'ನೀವು ನನ್ನ ಸಿನಿಮಾದಲ್ಲಿ ನಟಿಸಿ' ಎಂದು ಪುನೀತ್ ಆಫರ್ ಕೊಟ್ಟಿದ್ದು ಯಾರಿಗೆ.?

Recommended Video

Puneeth Rajkumar invites Aravind Bolar to act in his films | FILMIBEAT kannada

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಈಗ ಬರೀ ನಟ ಮಾತ್ರ ಅಲ್ಲ.. ನಿರ್ಮಾಪಕ ಕೂಡ ಹೌದು. ಪಿ.ಆರ್.ಕೆ ಪ್ರೊಡಕ್ಷನ್ಸ್ ಮೂಲಕ 'ಕವಲುದಾರಿ' ಚಿತ್ರವನ್ನ ನಿರ್ಮಾಣ ಮಾಡಿದ ಪುನೀತ್ ಸದ್ಯ 'ಮಾಯಾ ಬಜಾರ್' ಮತ್ತು 'ಲಾ' ಪ್ರಾಜೆಕ್ಟ್ ಗಳ ಮೇಲೆ ಗಮನ ಹರಿಸಿದ್ದಾರೆ.

ಪಿ.ಆರ್.ಕೆ ಪ್ರೊಡಕ್ಷನ್ಸ್ ಮೂಲಕ ಕನ್ನಡದ ಯುವ ಪ್ರತಿಭಾವಂತರಿಗೆ ಪುನೀತ್ ಮಣೆ ಹಾಕುತ್ತಿದ್ದಾರೆ. ಹೀಗಿರುವಾಗಲೇ, ''ನೀವು ನನ್ನ ಸಿನಿಮಾದಲ್ಲಿ ನಟಿಸಿ'' ಎಂದು ಪ್ರಖ್ಯಾತ ನಟರೊಬ್ಬರಿಗೆ ಪುನೀತ್ ರಾಜ್ ಕುಮಾರ್ ಆಫರ್ ಕೊಟ್ಟಿದ್ದಾರೆ. ಯಾರಪ್ಪಾ ಅದು ಅಂದ್ರೆ.. 'ತುಳುನಾಡ ಮಾಣಿಕ್ಯ' ಎಂದು ಪ್ರಖ್ಯಾತಿ ಪಡೆದಿರುವ ಅರವಿಂದ ಬೋಳಾರ್.

ಹೌದು, ತುಳು ಚಿತ್ರರಂಗದ ಬಹು ಬೇಡಿಕೆಯ ನಟ ಅರವಿಂದ ಬೋಳಾರ್ ಗೆ ''ನನ್ನ ಸಿನಿಮಾದಲ್ಲಿ ನಟಿಸಿ'' ಎಂದು ಪುನೀತ್ ರಾಜ್ ಕುಮಾರ್ ಬಹಿರಂಗ ಆಹ್ವಾನ ಕೊಟ್ಟಿದ್ದಾರೆ.

puneeth-rajkumar-invites-aravind-bolar-to-act-in-his-films

ಇತ್ತೀಚೆಗಷ್ಟೇ ನಡೆದ ಕಾರ್ಯಕ್ರಮವೊಂದರಲ್ಲಿ ಪುನೀತ್ ರಾಜ್ ಕುಮಾರ್ ಮತ್ತು ಅರವಿಂದ ಬೋಳಾರ್ ವೇದಿಕೆ ಹಂಚಿಕೊಂಡಿದ್ದರು. ಇದೇ ಸಮಯದಲ್ಲಿ ಅರವಿಂದ ಬೋಳಾರ್ ಗೆ ತಮ್ಮ ಕನ್ನಡ ಸಿನಿಮಾದಲ್ಲಿ ನಟಿಸುವಂತೆ ಪುನೀತ್ ಕೋರಿದರು. ಅಪ್ಪು ಕೋರಿಕೆಯ ಮೇರೆಗೆ 'ತುಳುನಾಡ ಮಾಣಿಕ್ಯ' ಸ್ಯಾಂಡಲ್ ವುಡ್ ಗೆ ಎಂಟ್ರಿಕೊಟ್ಟರೂ ಆಶ್ಚರ್ಯ ಇಲ್ಲ.

puneeth-rajkumar-invites-aravind-bolar-to-act-in-his-films

ಅಂದ್ಹಾಗೆ, ಅಪ್ಪು ಸದ್ಯಕ್ಕೆ 'ಯುವರತ್ನ' ಚಿತ್ರದ ಶೂಟಿಂಗ್ ನಲ್ಲಿ ಬಿಜಿಯಿದ್ದಾರೆ. ನಟನೆಯ ಜೊತೆಗೆ ನಿರ್ಮಾಣದಲ್ಲೂ ಪುನೀತ್ ರಾಜ್ ಕುಮಾರ್ ತೊಡಗಿದ್ದಾರೆ.

More from Filmibeat

English summary
Kannada Actor Puneeth Rajkumar invites Aravind Bolar to act in his films.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X