twitter
    For Quick Alerts
    ALLOW NOTIFICATIONS  
    For Daily Alerts

    ಕೊರೊನಾ ತಡೆಗಟ್ಟಲು ಕಷ್ಟ ಪಡುತ್ತಿರುವ ವೈದ್ಯರಿಗೆ ಪುನೀತ್ ಸೆಲ್ಯೂಟ್

    |

    ವಿಶ್ವದಾದ್ಯಂತ ಮಾರಣಾಂತಿಕ ಕೊರೊನಾ ವೈರಸ್ ಹಾವಳಿ ಹೆಚ್ಚಾಗುತ್ತಿದೆ. ಭಾರತದಲ್ಲಿಯೂ ಕೊರೊನಾ ಭೀತಿ ಹೆಚ್ಚಾಗಿದ್ದು ಈಗಾಗಲೆ 100ಕ್ಕು ಹೆಚ್ಚು ಮಂದಿಗೆ ಕೊರೊನಾ ಸೋಂಕು ತಗುಲಿರುವ ಬಗ್ಗೆ ವರದಿಯಾಗಿದೆ. ದಿನದಿಂದ ದಿನಕ್ಕೆ ಕೊರೊನಾ ಆತಂಕ ಹೆಚ್ಚಾಗುತ್ತಿದ್ದು ಸಾವಿನ ಸಂಖ್ಯೆಯು ಹೆಚ್ಚಾಗುತ್ತಿದೆ.

    ಕೊರೊನಾ ವೈರಸ್ ನಿಂದ ಭಾರತದಲ್ಲಿ ಮೃತಪಟ್ಟರ ಸಂಖ್ಯೆ 5ಕ್ಕೆ ಏರಿದೆ. ಕೊರೊನಾ ಎನ್ನುವ ಮಾರಣಾಂತಿಕ ಕಾಯಿಲೆಗೆ ಚಿಕಿತ್ಸೆ ನೀಡುತ್ತಿರುವ ವೈದ್ಯಕೀಯ ಲೋಕಕ್ಕೆ ಜನರು ಹ್ಯಾಟ್ಸಾಫ್ ಹೇಳುತ್ತಿದ್ದಾರೆ.

    ಇದೀಗ 'ಬ್ರಾವೋಡಾಕ್ಟರ್' ಎನ್ನುವ ಹೊಸ ಅಭಿಯಾನ ಪ್ರಾರಂಭವಾಗಿದ್ದು. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಈ ಅಭಿಯಾನದಲ್ಲಿ ಭಾಗಿಯಾಗಿದ್ದಾರೆ. ಇಂತಹ ಅಪಾಯಕಾರಿ ವಾತಾವರಣದಲ್ಲೂ ಕೊರೊನಾ ವಿರುದ್ಧ ಹೋರಾಡುತ್ತಿರುವ ವೈದ್ಯಕೀಯ ಸಿಬ್ಬಂದಿಗೆ ಸೆಲ್ಯೂಟ್ ಹೇಳುವ ಚಾಲೆಂಜ್ ಇದು. ಸಾಮಾಜಿಕ ಜಾಲತಾಣದಲ್ಲಿ 'ಬ್ರಾವೋಡಾಕ್ಟರ್' ಹ್ಯಾಶ್ ಟ್ಯಾಗ್ ಬಳಸಿ ಶೇರ್ ಮಾಡುವ ಮೂಲಕ ವೈದ್ಯರಿಗೆ ಸೆಲ್ಯೂಟ್ ಹೇಳುವ ಅಭಿಯಾನವಿದು.

    Puneeth Rajkumar Is Salute To Doctors Who Fighting Coronavirus

    ಬ್ರಾವೋಡಾಕ್ಟರ್ ಅಭಿನಯಕ್ಕೆ ಕೈ ಜೋಡಿಸಿರುವ ಅಪ್ಪು ಸಾಮಾಜಿಕ ಜಾಲತಾಣದಲ್ಲಿ

    "ಬ್ರಾವೋಡಾಕ್ಟರ್ ಎನ್ನುವ ಹ್ಯಾಶ್ ಟ್ಯಾಗ್ ಬಳಸಿ ದಯವಿಟ್ಟು ಎಲ್ಲರೂ ಶೇರ್ ಮಾಡಿ, ಒಗ್ಗಟ್ಟನ್ನು ಪ್ರದರ್ಶಿಸಿ. ಕೊರೊನಾ ವಿರುದ್ಧ ಹೋರಾಡುತ್ತಿರುವ ನಮ್ಮ ವೈದ್ಯಕೀಯ ಸಿಬ್ಬಂದಿಗೆ ಎಲ್ಲರ ಬೆಂಬಲವಿರಲಿ. ಅಪಾಯಕಾರಿ ವಾತಾವರಣದಲ್ಲೂ ಮುಂದೆ ನಿಂತು ಈ ಸಾಂಕ್ರಾಮಿಕ ರೋಗವನ್ನು ತಡೆಗಟ್ಟಲು ಹೋರಾಡುತ್ತಿರುವ ಎಲ್ಲ ವೈದ್ಯರಿಗೆ ನನ್ನ ಸೆಲ್ಯೂಟ್. ದಯವಿಟ್ಟು ಹ್ಯಾಶ್ ಟ್ಯಾಗ್ ಶೇರ್ ಮಾಡಿ" ಎಂದು ಹೇಳಿದ್ದಾರೆ.

    ಈ ಹ್ಯಾಶ್ ಟ್ಯಾಗ್ ಶೇರ್ ಮಾಡಿ ಎಲ್ಲರೂ ವೈದ್ಯರಿಗೆ ಸೆಲ್ಯೂಟ್ ಮಾಡುತ್ತಿದ್ದಾರೆ. ಅಭಿಮಾನಿಗಳು ಮತ್ತು ಚಿತ್ರರಂಗದ ಸಾಕಷ್ಟು ಗಣ್ಯರು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡುವ ಮೂಲಕ ಅಭಿಯಾನದಲ್ಲಿ ಬಾಗಿಯಾಗುತ್ತಿದ್ದಾರೆ. ನಟ ಧನಂಜಯ್ ಕೂಡ ಹ್ಯಾಶ್ ಟ್ಯಾಗ್ ಶೇರ್ ಮಾಡಿ ವೈದ್ಯಕೀಯ ಸಿಬ್ಬಂದಿಗೆ ಸೆಲ್ಯೂಟ್ ಹೇಳುತ್ತಿದ್ದಾರೆ.

    English summary
    Kannada Actor Puneeth Rajkumar Joined 'Bravodoctor' Campaign. He is salute to doctors who fighting coronavirus.
    Friday, March 20, 2020, 14:19
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X