ದೊಡ್ಮೆನೆ ಸೊಸೆಗೆ ಅಪ್ಪು ಹೇಳಿದ ಕೊನೆಯ ಮಾತೇನು? ಮಿಲಿಯನ್ ಡಾಲರ್ ಆಫರ್ ಅನ್ನು ಕೈಬಿಟ್ಟಿದ್ದೇಕೆ?

By ಅನಿತಾ ಬನಾರಿ

ಇಂದು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಹುಟ್ಟುಹಬ್ಬ. ಹೌದು, ನಮ್ಮ ನೆಚ್ಚಿನ ಅಪ್ಪುವಿಗೆ ಇಂದು ಐವತ್ತನೇ ಹುಟ್ಟುಹಬ್ಬದ ಸಂಭ್ರಮ. ಪುನೀತ್ ರಾಜ್ ಕುಮಾರ್ ಅವರ ಹುಟ್ಟುಹಬ್ಬದ ಸಲುವಾಗಿ ಅವರ ನಟನೆಯ ಮೊದಲ ಚಿತ್ರ 'ಅಪ್ಪು' ಕಳೆದ ಶುಕ್ರವಾರ ರಿ-ರಿಲೀಸ್ ಆಗಿದೆ. ಬರೋಬ್ಬರಿ ಇಪ್ಪತ್ಮೂರು ವರ್ಷಗಳ ಬಳಿಕ ಮತ್ತೊಮ್ಮೆ ತಮ್ಮ ನೆಚ್ಚಿನ ನಟನ ಮೊದಲ ಸಿನಿಮಾ ನೋಡಿ ಅಭಿಮಾನಿಗಳು ಸಂಭ್ರಮಿಸಿದ್ದಾರೆ. ಅಪ್ಪು ಅಭಿನಯ ಕಂಡು ಕಣ್ತುಂಬಿಸಿಕೊಂಡಿದ್ದಾರೆ.

ಇದರ ಜೊತೆಗೆ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಒಂದು ವೈರಲ್ ಆಗಿದ್ದು ಅದು ಸಖತ್ ಸದ್ದು ಮಾಡುತ್ತಿದೆ. ಹೌದು, ರಾಘವೇಂದ್ರ ರಾಜ್‌ಕುಮಾರ್ ಸೊಸೆ, ಯುವ ರಾಜ್ ಕುಮಾರ್ ಪತ್ನಿ ಶ್ರೀದೇವಿ ಬೈರಪ್ಪ ಅವರು ಪುನೀತ್ ರಾಜ್ ಕುಮಾರ್ ಅವರ ಹುಟ್ಟುಹಬ್ಬದ ಸಲುವಾಗಿ ಪೋಸ್ಟ್ ಒಂದನ್ನು ಹಾಕಿದ್ದಾರೆ. ವಿದೇಶದಲ್ಲಿರುವ ಶ್ರೀದೇವಿ ವಿದ್ಯಾಭ್ಯಾಸದ ಜೊತೆಗೆ ಕೆಲಸವನ್ನು ಕೂಡಾ ಮಾಡುತ್ತಿದ್ದಾರೆ.

Puneeth Rajkumar is an emotion for Kannadigas says Yuva Rajkumar ex wife Sridevi Byrappa

"ಅಪ್ಪು ಕೇವಲ ಹೆಸರಲ್ಲ. ನನ್ನಂತೆ ಅದೆಷ್ಟೋ ಕನ್ನಡಿಗರಿಗೆ ಒಂದು ಎಮೋಷನ್ ಎನ್ನಬಹುದು. ಹಲವು ವರ್ಷಗಳ ನಾನು ಅಪ್ಪು ಅವರೊಂದಿಗೆ ಕಾಲ ಕಳೆದಿದ್ದೆ.
ಅವರ ಜೊತೆ ಸಮಯ ಕಳೆಯುವುದಕ್ಕೆ ನಾನು ಪುಣ್ಯವನ್ನು ಕೂಡಾ ಮಾಡಿದ್ದೆ. ಅಪ್ಪು ಅಗಲುವ ಹಿಂದಿನ ದಿನ ಮಾತನಾಡಿದ್ದು ನನಗೆ ನೆನಪಿದೆ. ಅರ್ಥವಿಲ್ಲದ ಸಿನಿಮಾಗಳು, ಪದೇ ಪದೇ ಅದೇ ಡೈಲಾಗ್ ಹಾಗೂ ಸಮಾಜವನ್ನು ನೆಗೆಟಿವ್ ಆಗಿ ಶೇಪ್ ಮಾಡುವ ಕಥೆಗಳ ಬಗ್ಗೆ ಪುನೀತ್ ರಾಜ್ ಕುಮಾರ್ ಬೇಸರವನ್ನು ವ್ಯಕ್ತಪಡಿಸಿದ್ದರು" ಎಂದು ಶ್ರೀದೇವಿ ಭೈರಪ್ಪ ತಮ್ಮ ಪೋಸ್ಟ್‌ನಲ್ಲಿ ಹಂಚಿಕೊಂಡಿದ್ದಾರೆ‌.

ಇದರ ಜೊತೆಗೆ "ಸಿನಿಮಾ ನಿರ್ದೇಶಕರು ಮತ್ತು ನಿರ್ಮಾಪಕರು ಕೇವಲ ಹಣ ಮಾಡುವುದಕ್ಕೋಸ್ಕರ ಹಾಗೂ ತಮ್ಮ ಪ್ರತಿಷ್ಠೆಗೋಸ್ಕರ ಸಿನಿಮಾ ಮಾಡುತ್ತಿರುವುದನ್ನು ಪ್ರಶ್ನೆ ಮಾಡಿದ್ದರು. ನಮ್ಮ ಸಮಾಜದ ಮೆಂಟಾಲಿಟಿಯ ಕುರಿತು ಅಪ್ಪು ಪ್ರಶ್ನೆ ಮಾಡಿದ್ದರು" ಎಂದು ಇನ್‌ಸ್ಟಾಗ್ರಾಂನಲ್ಲಿ ಶ್ರೀದೇವಿ ಭೈರಪ್ಪ ಬರೆದುಕೊಂಡಿದ್ದಾರೆ.

"ಪುನೀತ್ ರಾಜ್‌ಕುಮಾರ್ ಅವರು ಅವರದೇ ಆದ ನಿರ್ಮಾಣ ಸಂಸ್ಥೆಯನ್ನು ಹುಟ್ಟು ಹಾಕಿರುವುದಲ್ಲದೇ ಹೊಸಬರಿಗೆ ಅವಕಾಶವನ್ನು ಕೂಡಾ ನೀಡಿದ್ದರು.
ಆ ಮೂಲಕ ಅಪ್ಪು ಸಿನಿಮಾ ಮಾಡುವ ಶೈಲಿಯನ್ನು ಬದಲಾಯಿಸಿದ್ದರು. ಇದರ ಜೊತೆಗೆ ರೆಕಾರ್ಡ್ ಬ್ರೇಕ್ ಮಾಡಿದ ಸೂಪರ್ ಸ್ಟಾರ್ ಅವರು. ಕನ್ನಡ ಇಂಡಸ್ಟ್ರಿಯಲ್ಲಿ ಯಾರೂ ಬ್ರೇಕ್ ಮಾಡದ ದಾಖಲೆ ಇವರದ್ದು. ಪುನೀತ್ ರಾಜ್ ಕುಮಾರ್ ಅವರು ಅತಿಯಾಗಿ ಇಷ್ಟಪಟ್ಟು ಮಾಡಿದ್ದು ಗಂಧದಗುಡಿ ಸಿನಿಮಾ. ಈ ಡಾಕ್ಯುಮೆಂಟ್‌ನಲ್ಲಿ ತಮ್ಮ ನೆಲ ಮತ್ತು ಜನರ ಬಗ್ಗೆ ತೋರಿಸಿದ್ದಾರೆ" ಎಂದು ಶ್ರೀದೇವಿ ಭೈರಪ್ಪ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಹೇಳಿದ್ದಾರೆ.

ಕೊನೆಯದಾಗಿ "ಎಡ್‌ಟೆಕ್‌ ಕಾರ್ಪೊರೇಷನ್‌ ಆಫರ್ ಮಾಡಿದ ಮಿಲಿಯನ್ ಡಾಲರ್ ಆಫರ್ ಅನ್ನು ಒಂದು ಕ್ಷಣವೂ ಯೋಚನೆ ಮಾಡದೇ ತಿರಸ್ಕರಿಸಿದ್ದರು ಅಪ್ಪು. ಮಾತ್ರವಲ್ಲ, ವಿದ್ಯಾಭ್ಯಾಸ ಪ್ರಮೋಟ್ ಮಾಡುವುದಕ್ಕಾಗಿ ಜಾಹೀರಾತು ಚಿತ್ರೀಕರಣ ಮಾಡಿಕೊಟ್ಟರು. ಪುನೀತ್ ರಾಜ್ ಕುಮಾರ್ ಅವರಿಗೆ ಅವರು ಮಾಡುತ್ತಿದ್ದ ಕೆಲಸದ ಮೇಲೆ ತುಂಬಾ ನಂಬಿಕೆ ಇತ್ತು. ಇದರ ಜೊತೆಗೆ ಹಲವು ಬಗೆಯ ಕಥೆಗಳನ್ನು ಜನರಿಗೆ ಪರಿಚಯಿಸುವ ಸಲುವಾಗಿ ಇನ್‌ಫಿನಿಟಿ ವರ್ಲ್ಡ್‌ ಸ್ಟುಡಿಯೋವನ್ನು ಇವರು ಪ್ರತಿನಿಧಿಸಿದ್ದರು. ನಿಮ್ಮ 50ನೇ ಹುಟ್ಟುಹಬ್ಬದಂದು ನಿಮ್ಮನ್ನು ನಂಬಿದ ನನ್ನಂತಹ ಅದೆಷ್ಟೋ ಅಭಿಮಾನಿಗಳಿಗೆ ಇದು ಸ್ಫೂರ್ತಿಯ ದಿನ ಆಗಿರಲಿದೆ. ನಮ್ಮ ಹೊಸ ಪ್ರಾಜೆಕ್ಟ್‌ ಅನ್ನು ಅತೀ ಶೀಘ್ರದಲ್ಲಿ ಅನೌನ್ಸ್ ಮಾಡಲಿದ್ದೇವೆ" ಎಂದು ಇನ್ ಸ್ಟಾಗ್ರಾಂ ಪೋಸ್ಟ್‌ನಲ್ಲಿ ಶ್ರೀದೇವಿ ಭೈರಪ್ಪ ಬರೆದುಕೊಂಡಿದ್ದಾರೆ.

More from Filmibeat

English summary
Puneeth Rajkumar is an emotion for Kannadigas says Yuva Rajkumar ex wife Sridevi Byrappa
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X