»   »  'ಪ್ಯಾರಿಸ್' ಪ್ರವಾಸದಲ್ಲಿ ಪುನೀತ್ ರಾಜ್ ಕುಮಾರ್ ಮಿಂಚಿಂಗ್

'ಪ್ಯಾರಿಸ್' ಪ್ರವಾಸದಲ್ಲಿ ಪುನೀತ್ ರಾಜ್ ಕುಮಾರ್ ಮಿಂಚಿಂಗ್

Posted By:
Subscribe to Filmibeat Kannada

ಕಲರ್ಸ್ ಕನ್ನಡದಲ್ಲಿ 'ಫ್ಯಾಮಿಲಿ ಪವರ್' ಮುಗಿಸಿರುವ ಪುನೀತ್ ರಾಜ್ ಕುಮಾರ್ ಪ್ಯಾರಿಸ್ ಗೆ ಹಾರಿದ್ದಾರೆ. ಪ್ಯಾರಿಸ್ ಅಂದಾಕ್ಷಣ ಸಿನಿಮಾ ಶೂಟಿಂಗ್ ಎಂದುಕೊಳ್ಳಬೇಡಿ. ಅಪ್ಪು ಹೋಗಿರುವುದು ಹಾಲಿಡೇ ಎಂಜಾಯ್ ಮಾಡೋದಕ್ಕೆ.

ಹೌದು, ಸತತ ಚಿತ್ರೀಕರಣದಲ್ಲಿ ಬ್ಯುಸಿಯಿರುವ ಪವರ್ ಸ್ಟಾರ್ ಸಣ್ಣದೊಂದು ಬ್ರೇಕ್ ತಗೊಂಡು ಪ್ಯಾರಿಸ್ ಗೆ ಪ್ರವಾಸಕ್ಕೆ ಹೋಗಿದ್ದಾರೆ. ಜೊತೆಗೆ ಪತ್ನಿ ಅಶ್ವಿನಿ ಮತ್ತು ಮಕ್ಕಳು ಕೂಡ ಸಾಥ್ ನೀಡಿದ್ದಾರೆ.

ಮಕ್ಕಳಿಗೆ ಸ್ಕೂಲ್ ರಜೆ ಇರುವುದರಿಂದ ಫ್ಯಾಮಿಲಿ ಸೇಮೆತ ಪುನೀತ್ ವಿದೇಶಕ್ಕೆ ಹೋಗಿದ್ದಾರೆ. ಸಮ್ಮರ್ ಹಾಲಿಡೇ ಎಂಜಾಯ್ ಮಾಡ್ತಿರೋ ಪುನೀತ್ ಕೆಲವೊಂದು ಫೋಟೋಗಳನ್ನ ಕೂಡ ಶೇರ್ ಮಾಡಿಕೊಂಡಿದ್ದಾರೆ.

ಪುನೀತ್ 'ನಟಸಾರ್ವಭೌಮ' ರೀಮೇಕ್ ಸಿನಿಮಾ ಅಲ್ಲ

Puneeth rajkumar in paris

ಈಗಷ್ಟೇ ಪುನೀತ್ ರಾಜ್ ಕುಮಾರ್ ನಿರೂಪಣೆ ಮಾಡ್ತಿದ್ದ 'ಫ್ಯಾಮಿಲಿ ಪವರ್' ಕಾರ್ಯಕ್ರಮದ ಕೊನೆಯ ಎಪಿಸೋಡ್ ಮುಗಿಸಿದ್ದಾರೆ. ಈ ಮಧ್ಯೆ ಪವನ್ ಒಡೆಯರ್ ನಿರ್ದೇಶನ ಮಾಡುತ್ತಿರುವ 'ನಟ ಸಾರ್ವಭೌಮ' ಚಿತ್ರದ ಚಿತ್ರೀಕರಣ ಕೂಡ ನಡೆಯುತ್ತಿದೆ. ಪ್ಯಾರಿಸ್ ನಿಂದ ಬಂದ ತಕ್ಷಣ ನಟ ಸಾರ್ವಭೌಮ ಶೂಟಿಂಗ್ ಗೆ ಪುನೀತ್ ಹಾಜರಾಗಲಿದ್ದಾರೆ.

English summary
Kannada actor, Power star puneeth rajkumar has enjoying summer vacation in paris with his Family. currently, puneeth Rajkumar busy in nata sarvabhouma movie.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X