For Quick Alerts
  ALLOW NOTIFICATIONS  
  For Daily Alerts

  'ರುಸ್ತುಂ' ಅಡ್ಡಾಗೆ ಎಂಟ್ರಿ ಕೊಟ್ಟ ಪವರ್ ಸ್ಟಾರ್

  By Pavithra
  |
  ರುಸ್ತುಂ ಸೆಟ್‌ನಲ್ಲಿ ಪುನೀತ್ ಕಾಣಿಸಿಕೊಂಡಿದ್ದೇಕೆ..!? | Oneindia kannada

  ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಅಭಿನಯದ 'ರುಸ್ತುಂ' ಸಿನಿಮಾದ ಚಿತ್ರೀಕರಣ ಭರದಿಂದ ಸಾಗಿದೆ. ಸಾಹಸ ನಿರ್ದೇಶಕ ರವಿವರ್ಮ ಈ ಚಿತ್ರದ ಮೂಲಕ ನಿರ್ದೇಶಕನಾಗಿ ಬಡ್ತಿ ಪಡೆಯುತ್ತಿದ್ದು ಬೆಂಗಳೂರಿನ ಸುತ್ತಾ ಮುತ್ತಾ ಸಿನಿಮಾ ಶೂಟಿಂಗ್ ನಡೆಯುತ್ತಿದೆ.

  ಬಾಲಿವುಡ್ ನಟ ವಿವೇಕ್ ಒಬೆರಾಯ್ ಶಿವಣ್ಣ ಜೊತೆಯಲ್ಲಿ ಅಭಿನಯ ಮಾಡುತ್ತಿದ್ದು ಇತ್ತೀಚಿಗಷ್ಟೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಕೂಡ 'ರುಸ್ತುಂ' ಸಿನಿಮಾ ಸೆಟ್ ನಲ್ಲಿ ಕಾಣಿಸಿಕೊಂಡಿದ್ದಾರೆ.

  'ರುಸ್ತುಂ' ಸಿನಿಮಾ ನಿರ್ದೇಶಕರು ಹೊಸ ಹೊಸ ಕಲಾವಿದರು ಸಿನಿಮಾಗೆ ಕರೆ ತರುವ ಮೂಲಕ ಅಭಿಮಾನಿಗಳಿಗೆ ಸರ್ಪ್ರೈಸ್ ನೀಡುತ್ತಲೇ ಇದ್ದಾರೆ. ಕೆಲವು ದಿನಗಳ ಹಿಂದೆಯಷ್ಟೆ ರಚಿತಾ ರಾಮ್ ಚಿತ್ರದಲ್ಲಿ ಅಭಿನಯ ಮಾಡುತ್ತಾರೆ ಎನ್ನುವುದನ್ನು ತಿಳಿಸಿದ್ದರು. ಈಗ ಪುನೀತ್ ಏನಾದರೂ ಸಿನಿಮಾದಲ್ಲಿ ಅಭಿನಯ ಮಾಡುತ್ತಿದ್ದಾರಾ? ಎನ್ನುವ ಪ್ರಶ್ನೆ ಅಭಿಮಾನಿಗಳಲ್ಲಿ ಫೋಟೋ ನೋಡಿದ ನಂತರ ಮೂಡುತ್ತಿದೆ.

  ಆದರೆ ಇದಕ್ಕೆ ನಿರ್ದೇಶಕರಿಂದ ಸಿಗುವ ಉತ್ತರ ಇಲ್ಲ. ಪವರ್ ಸ್ಟಾರ್ 'ರುಸ್ತುಂ' ಸೆಟ್ ಗೆ ಭೇಟಿ ಕೊಟ್ಟು ಶಿವಣ್ಣ ಹಾಗೂ ವಿವೇಕ್ ಒಬೆರಾಯ್ ಅವರನ್ನು ಭೇಟಿ ಮಾಡಿ ಬಂದಿದ್ದಾರೆ. ನಿರ್ದೇಶಕ ರವಿವರ್ಮ ಕೂಡ ಸಾಕಷ್ಟು ದಿನಗಳಿಂದ ಪರಿಚಯ ಇರುವ ಕಾರಣ ಶೂಟಿಂಗ್ ನಲ್ಲಿ ಬಿಡುವು ಮಾಡಿಕೊಂಡು ಎಲ್ಲರನ್ನು ಮಾತನಾಡಿಸಿಕೊಂಡು ಬಂದಿದ್ದಾರೆ ಅಪ್ಪು .

  Puneeth Rajkumar has visited the Kannada Rustam Cinema Set

  'ರುಸ್ತುಂ' ಸಿನಿಮಾದಲ್ಲಿ ಮಯೂರಿ, ಶ್ರದ್ಧಾ ಶ್ರೀನಾಥ್ , ಶಿವಣ್ಣ ಜೊತೆಯಲ್ಲಿ ಅಭಿನಯ ಮಾಡುತ್ತಿದ್ದಾರೆ. ಜಯಣ್ಣ ಸಿನಿಮಾಗೆ ಬಂಡವಾಳ ಹಾಕಿದ್ದು ಶಿವರಾಜ್ ಕುಮಾರ್ ಈ ಚಿತ್ರದ ಮೂಲಕ ಡಿಫ್ರೆಂಟ್ ಗೆಟಪ್ ನಲ್ಲಿ ಅಭಿಮಾನಿಗಳ ಮುಂದೆ ಕಾಣಿಸಿಕೊಳ್ಳುತ್ತಿದ್ದಾರೆ.

  English summary
  kannada actor Puneeth Rajkumar has visited the Kannada Rustam Cinema Set. Rustram Shivarajkumar and Vivek Oberoi starrer Cinema, directed by Ravi Varma.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X