ಲುಕೇಮಿಯಾದಿಂದ ಬಳಲುತ್ತಿದ್ದ ಪುನರ್ಭವ ಜೀವ ಕಾಪಾಡಲು ಪುನೀತ್ ಮಾಡಿದ್ದೇನು?

ಬೆಂಗಳೂರು, ನ. 02: ಆ ಪುಟ್ಟ ಬಾಲಕನ ಹೆಸರು ಪುನರ್ಭವ, ಆ ಕಂದಮ್ಮನಿಗೆ ಲುಕೇಮಿಯಾ ಎಂಬ ರಕ್ತ ಕ್ಯಾನ್ಸರ್ ಇತ್ತು. ಪುನರ್ಭವಗೆ ಮರು ಜನ್ಮ ಕೊಡಲು ನಟ ಪುನೀತ್ ಅವರೇ ಸ್ವತಃ ಸಹಾಯ ಮಾಡಿ ಜೀವ ರಕ್ಷಣೆ ಮಾಡಿದ್ದರು! ವಿಧಿಯಾಟ ಆ ಪುಟ್ಟ ಕಂದಮ್ಮ ಈಗ ಚೆನ್ನಾಗಿದೆ. ಇನ್ನೇನು ಚಿಕಿತ್ಸೆ ಕೊಡಿಸಿ ಪುಟ್ಟ ಕಂದನ ಖುಷಿಯನ್ನು ಕಣ್ಣು ತುಂಬಿಕೊಳ್ಳಲು ಬದುಕು ಉಳಿಸಿದ ನಟ ಪುನೀತ್ ರಾಜಕುಮಾರ ಇಲ್ಲ!

ಪುನೀತ್ ಹೃದಯಾಘಾತದಿಂದ ನಿಧನರಾಗಿದ್ದಾರೆ. ಯಾರಿಗೂ ಗೊತ್ತಾಗದಂತೆ ಪುನೀತ್ ಮಾಡಿದ್ದ ಸೇವೆಗಳು ಒಂದೊಂದಾಗಿ ಹೊರ ಬೀಳುತ್ತಿವೆ. ಅದರಲ್ಲಿ ಚಾಮರಾಜಪೇಟೆಯ ಬಡ ದಂಪತಿಯ ಪುಟ್ಟ ಕಂದಮ್ಮನ ಜೀವ ಉಳಿಸಲು ನಟ ಪುನೀತ್ ಮಾಡಿದ್ದ ಸಹಾಯ ಹಸ್ತ. ಪುನೀತ್ ರಾಜ್‌ಕುಮಾರ್ ಪ್ರತಿ ನಿತ್ಯ ಆ ಬಾಲಕನ ವಿವರ ಪಡೆಯುತ್ತಿದ್ದರು. ಈಗ ಪುನೀತ್ ನಿಧನದ ಸುದ್ದಿ ಕೇಳಿಯೇ ಆ ಬಾಲಕನ ಕುಟುಂಬ ದಿಗ್ಬ್ರಾಂತವಾಗಿದೆ. ಅಪ್ಪು ಎಂದು ಹೆಸರು ಬದಲಿಸಿಕೊಂಡಿರುವ ಪುನರ್ಭವ ಚೇತರಿಸಿಕೊಳ್ಳುತ್ತಿದ್ದಾನೆ. ಆ ಖುಷಿ ನೋಡಲು ಅಪ್ಪು ನಮ್ಮೊಂದಿಗೆ ಇಲ್ಲ.

ಏನಿದು ಸ್ಟೋರಿ:

ವರ್ಷದ ಹಿಂದೆ ನಡೆದ ಘಟನೆಯಿದು. ಚಾಮರಾಜಪೇಟೆಯ ನಿವಾಸಿ ಸೋಮಶೇಖರ್ ಮತ್ತು ಸಂಧ್ಯಾ ದಂಪತಿಗೆ ಏಳು ವರ್ಷದ ಮಗನಿದ್ದ. ಜ್ವರ ಬಂದು ಆಸ್ಪತ್ರೆಗೆ ದಾಖಲಿಸಿದರು. ಕೆಲಸಕ್ಕೆ ಹೋಗುತ್ತಿದ್ದ ಸಂಧ್ಯಾ ಅವರು ಇಎಸ್ಐ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದರು. ಏನು ಅಂತ ಗೊತ್ತಾಗಲೇ ಇಲ್ಲ. ಆ ಬಳಿಕ ವೈದ್ಯಕೀಯ ಪರೀಕ್ಷೆ ನಡೆಸಿದ ಬಳಿಕ ಪುನರ್ಭವಗೆ ಲುಕೇಮಿಯಾ ಎಂಬ ಅಪಾಯಕಾರಿ ರಕ್ತದ ಕ್ಯಾನ್ಸರ್ ಇರುವ ವಿಚಾರ ಹೊರ ಬಿದ್ದಿತ್ತು. ಆಕಾಶವೇ ಮೇಲೆ ಬಿದ್ದಂತಾಗಿತ್ತು. ವೃತ್ತಿಯಲ್ಲಿ ಚಾಲಕನಾಗಿರುವ ಸೋಮಶೇಖರ್ ಮತ್ತು ಭಾಗ್ಯ ದಂಪತಿಗೆ ತನ್ನ ಏಕೈಕ ಮಗನ ಜೀವ ಉಳಿಸಿಕೊಳ್ಳುವ ಮಹದಾಸೆ. ಆದರೆ ಚಿಕಿತ್ಸೆ ಕೊಡಿಸಲು ಐದು ಪೈಸೆ ಹಣವಿಲ್ಲ. ಈ ವೇಳೆ ಸಿಕ್ಕ ಸಂಪರ್ಕ ಮುರಳಿ ಅವರದ್ದು. ಅಪ್ಪು ಯುವ ಬ್ರಿಗೇಡ್ ಮುಖ್ಯಸ್ಥರಾದ ಮುರಳಿ ಅವರು ಬ್ರಿಗೇಡ್ ವತಿಯಿಂದ ಒಂದು ಲಕ್ಷ ರೂ. ಆರ್ಥಿಕ ನೆರವು ನೀಡಿ ಪ್ರಾಥಮಿಕ ಚಿಕಿತ್ಸೆ ಪಡೆಯಲು ನೆರವಾಗಿದ್ದರು. ಈ ವಿಚಾರವನ್ನು ನಟ ಪುನೀತ್ ರಾಜ್‌ಕುಮಾರ್ ಗಮನಕ್ಕೆ ತಂದಿದ್ದರು.

Puneeth Rajkumar helps to boy suffering from Leukemia

ಕಳೆದ ವರ್ಷ ಕೊರೊನಾ ಲಾಕ್ ಡೌನ್ ಸಮಯದಲ್ಲಿ ಪುನರ್ಭವ ವಿಚಾರವಾಗಿ ಪುನೀತ್ ಗಮನಕ್ಕೆ ತರಲಾಗಿತ್ತು. ಮರು ಕ್ಷಣವೇ ಸ್ಪಂದಿಸಿದ್ದ ನಟ ಪುನೀತ್ ಆ ಮಗುವಿನ ಚಿಕಿತ್ಸೆ ವೆಚ್ಚ ಭರಿಸುವುದಾಗಿ ಒಪ್ಪಿಕೊಂಡಿದ್ದರು. ಆ ಬಳಿಕ ಪುನರ್ಭವಗೆ ಚಿಕಿತ್ಸೆ ಶುರುವಾಗಿತ್ತು. ಪುನೀತ್ ಎಷ್ಟು ಆರ್ಥಿಕ ಸಹಾಯ ಮಾಡಿದ್ದರು ಎಂಬುದರ ಬಗ್ಗೆ ಕುಟುಂಬ ಸಾರ್ವಜನಿಕವಾಗಿ ಬಹಿರಂಗಗೊಳಿಸಲು ಸುತರಾಂ ಒಪ್ಪಲಿಲ್ಲ. ಆದರೆ, ಎಲ್ಲಾ ಚಿಕಿತ್ಸೆ ವೆಚ್ಚವನ್ನು ಪುನೀತ್ ಭರಿಸುತ್ತಿದ್ದರು. ಮಾತ್ರವಲ್ಲ ಪ್ರತಿ ನಿತ್ಯ ಮಗುವಿನ ಆರೋಗ್ಯದ ಬಗ್ಗೆ ವಿಚಾರಿಸಿಕೊಳ್ಳುತ್ತಿದ್ದರು. ಪೋಟೋ, ವಿಡಿಯೋ ತರಿಸಿಕೊಂಡು ನೋಡುತ್ತಿದ್ದರು.

ಪಾರ್ವತಮ್ಮ ರಾಜ್‌ಕುಮಾರ್ ಹುಟ್ಟುಹಬ್ಬದ ದಿನ ಸ್ವತಃ ಪುನೀತ್ ಈ ಕುಟುಂಬವನ್ನು ಕಂಠೀರವ ಕ್ರೀಡಾಂಗಣಕ್ಕೆ ಕರೆಸಿ ಕುಶಲೋಪಹರಿ ವಿಚಾರಿಸಿದ್ದರು. ಪುನರ್ಭವನನ್ನು ಎತ್ತಿ ಆಡಿಸಿದ್ದ ಪುನೀತ್ ರಾಜ್ ಕುಮಾರ್, ಲುಕೇಮಿಯಾಗೆ ಸಂಪೂರ್ಣ ಚಿಕಿತ್ಸೆ ವೆಚ್ಚ ಭರಿಸುತ್ತಲೇ ಇದ್ದರು. ಈ ಒಂದು ಸಹಾಯ ಹಸ್ತದ ವಿಚಾರ ಪುನೀತ್ ಮತ್ತು ಪುನರ್ಭವ ಕುಟುಂಬಕ್ಕೆ ಅಷ್ಟೇ ಗೊತ್ತಿತ್ತು. ಲುಕೇಮಿಯಾ ರಕ್ತದ ಕ್ಯಾನ್ಸರ್ ನಿಂದ ಬಳಲುತ್ತಿದ್ದ ಪುನರ್ಭವಗೆ ಪುನರ್ ಜನ್ಮ ಕೊಟ್ಟ ಪುನೀತ್ ಆ ಪುಟ್ಟ ಬಾಲಕನ ಖುಷಿ ನೋಡಲು ನಮ್ಮೊಂದಿಗೆ ಇಲ್ಲ.

Puneeth Rajkumar helps to boy suffering from Leukemia

"ಪುನೀತ್ ರಾಜ್‌ಕುಮಾರ್ ಕೇವಲ ನಟರಲ್ಲ. ನನ್ನ ಪಾಲಿನ ಸ್ವಂತ ಅಣ್ಣ. ಆ ದೇವರು ಇದ್ದಾನೆ ಎಂಬುದು ಸುಳ್ಳು. ನನ್ನ ಬದುಕಿನ ಕುಡಿಯನ್ನು ಉಳಿಸಿದ ಮಹಾನುಭಾವ ಪುನೀತ್ ಅಣ್ಣ. ಅವರು ಇಲ್ಲ ಅಂತ ನಂಬಲಿಕ್ಕೆ ಆಗುತ್ತಿಲ್ಲ. ಆ ದೇವರಿಗೆ ಕರುಣೆ ಎಂಬುದೇ ಇಲ್ಲ. ಅವರು ನಮ್ಮ ಸಹಾಯಕ್ಕೆ ಬರದಿದ್ದರೆ ನನ್ನ ಪುನರ್ಭವ ಅಪ್ಪು ಆಗಿ ಈಗ ನನ್ನೊಂದಿಗೆ ಇರುತ್ತಿರಲಿಲ್ಲ. ಇನ್ನು ಕೆಲವೇ ತಿಂಗಳಲ್ಲಿ ಪುನರ್ಭವಗೆ ಶಸ್ತ್ರ ಚಿಕಿತ್ಸೆ ನಡೆಯಲಿದೆ. ಪುನೀತ್ ಅವರ ನೆರವಿನಿಂದ ಪುನರ್ಭವ ಇದ್ದಾನೆ. ಆದರೆ ಆತನ ಖುಷಿ ನೋಡಲು ನನ್ನ ಸಹೋದರ ಪುನೀತ್ ಅಣ್ಣ ಇಲ್ಲ'' ಎಂದು 'ಒನ್ ಇಂಡಿಯಾ ಕನ್ನಡ'ಕ್ಕೆ ಸಂಧ್ಯಾ ಅವರು ನೋವನ್ನು ತೋಡಿಕೊಂಡರು.

Puneeth Rajkumar helps to boy suffering from Leukemia

ವಿಪರ್ಯಾಸವೆಂದೆ ಪುನೀತ್ ಅಭಿಮಾನಿಯಾಗಿರುವ ಪುನರ್ಭವನಿಗೆ ಪುನೀತ್ ತರ ಬಟ್ಟೆ ಬೇಕು. ಪುನೀತ್‌ನಂತೆಯೇ ಡ್ಯಾನ್ಸ್‌ ಮಾಡ್ತಾನೆ. ಪುನೀತ್ ತರನೇ ನಟನೆ ಮಾಡುವ ಪ್ರಯತ್ನ ಮಾಡ್ತಾನೆ. ಆದರೆ ಲುಕೇಮಿಯಾ ಎಂಬ ಕಾಯಿಲೆಯಿಂದ ಆ ಮಗು ಬಳಲುತ್ತಿರುವುದು ಅದಕ್ಕೆ ಗೊತ್ತಿಲ್ಲ. ಅದಕ್ಕೆ ನಟ ಪುನೀತ್ ಅವರೇ ಜೀವನ. ವಿಪರ್ಯಾಸ ಎಂದರೆ ಪುರ್ನಭವ ಜೀವ ಕಾಪಾಡಿದ ವೈದ್ಯಕೀಯ ರಂಗ ಪುನೀತ್ ಜೀವ ಕಾಪಾಡುವಲ್ಲಿ ವಿಫಲವಾಯಿತು.

More from Filmibeat

English summary
Kannada actor Puneeth Rajkumar helps to treatment of boy suffering from Leukemia. Know more
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X