ಶಿವರಾಜ್ ಕುಮಾರ್ 'ವೇದ' ಚಿತ್ರದಲ್ಲಿ ಪುನೀತ್‌ ರಾಜ್‌ಕುಮಾರ್!

ನಟ ಪವರ್‌ಸ್ಟಾರ್ ಪುನೀತ್‌ ರಾಜ್‌ಕುಮಾರ್ ಅವರು ಇಲ್ಲದೇ ದಿನಗಳು ಉರುಳುತ್ತಿವೆ. ಆದರೆ ಅಪ್ಪುಗಾಗಿ ಸಹಸ್ರಾರು ಮನಸ್ಸುಗಳು ಸದಾ ಮಿಡಿಯುತ್ತಾ ಇರುತ್ತವೆ. ಅಪ್ಪು ಅವರನ್ನು ಸಿನಿಮಾ ಮಂದಿ, ಅದರಲ್ಲೂ ಅವರ ಜೊತೆಗೆ ಒಡನಾಟ ಇದ್ದ ಮಂದಿ, ಅವರ ಜೊತೆಗೆ ಕಳೆದ ಕ್ಷಣಗಳನ್ನು ಮರೆಯಲು ಸಾಧ್ಯವೇ ಇಲ್ಲ.

Recommended Video

ನೋವಿನಲ್ಲು ಸಹಜ ಜೀವನಕ್ಕೆ ಮರಳಿದ ಶಿವರಾಜ್‌ಕುಮಾರ್

ಯಾವಾಗ ಪುನೀತ್‌ ರಾಜ್‌ಕುಮಾರ್ ಅವರ ಬಗ್ಗೆ ಮಾತನಾಡಬೇಕಾದರೂ ಕೂಡ ಸಿನಿಮಾ ಮಂದಿ ಭಾವುಕರಾಗುತ್ತಾರೆ. ಸದ್ಯ 'ಜೇಮ್ಸ್' ಚಿತ್ರ ರಿಲೀಸ್‌ಗೆ ರೆಡಿಯಾಗಿದ್ದು, ಚಿತ್ರದ ಸುದ್ದಿಗೋಷ್ಟಿಯನ್ನು ಮಾಡಲಾಗಿದೆ. ಈ ಕಾರ್ಯಕ್ರಮದಲ್ಲಿ ಇಡೀ ಸಿನಿಮಾ ತಂಡ ಮತ್ತು ಸಿನಿಮಾರಂಗದ ಹಲವು ಕಲಾವಿದರು ಹಾಜರಿದ್ದರು. ಈ ವೇಳೆ ಅಪ್ಪು ಅವರನ್ನು ನೆನೆದು ಮತ್ತೇ, ಮತ್ತೇ ಭಾವುಕರಾಗಿದ್ದಾರೆ.

'ಜೇಮ್ಸ್‌' ಕಾರ್ಯಕ್ರಮದಲ್ಲಿ ನಟ ಶಿವರಾಜ್ ಕುಮಾರ್ ಅವರು ಭಾಗಿ ಆಗಿದ್ದಾರೆ. ಅಪ್ಪು ಅಗಲಿಕೆಯ ಬಳಿಕ ಶಿವರಾಜ್ ಕುಮಾರ್ ಅವರು ಹಲವು ಬಾರಿ ಅವರನ್ನು ನೆನೆದು ಭಾವುಕರಾಗಿದ್ದಾರೆ. ಅದರೆ ಈಗ ಪುನೀತ್‌ ರಾಜ್‌ಕುಮಾರ್‌ ಬಗ್ಗೆ ಮತ್ತೇ ಮಾತನಾಡಿದ ಅಪ್ಪು ಹಿರಿಯ ಸಹೋದರ ಶಿವಣ್ಣ ವಿಶೇಷವಾದ ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ಅಪ್ಪು ಸಹೋದರ ಆಗಿದ್ದು ನನ್ನ ಪುಣ್ಯ ಎಂದ ಶಿವಣ್ಣ!

ಅಪ್ಪು ಸಹೋದರ ಆಗಿದ್ದು ನನ್ನ ಪುಣ್ಯ ಎಂದ ಶಿವಣ್ಣ!

ನಟ ಶಿವರಾಜ್ ಕುಮಾರ್ ಸದಾ ಹೇಳುತ್ತಾ ಇರುತ್ತಾರೆ. "ನನ್ನ ಸಹೋದರ ಅಪ್ಪು ಎಂದೂ ಕೂಡ ರಾಜ ಇದ್ದ ಹಾಗೆ" ಅಂತ. ಪುನೀತ್‌ ರಾಜ್‌ಕುಮಾರ್ ಬಗ್ಗೆ 'ಜೇಮ್ಸ್' ಸುದ್ದಿಗೋಷ್ಟಿಯಲ್ಲಿ ಪುನೀತ್‌ ರಾಜ್‌ಕುಮಾರ್ ಮಾತನಾಡಿದ್ದಾರೆ. ಈ ವೇಳೆ ಅವರು "ಪುನೀತ್‌ ನನ್ನ ಸಹೋದರ ಆಗಿರುವುದು ನನ್ನ ಪುಣ್ಯ" ಎಂದಿದ್ದಾರೆ. ಅಷ್ಟೇ ಅಲ್ಲಾ "ಅಪ್ಪುನ ಹಾಗೆ ಬಿಡಲು ಇಷ್ಟ ಇಲ್ಲ, ಅವನಿಗಾಗಿ ಏನಾದರು ಮಾಡುತ್ತಾ ಇರಬೇಕು ಅನಿಸುತ್ತೆ. ಸಾಕಷ್ಟು ಕಾರ್ಯಗಳಲ್ಲಿ ಅಪ್ಪುನನ್ನು ತರಬೇಕು ಎನ್ನುವ ನನ್ನ ಪ್ರಯತ್ನ ನಡೀತಿದೆ. ವೇದ ಸಿನಿಮಾದಲ್ಲಿ ಅಪ್ಪು ತರಲು ಪ್ರಯತ್ನ ಪಡುತ್ತಿದ್ದೇವೆ." ಎಂದು ನಟ ಶಿವರಾಜ್ ಕುಮಾರ್ ವೇದಿಕೆ ಮೇಲೆ ಮಾತನಾಡಿದ್ದಾರೆ.

'ವೇದ' ಸಿನಿಮಾದಲ್ಲಿ ನಟ ಪುನೀತ್‌ರಾಜ್‌ಕುಮಾರ್!

'ವೇದ' ಸಿನಿಮಾದಲ್ಲಿ ನಟ ಪುನೀತ್‌ರಾಜ್‌ಕುಮಾರ್!

ವೇದ, ನಟ ಶಿವರಾಜ್ ಕುಮಾರ್ ಅಭಿನಯದ ಸಿನಿಮಾ. ಈ ಚಿತ್ರವನ್ನು ನಿರ್ದೇಶಕ ಎ.ಹರ್ಷ ನಿರ್ದೇಶನ ಮಾಡುತ್ತಿದ್ದು, ಗೀತಾ ಶಿವರಾಜ್ ಕುಮಾರ್ ಬಂಡವಾಳ ಹೂಡಿದ್ದಾರೆ. ಸದ್ಯಕ್ಕೆ 'ವೇದ' ಚಿತ್ರೀಕರಣದ ಹಂತದಲ್ಲಿ ಇದೆ. ಈ ಚಿತ್ರದ ಬಗ್ಗೆ ಸೆಂಚುರಿ ಸ್ಟಾರ್ ವಿಶೇಷ ಸಂಗತಿ ಒಂದನ್ನು ಬಿಚ್ಚಿಟ್ಟಿದ್ದಾರೆ. ವೇದ ಚಿತ್ರದಲ್ಲಿ ಶಿವಣ್ಣನ ಜೊತೆಗೆ ಅಪ್ಪು ಕೂಡ ಇರಲಿದ್ದಾರಂತೆ. ಬಹುಶಃ ಗ್ರಾಫಿಕ್ಸ್ ಮೂಲಕ ಪುನೀತ್ ರಾಜ್‌ಕುಮಾರ್‌ ಅವರನ್ನು ಮರುಸೃಷ್ಟಿಸಲಾಗುತ್ತದೆ ಎನ್ನಲಾಗಿದೆ.

'ಜೇಮ್ಸ್' ಸಿಕ್ಕಿದ್ದೇ ಪುಣ್ಯ ಚಿಕ್ಕಣ್ಣ ಹೇಳಿಕೆ!

'ಜೇಮ್ಸ್' ಸಿಕ್ಕಿದ್ದೇ ಪುಣ್ಯ ಚಿಕ್ಕಣ್ಣ ಹೇಳಿಕೆ!

'ಜೇಮ್ಸ್' ಸಿನಿಮಾದಲ್ಲಿ ಹಲವು ಕಲಾವಿದರಿದ್ದಾರೆ. ಅದರಲ್ಲಿ ಹಾಸ್ಯ ನಟ ಚಿಕ್ಕಣ್ಣ, ತಿಲಕ್ ಸೇರಿದಂತೆ ಹಲವು ಕಲಾವಿದರಿದ್ದಾರೆ. ಈ ಬಗ್ಗೆ ನಟ ಚಿಕ್ಕಣ್ಣ ಮಾತನಾಡಿದ್ದಾರೆ. 'ಜೇಮ್ಸ್' ಕಾರ್ಯಕ್ರಮದಲ್ಲಿ ಮಾತನಾಡಿದ ಅವರು "ಪುನೀತ್ ಸರ್ ಇಲ್ಲ. ಆದರೆ ಅಪ್ಪು ಅವರ ಕೊನೆಯ ಸಿನಿಮಾದಲ್ಲಿ ನಟಿಸಿದ ನಾನೇ ಅದೃಷ್ಟವಂತೆ. ಇದನ್ನು ಅದೃಷ್ಟ ಎನ್ನಬೇಕೋ, ದುರಾದೃಷ್ಟ ಎನ್ನಬೇಕೋ ಗೊತ್ತಿಲ್ಲ. ಅದರೆ ಅವರ ಜೊತೆಗೆ ನಟಿಸಿರುವುದು ನನ್ನ ಅದೃಷ್ಟವೇ ಸರಿ." ಎಂದು ಹೇಳಿಕೊಂಡಿದ್ದಾರೆ.

ಮಾರ್ಚ್ 17ಕ್ಕೆ 'ಜೇಮ್ಸ್' ಜಾತ್ರೆ ಶುರು!

ಮಾರ್ಚ್ 17ಕ್ಕೆ 'ಜೇಮ್ಸ್' ಜಾತ್ರೆ ಶುರು!

ಪುನೀತ್‌ ರಾಜ್‌ಕುಮಾರ್ ಅಭಿನಯದ ಕೊನೆಯ ಚಿತ್ರವನ್ನು ನೋಡಲು ಇನ್ನು ಹೆಚ್ಚು ದಿನ ಕಾಯಬೇಕಾಗಿಲ್ಲ. ಇನ್ನು ಹತ್ತು ದಿನಗಳು ಮಾತ್ರವೇ ಬಾಕಿ ಇದೆ. ಮಾರ್ಚ್ 17ಕ್ಕೆ ಅಪ್ಪು ಜೇಮ್ಸ್ ರೂಪದಲ್ಲಿ ಗ್ರ್ಯಾಂಡ್ ಎಂಟ್ರಿ ಕೊಡಲಿದ್ದಾರೆ. ಅದಕ್ಕಾಗಿ ಈಗಾಗಲೇ ಚಿತ್ರಮಂದಿರದ ಲಿಸ್ಟ್ ಕೂಡ ರಿಲೀಸ್ ಆಗಿದೆ. ಇನ್ನು ಅಪ್ಪು ಅಭಿಮಾನಿಗಳಂತೂ ದೊಡ್ಡ ಸಂಭ್ರಮದ ಮೂಲಕ ಅಪ್ಪು ಹುಟ್ಟುಹಬ್ಬ ಮತ್ತು 'ಜೇಮ್ಸ್' ಸಿನಿಮಾ ರಿಲೀಸ್ ಸಂಭ್ರಮಾಚರಣೆಗೆ ಸಜ್ಜಾಗಿದ್ದಾರೆ.

More from Filmibeat

English summary
Puneeth Rajkumar Will Appear In Shiva Rajkumar's Veda Movie,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X