For Quick Alerts
  ALLOW NOTIFICATIONS  
  For Daily Alerts

  ಮಾಯಾಬಜಾರ್ ಸೆಟ್ ನಲ್ಲಿ ಪುನೀತ್ ರಾಜ್ ಕುಮಾರ್

  By Pavithra
  |
  ಮಾಯಾಬಜಾರ್ ಸೆಟ್ ನಲ್ಲಿ ಪುನೀತ್ ರಾಜ್ ಕುಮಾರ್ | Filmibeat Kannada

  ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಿರ್ಮಾಣ ಸಂಸ್ಥೆ ಪಿ ಆರ್ ಕೆ ಪ್ರೊಡಕ್ಷನ್ಸ್ ನಲ್ಲಿ ನಿರ್ಮಾಣ ಆಗುತ್ತಿರುವ ಮಾಯಾಬಜಾರ್ ಸೆಟ್ ಗೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಭೇಟಿ ನೀಡಿದ್ದಾರೆ. ನವ ನಿರ್ದೇಶಕ ರಾಧಕೃಷ್ಣ ರೆಡ್ಡಿ ನಿರ್ದೇಶನವಿರುವ ಮಾಯಾಬಜಾರ್ ಸಿನಿಮಾದಲ್ಲಿ ರಾಜ್ ಬಿ ಶೆಟ್ಟಿ, ವಸಿಷ್ಠ ಸಿಂಹ, ಚೈತ್ರ ಮುಖ್ಯ ಭೂಮಿಕೆಯಲ್ಲಿ ಅಭಿನಯ ಮಾಡುತ್ತಿದ್ದಾರೆ.

  ಮಾಯಾಬಜಾರ್ ಸಿನಿಮಾದ ಎರಡನೇ ಹಂತದ ಚಿತ್ರೀಕರಣ ಶುರುವಾಗಿದ್ದು ಪ್ರಕಾಶ್ ರಾಜ್ ಇತ್ತೀಚಿಗಷ್ಟೇ ಶೂಟಿಂಗ್ ನಲ್ಲಿ ಭಾಗಿ ಆಗಿದ್ದಾರೆ. ಪ್ರಕಾಶ್ ರಾಜ್ ಹಾಗೂ ಸಾಧುಕೋಕಿಲ ಚಿತ್ರತಂಡ ಸೇರಿಕೊಂಡ ಖುಷಿಯಲ್ಲೇ ಪವರ್ ಸ್ಟಾರ್ ಕೂಡ ಚಿತ್ರೀಕರಣ ಆಗುತ್ತಿರುವ ಸ್ಥಳಕ್ಕೆ ಭೇಟಿ ನೀಡಿ ಕೆಲ ಸಮಯ ಕಾಲ ಕಾಳೆದಿದ್ದಾರೆ.

  ಪುನೀತ್ ಚಿತ್ರಕ್ಕೆ ನಾಯಕಿ ಆದ 'ಜೋಡಿಹಕ್ಕಿ' ಜಾನಕಿ ಟೀಚರ್ ಚೈತ್ರಪುನೀತ್ ಚಿತ್ರಕ್ಕೆ ನಾಯಕಿ ಆದ 'ಜೋಡಿಹಕ್ಕಿ' ಜಾನಕಿ ಟೀಚರ್ ಚೈತ್ರ

  ಮಾಯಾಬಜಾರ್ ಸಿನಿಮಾದಲ್ಲಿ ಸುಧಾರಾಣಿ ಕೂಡ ಅಭಿನಯ ಮಾಡುತ್ತಿದ್ದು ಒಂದು ಮೊಟ್ಟೆ ಕಥೆ, ಕಾಫಿ ತೋಟ ಸಿನಿಮಾ ಖ್ಯಾತಿಯ ಮಿದುನ್ ಮುಕುಂದನ್ ಸಂಗೀತ ನಿರ್ದೆಶನ ಮಾಡುತ್ತಿದ್ದಾರೆ. ಅಪರೇಷನ್ ಅಲಮೇಲಮ್ಮ ಸಿನಿಮಾ ಮೂಲಕ ಕನ್ನಡ ಸಿನಿಮಾರಂಗ ಪ್ರವೇಶ ಮಾಡಿದ ಅಭಿಷೇಕ್ ಚಿತ್ರಕ್ಕೆ ಕ್ಯಾಮೆರಾ ವರ್ಕ್ ಮಾಡಿದ್ದಾರೆ.

  ರಾಜ್ ಬಿ ಶೆಟ್ಟಿ, ವಸಿಷ್ಠ, ಚೈತ್ರ, ಪ್ರಕಾಶ್ ರಾಜ್, ಸುಧಾರಾಣಿ ಹೀಗೆ ಅದ್ಬುತ ಕಲಾವಿದರನ್ನೇ ಸಿನಿಮಾಗಾಗಿ ಆಯ್ಕೆ ಮಾಡಿಕೊಂಡಿರುವ ನಿರ್ದೆಶಕರು ಮೊದಲ ನಿರ್ದೇಶನದಲ್ಲೇ ಪ್ರೇಕ್ಷಕರಿಗೆ ಮನೋರಂಜನಾತ್ಮಕ ಚಿತ್ರವನ್ನ ನೀಡಲು ಸಿದ್ದರಾಗಿದ್ದಾರೆ.

  ಪುನೀತ್ ನಿರ್ಮಾಣದ ಎರಡನೇ ಚಿತ್ರಕ್ಕೆ ಟೈಟಲ್ ಫಿಕ್ಸ್ಪುನೀತ್ ನಿರ್ಮಾಣದ ಎರಡನೇ ಚಿತ್ರಕ್ಕೆ ಟೈಟಲ್ ಫಿಕ್ಸ್

  English summary
  Power star Puneeth Rajkumar has visited the Mayabazar movie set, starring Raj B Shetty, Vasishtha Simha, Prakash Raj and many more Radha Krishna Reddy directing Mayabazar film .

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X