ಶಿವಣ್ಣ ಆರೋಗ್ಯ ವಿಚಾರಿಸಿದ ಪುನೀತ್ ರಾಜ್ ಕುಮಾರ್

Recommended Video

ಶಿವರಾಜ್ ಕುಮಾರ್ ಆರೋಗ್ಯ ವಿಚಾರಿಸಲು ಮಲ್ಯ ಆಸ್ಪತ್ರೆಗೆ ಭೇಟಿ ಕೊಟ್ಟ ಪುನೀತ್ ರಾಜ್ ಕುಮಾರ್ | Oneindia Kannada

ತೀವ್ರ ಜ್ವರದಿಂದ ಬಳಲುತ್ತಿದ್ದ ನಟ ಶಿವರಾಜ್ ಕುಮಾರ್ ಬೆಂಗಳೂರಿನ ಮಲ್ಯ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಿನ್ನೆ ರಾತ್ರಿ ಜ್ವರ ಕಾಣಿಸಿಕೊಂಡಿದ್ದು, ಇಂದು ಬೆಳಗ್ಗೆ ಶಿವಣ್ಣ ಅವರನ್ನ ಬೆಂಗಳೂರಿನ ಮಲ್ಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸದ್ಯ, ಶಿವಣ್ಣ ಅವರ ಜ್ವರ ಕಡಿಮೆಯಾಗಿದ್ದು, ಆರೋಗ್ಯವಾಗಿದ್ದಾರೆ ಎಂಬುದು ತಿಳಿದುಬಂದಿದೆ. ಇನ್ನು ಶಿವಣ್ಣ ಅವರ ಆರೋಗ್ಯ ವಿಚಾರಿಸಲು ಸಹೋದರ ಪುನೀತ್ ರಾಜ್ ಕುಮಾರ್ ಆಸ್ಪತ್ರೆಗೆ ಭೇಟಿ ನೀಡಿದ್ದರು.

ಬಳಿಕ ಮಾಧ್ಯಮದವರ ಜೊತೆ ಮಾತನಾಡಿದ ಪುನೀತ್ ''ಶಿವಣ್ಣನಿಗೆ ಏನು ಆಗಿಲ್ಲ. ಸ್ವಲ್ಪ ಜ್ವರ ಹೆಚ್ಚಾಗಿರೋದ್ರಿಂದ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಈಗ ಜ್ವರ ಕಡಿಮೆಯಾಗಿದೆ. ಡಿಸ್ಚಾರ್ಜ್ ಬಗ್ಗೆ ಇನ್ನು ಆಸ್ಪತ್ರೆಯಲ್ಲಿ ಏನೂ ಹೇಳಿಲ್ಲ. ಸಂಜೆಯೊಳಗೆ ಡಿಸ್ಚಾರ್ಜ್ ಆಗೋ ಸಾಧ್ಯತೆಯಿದೆ'' ಎಂದರು.

Puneeth rajkumar inquired shivaraj kumar health

ಇನ್ನು ನಿರ್ದೇಶಕ ಪ್ರೇಮ್ ಕೂಡ ಆಸ್ಪತ್ರೆಗೆ ಭೇಟಿ ನೀಡಿ ಹ್ಯಾಟ್ರಿಕ್ ಹೀರೋ ಆರೋಗ್ಯ ವಿಚಾರಿಸಿದರು. ನಂತರ ಮಾತನಾಡಿದ ಅವರು 'ಶಿವಣ್ಣ ಚೆನ್ನಾಗಿದ್ದಾರೆ, ಪ್ರಮೋಷನ್ ಗೆ ಬರ್ತೀನಿ ಎಂದು ಫೋನ್ ಮಾಡಿ ಹೇಳಿದ್ರು, ಅಷ್ಟರ ಮಟ್ಟಿಗೆ ಡೆಡಿಕೇಶನ್ ಹೊಂದಿದ್ದಾರೆ. ಇಂತಹ ಮಾಸ್ಟರ್ ಪೀಸ್ ಕನ್ನಡಕ್ಕೆ ಒಬ್ಬರೇ ಶಿವಣ್ಣ. ಸಂಜೆವೊತ್ತಿಗೆ ಶಿವಣ್ಣ ಡಿಸ್ಚಾರ್ಜ್ ಆಗ್ತಾರೆ'' ಎಂದು ತಿಳಿಸಿದರು.

ಇನ್ನುಳಿದಂತೆ ಶಿವರಾಜ್ ಕುಮಾರ್ ಮತ್ತು ಸುದೀಪ್ ಅಭಿನಯದ 'ದಿ ವಿಲನ್' ಸಿನಿಮಾ ಈ ವಾರ ತೆರೆಕಾಣುತ್ತಿದೆ. ಈ ಹಿನ್ನೆಲೆಯಲ್ಲಿ ಶಿವಣ್ಣ ಸತತವಾಗಿ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದ್ದರು. ಇದರ ಜೊತೆಗೆ 'ಕವಚ' ಹಾಗೂ 'ರುಸ್ತುಂ' ಸಿನಿಮಾಗಳ ಚಿತ್ರೀಕರಣದಲ್ಲಿ ಕೂಡ ಮಾಡುತ್ತಿದ್ದಾರೆ.

More from Filmibeat

English summary
Kannada actor Puneeth rajkumar visit to mallya hospital and inquired his brother shivaraj kumar health condition.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X