಓಕೆ' ಅಂದಿದ್ದಾರೆ. ಅಲ್ಲದೇ, 'ಧೀರ ರಣವಿಕ್ರಮ', 'ದೊಡ್ಮನೆ ಹುಡುಗ', ಚಿತ್ರಗಳು ಮುಗಿದ ನಂತ್ರ 'ಜೇಮ್ಸ್' ಗೆ ಕಿಕ್ ಸ್ಟಾರ್ಟ್ ಕೊಡುವುದಾಗಿ ಅಪ್ಪು ಒಪ್ಪಿಕೊಂಡಿದ್ದಾರಂತೆ. ['ಧೀರ ರಣವಿಕ್ರಮ'ದ ವಿಲನ್ ಆಗಿ ಬಾಲಿವುಡ್ ವಿಕ್ರಮ್ ಸಿಂಗ್]


Puneeth Rajkumar has given a nod to Chethan's Directorial James

'ಜೇಮ್ಸ್' ಅಂದ ಮಾತ್ರಕ್ಕೆ ಇದು ಜೇಮ್ಸ್ ಬಾಂಡ್ ಚಿತ್ರ ಅಂತ ಊಹಿಸಿಕೊಳ್ಳಬೇಡಿ. ಯಾಕಂದ್ರೆ, ಈ 'ಜೇಮ್ಸ್' ಪಕ್ಕಾ ಲೋಕಲ್. ಅದ್ಹೇಗೆ ಅಂತ ಇಲ್ಲಿ ನೋಡಿ....(JA) ಜಕ್ಕಳಿ (M) ಮಾದಪ್ಪ (E) ಈರವ್ವನ ಮಗ (S) ಸಂತು.


'ಜೇಮ್ಸ್' ವೃತ್ತಾಂತ ಕೇಳಿ, ಇದ್ಯಾವ್ದೋ ಹಳ್ಳಿ ಸ್ಟೋರಿ ಅಂತಲೂ ಅಂದುಕೊಳ್ಳಬೇಡಿ. ನಿಮ್ಮ ಊಹೆಗೂ ನಿಲುಕದ ಪಕ್ಕಾ ಆಕ್ಷನ್ ಎಂಟರ್ಟೇನರ್ ಸಿನಿಮಾ ಈ 'ಜೇಮ್ಸ್'. 'ಬಹದ್ದೂರ್' ನಂತ್ರ ಚೇತನ್ ನಿರ್ದೇಶಿಸುತ್ತಿರುವ ಎರಡನೇ ಚಿತ್ರ. [ವಿದ್ಯಾರ್ಥಿಗಳಿಗೆ ಪುನೀತ್ ಕುಡಿಯಲು ಹೇಳಿದ್ದೇನು?]


ಸದ್ಯಕ್ಕೆ ಚೇತನ್ ಕೂಡ ಒಂದೆರಡು ಚಿತ್ರಗಳಿಗೆ ಸಂಭಾಷಣೆ ಬರೆಯುತ್ತಿದ್ದಾರೆ. ಅದು ಮುಗಿದ ಬಳಿಕ 'ಜೇಮ್ಸ್' ಗೆ ಅಂತಿಮ ರೂಪ ಕೊಡುತ್ತಾರೆ. ಅದೇ ವೇಳೆಗೆ ಅಪ್ಪು ಹಳೇ ಕಮ್ಮಿಟ್ಮೆಂಟ್ ಗಳನ್ನ ಮುಗಿಸಿ 'ಜೇಮ್ಸ್' ಆಗುವುದಕ್ಕೆ ಸಿದ್ದತೆ ನಡೆಸುತ್ತಾರೆ. ಇದೆಲ್ಲವೂ ಆಗಬೇಕು ಅಂದ್ರೆ ಕನಿಷ್ಟ ಒಂದು ವರ್ಷವಾದರೂ ಬೇಕು. (ಫಿಲ್ಮಿಬೀಟ್ ಕನ್ನಡ)

English summary
Finally, Puneeth Rajkumar has given a nod to the movie 'James'. Chethan Kumar's directorial 'James' as in Jakkalli Madappa Eeravvana maga Santhu is complete action entertainer and not inspired by any of the Bond movies.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada