ಪ್ರೀತಿಯ ಜೀವ ಉಳಿಸಿದ್ದ ಅಪ್ಪುಗೆ ದೇವರಿಗೂ ಮಿಗಿಲಾದ ಸ್ಥಾನ ಕೊಟ್ಟ ದಾವಣೆಗೆರೆ ಕುಟುಂಬ

By ದಾವಣೆಗೆರೆ ಪ್ರತಿನಿಧಿ

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ನಮ್ಮನ್ನಗಲಿ ತಿಂಗಳು ಕಳೆದಿದೆ. ಆದರೆ ಅಪ್ಪು ನೆನಪು ಮಾಸಿಲ್ಲ. ಪುನೀತ್ ಮಾಡಿರುವ ಸಹಾಯ ಒಂದೊಂದೇ ಬೆಳಕಿಗೆ ಬರುತ್ತಲೇ ಇವೆ, ಅಭಿಮಾನಿಗಳಿಗೆ ಪುನೀತ್ ಮೇಲಿನ ಅಭಿಮಾನ ಇನ್ನಷ್ಟು ಹೆಚ್ಚಾಗುತ್ತಲೇ ಇದೆ. ಪುನೀತ್ ರಾಜಕುಮಾರ್ ಮಾಡಿರುವ ಸಮಾಜಮುಖಿ ಕಾರ್ಯಗಳು ಒಂದಕ್ಕಿಂತ ಮತ್ತೊಂದು ಜನಮಾನಸದಲ್ಲಿ ಅಚ್ಚಳಿಯದೇ ಉಳಿದಿವೆ.

Recommended Video

ಹೊರಬರುತ್ತಿದೆ ಪುನೀತ್ ಮಾಡಿದ ಮತ್ತಷ್ಟು ಮಹತ್ಕಾರ್ಯಗಳು

ದಾವಣಗೆರೆಯ ಬಾಲಕಿಯೊಬ್ಬಳಿಗೆ ಅಪ್ಪು ನೆರವು ನೀಡಿದ್ದರು. ಅಪ್ಪು ಮಾಡಿದ್ದ ಸಹಾಯವನ್ನು ಈ ಕುಟುಂಬ ಮರೆತಿಲ್ಲ, ಅಪ್ಪು ಮಾಡಿದ್ದ ಸಹಾಯಕ್ಕೆ ಪ್ರತಿಯಾಗಿ ಇಡೀ ಕುಟುಂಬವೇ ನಿತ್ಯವೂ ಅಪ್ಪುವಿಗೆ ಪೂಜೆ ಮಾಡುತ್ತಿದೆ. ದೇವರಿಗೆ ನೀಡುವಷ್ಟೇ ಪ್ರಾಧಾನ್ಯತೆಯನ್ನು ಅಪ್ಪುಗೆ ನೀಡಿದೆ. ದೇವರಿಗೆ ಮಾಡಿದಂತೆ ನಿತ್ಯವೂ ಪೂಜೆ ಪುನಸ್ಕಾರವನ್ನು ಚಾಚುತಪ್ಪದೇ ಮಾಡುತ್ತಿದ್ದಾರೆ. ಇದಕ್ಕೆ ಬಲವಾದ ಕಾರಣವಿದೆ.

ದಾವಣಗೆರೆ ಜಿಲ್ಲೆಯ ಚನ್ನಗಿರಿ ಪಟ್ಟಣದ ಕಣಸಾಲು ಬೀದಿಯಲ್ಲಿ ವಾಸ ಆಗಿರುವ ಕುಮಾರ್ ಅವರ ಪುತ್ರಿ ಪ್ರೀತಿ ಅನಾರೋಗ್ಯದಿಂದ ಬಳಲುತ್ತಿದ್ದಳು. ಬಾಲಕಿಯ ಕಿಡ್ನಿ ಆಪರೇಷನ್‌ಗೆ 12.5 ಲಕ್ಷ ರೂಪಾಯಿ ಬೇಕಿತ್ತು. ಕುಟುಂಬದ ಬಳಿ ಹಣ ಇರಲಿಲ್ಲ, ಎಲ್ಲಿಯೂ ಸಾಲ ಹುಟ್ಟಲಿಲ್ಲ. ಇಂತ ಬಡತನದ ಪರಿಸ್ಥಿತಿಯಲ್ಲಿದ್ದ ಪ್ರೀತಿಯ ಚಿಕಿತ್ಸೆಗೆ ಹಣ ಎಲ್ಲಿಂದ ತರುವುದು ಎಂಬ ಚಿಂತೆಯಲ್ಲಿ ಮುಳುಗಿದ್ದರು. ಇತ್ತ ಮಗಳು ಪ್ರೀತಿ 2 ಕಿಡ್ನಿ ಫೇಲ್ ಆಗಿ ಬದುಕುವುದೇ ಕಷ್ಟ ಎಂಬ ಸ್ಥಿತಿ ನಿರ್ಮಾಣವಾಗಿತ್ತು. ಆಗ ನೆರವಿಗೆ ಬಂದವರು ಪವರ್ ಸ್ಟಾರ್ ಪುನೀತ್ ರಾಜಕುಮಾರ್.

ಇಸ್ತ್ರಿ ಅಂಗಡಿ ಇಟ್ಟುಕೊಂಡಿರುವ ಕುಮಾರ್

ಇಸ್ತ್ರಿ ಅಂಗಡಿ ಇಟ್ಟುಕೊಂಡಿರುವ ಕುಮಾರ್

ಪ್ರೀತಿ ತಂದೆ ಕುಮಾರ್ ಇಸ್ತ್ರೀ ಅಂಗಡಿ ಇಟ್ಟುಕೊಂಡು ಜೀವನ ನಡೆಸುತಿದ್ದರು. ಈ ವೇಳೆ ಮಗಳನ್ನ ಆಸ್ಪತ್ರೆಗೆ ತೋರಿಸಲು ಹಣವಿಲ್ಲದೆ ಪರದಾಡ್ತಾ ಇತ್ತು ಕುಮಾರ್ ಕುಟುಂಬ. ಚಿಕ್ಕ ವಯಸ್ಸಿನಿಂದಲೇ ಅಪ್ಪು ಅಭಿಮಾನಿಯಾಗಿದ್ದ ಪ್ರೀತಿಗೆ ಪುನೀತ್ ರಾಜಕುಮಾರ್ ನಟನೆಯ ಚಿತ್ರಗಳೆಂದರೆ ಬಲು ಅಚ್ಚುಮೆಚ್ಚು. ಪ್ರೀತಿಗೆ ಆರೋಗ್ಯ ಸಮಸ್ಯೆ ಆಗಿರುವ ಬಗ್ಗೆ ಅಪ್ಪು ಗಮನಕ್ಕೆ ಪ್ರೀತಿ ಕುಟುಂಬ ತಂದಿತ್ತು. ಈ ವೇಳೆ ಕುಮಾರ್ ಕುಟುಂಬವನ್ನು ಬೆಂಗಳೂರಿಗೆ ಕರೆಯಿಸಿ ಪ್ರೀತಿಗೆ ಆಪರೇಶನ್ ಮಾಡಿಸಿದ್ದ ಪುನೀತ್ ಅವರೇ ಆಸ್ಪತ್ರೆ ವೆಚ್ಚ 12.5 ಲಕ್ಷ ಹಣ ಕೊಟ್ಟು ಪ್ರಾಣ ಉಳಿಸಿದ್ದರು.

ಪುನೀತ್ ಅಗಲಿಕೆ ತೀವ್ರ ಆಘಾತ ಉಂಟು ಮಾಡಿದೆ

ಪುನೀತ್ ಅಗಲಿಕೆ ತೀವ್ರ ಆಘಾತ ಉಂಟು ಮಾಡಿದೆ

ಪ್ರೀತಿಗೆ ಆಪರೇಶನ್ ನಂತರ ಆರೋಗ್ಯದಿಂದ ಇದ್ದು ಚ‌ನ್ನಗಿರಿ ಪಟ್ಟಣದಲ್ಲಿ ಈಗ ಪ್ರಥಮ ಪಿಯುಸಿ ಓದುತಿದ್ದಾಳೆ. ಕುಟುಂಬಕ್ಕೆ ಜೀವ ಕೊಟ್ಟು ಅವರೇ ಇಲ್ಲದಿರುವುದು ಕುಮಾರ್ ಕುಟುಂಬ ಕಣ್ಣೀರಿನ ಕಡಲಲ್ಲಿ ತೇಲುವಂತೆ ಮಾಡಿದೆ. ಮಗಳ ಜೀವ ಉಳಿಸಿ ಕೊಟ್ಟ ಅಪ್ಪುಗೆ ನಿತ್ಯವೂ ಅವರ ಮನೆಯಲ್ಲಿ ಅಪ್ಪು ಭಾವಚಿತ್ರಕ್ಕೆ ಪೂಜೆ ನಡೆಸಲಾಗುತ್ತಿದೆ.

ವಿಡಿಯೋ ಮಾಡಿ ಪುನೀತ್‌ಗೆ ಕಳಿಸಿದ್ದ ಕುಟುಂಬ

ವಿಡಿಯೋ ಮಾಡಿ ಪುನೀತ್‌ಗೆ ಕಳಿಸಿದ್ದ ಕುಟುಂಬ

''ಪ್ರೀತಿಯ ಆರೋಗ್ಯ ಸಮಸ್ಯೆ ಆಗಿದ್ದು, ಮಗಳನ್ನು ತೋರಿಸಲು ಹಣವಿಲ್ಲ ಹಾಗಾಗಿ ದಯವಿಟ್ಟು ನೀವು ಸಹಾಯ ಮಾಡಿ ಎಂಬ ವಿಡಿಯೋ ಮಾಡಿ ಅದನ್ನು ಪುನೀತ್ ರಾಜಕುಮಾರ್ ಅವರಿಗೆ ಕಳುಹಿಸಿಕೊಟ್ಟಿದ್ದೆವು. ಈ ವೇಳೆ ಪುನೀತ್ ಅವರು ಅವರನ್ನ ತಮ್ಮ ಮನೆಗೆ ಕರೆದು ಪ್ರೀತಿಯನ್ನು ಪ್ರೀತಿಯಿಂದ ಮಾತನಾಡಿಸಿ ಅವರಿಗೆ ಯಾವುದಾದ್ರೂ ಆಸ್ಪತ್ರೆಗೆ ತೋರಿಸಿ.. ಹಣಕಾಸಿನ ಚಿಂತೆ ಮಾಡಬೇಡಿ.. ನಾನು ಹಣವನ್ನ ನೀಡ್ತೀನಿ ಅಂತ ಹೇಳಿದ್ರು.. ಅದರಂತೆ ಪ್ರೀತಿಗೆ ಅವರ ತಂದೆ ತಾಯಿ 2017ರಲ್ಲಿ ಒಂದು ಕಿಡ್ನಿ ಕಸಿಯನ್ನ ಮಾಡಿಸಿದ್ದರು'' ಎಂದು ಮಾಹಿತಿ ನೀಡಿದ್ದಾರೆ ಕುಮಾರ್.

12.50 ಲಕ್ಷ ಭರಿಸಿದ್ದ ಅಪ್ಪು

12.50 ಲಕ್ಷ ಭರಿಸಿದ್ದ ಅಪ್ಪು

ಒಟ್ಟು 12. 5 ಲಕ್ಷ ರೂಪಾಯಿ ಖರ್ಚು ಬಂದಿದ್ದು ಅದನ್ನ ಅಪ್ಪು ಅವರೆ ಬರಸಿದ್ದರು. ಇದರಿಂದ‌ ಪ್ರೀತಿ ಬದುಕುಳಿದು ಇದೀಗ ಆರಾಮಾಗಿ ಜೀವನ ನಡೆಸುತಿದ್ದರು. ಆದರೆ ಪ್ರೀತಿಗೆ ಪುನರ್ಜನ್ಮ ನೀಡಿದ ಅಪ್ಪು ಇದೀಗ ಅಗಲಿದ್ದು ಕುಮಾರ್ ಕುಟುಂಬಕ್ಕೆ ಸಾಕಷ್ಟು ನೋವು ಉಂಟು ಮಾಡಿತ್ತು. ತಮ್ಮ ಕುಟುಂಬವನ್ನ ಕಷ್ಟದಿಂದ ಕಾಪಾಡಿ ಹೊಸ ಬದುಕು ನೀಡಿದ ಅಪ್ಪು ಅವರ ಭಾವ ಚಿತ್ರಕ್ಕೆ ಇಡೀ ಕುಟುಂಬ ನಿತ್ಯ ಪೂಜೆ ಸಲ್ಲಿಸುವುದರ ಮೂಲಕ ಗೌರವ ಸಲ್ಲಿಸುತಿದ್ದಾರೆ ಎಂದು ಪ್ರೀತಿಯ ತಂದೆ ಕುಮಾರ್ ನೆನಪು ಮಾಡಿಕೊಂಡಿದ್ದಾರೆ.

More from Filmibeat

English summary
Puneeth Rajkumar helped a Davanagere girl to get treatment for kidney failure. Puneeth paid 12.50 lakh rupees hospital bill.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X