For Quick Alerts
  ALLOW NOTIFICATIONS  
  For Daily Alerts

  ಪುನೀತ್ ರಾಜ್‌ಕುಮಾರ್‌ಗೆ ಆ ಒಂದು ಮಾತು ಹೇಳಲೇ ಬೇಕಿತ್ತಂತೆ ಸಾಯಿ ಪಲ್ಲವಿ!

  |

  ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಎಂತಹ ಸರಳ ಸಜ್ಜನಿಕೆಯ ವ್ಯಕ್ತಿತ್ವ ಹೊಂದಿದವರು ಎನ್ನುವುದನ್ನು ಹಲವರು ಹೇಳುತ್ತಾರೆ. ಇನ್ನು ಪುನೀತ್ ರಾಜ್‌ಕುಮಾರ್ ಅವರನ್ನು ಹತ್ತಿರದಿಂದ ಬಲ್ಲವರು ಅಪ್ಪು ಸರಳತೆಯ ಬಗ್ಗೆ ಹಾಡಿ ಹೊಗಳುತ್ತಾರೆ.

  ನಟ ಪುನೀತ್ ರಾಜಕುಮಾರ್ ದೈಹಿಕವಾಗಿ ಅಷ್ಟೇ ಎಲ್ಲರನ್ನು ಬಿಟ್ಟು ಹೋಗಿದ್ದಾರೆ. ಆದರೆ ಅವರನ್ನು ಪ್ರೀತಿಸುವ, ಇಷ್ಟಪಡುವ ಜನರ ಮನದಲ್ಲಿ ಪುನೀತ್ ರಾಜಕುಮಾರ್ ಅಮರವಾಗಿದ್ದಾರೆ . ಈಗ ಪುನೀತ್ ರಾಜ್ ಕುಮಾರ್ ಅವರನ್ನು ನೆನಪಿಸಿಕೊಂಡು ಅವರ ಸರಳ ಸಜ್ಜನಿಕೆಯ ನಡತೆಯನ್ನು ನಟಿ ಸಾಯಿ ಪಲ್ಲವಿ ಕೊಂಡಾಡಿದ್ದಾರೆ.

  'ಗಾರ್ಗಿ'ಯನ್ನು ಪ್ರೆಸೆಂಟ್ ಮಾಡುವ ರಕ್ಷಿತ್ ಶೆಟ್ಟಿಯ ನಿರ್ಧಾರಕ್ಕೆ ಕಾರಣ ಸಾಯಿ ಪಲ್ಲವಿ ಹಾಗೂ ಆತ!'ಗಾರ್ಗಿ'ಯನ್ನು ಪ್ರೆಸೆಂಟ್ ಮಾಡುವ ರಕ್ಷಿತ್ ಶೆಟ್ಟಿಯ ನಿರ್ಧಾರಕ್ಕೆ ಕಾರಣ ಸಾಯಿ ಪಲ್ಲವಿ ಹಾಗೂ ಆತ!

  ಮಲಯಾಳಂ ನಟಿ ಸಾಯಿಪಲ್ಲವಿ ಸದ್ಯ 'ಗಾರ್ಗಿ' ಎನ್ನುವ ಸಿನಿಮಾವನ್ನು ಮಾಡುತ್ತಿದ್ದಾರೆ. ಈ ಸಿನಿಮಾ ಕನ್ನಡದಲ್ಲೂ ಕೂಡ ತೆರೆಗೆ ಬರುತ್ತಿದೆ. ಇಡೀ ಚಿತ್ರದ ಸಂದರ್ಶನದ ವೇಳೆ ಸಾಯಿ ಪಲ್ಲವಿ ಪುನೀತ್ ರಾಜ್‌ಕುಮಾರ್ ಅವರನ್ನು ಮೊದಲು ಭೇಟಿ ಮಾಡಿದ್ದರ ಬಗ್ಗೆ ಹೇಳಿಕೊಂಡಿದ್ದಾರೆ.

  ಸಾಯಿ ಪಲ್ಲವಿಯನ್ನು ಮಾತನಾಡಿಸಿದ್ದ ಅಪ್ಪು!

  ಸಾಯಿ ಪಲ್ಲವಿಯನ್ನು ಮಾತನಾಡಿಸಿದ್ದ ಅಪ್ಪು!

  ನಟಿ ಸಾಯಿ ಪಲ್ಲವಿ ಪುನೀತ್ ರಾಜ್‌ಕುಮಾರ್ ಅವರನ್ನು ನೆನಪಿಸಿಕೊಂಡು, ಅವರು ಭೇಟಿಯಾಗಿದ್ದ ಸಂದರ್ಭವನ್ನು ಹಂಚಿಕೊಂಡಿದ್ದಾರೆ. ಮಾಧ್ಯಮ ಸಂದರ್ಶನದಲ್ಲಿ ಈ ಬಗ್ಗೆ ಹೇಳಿಕೊಂಡಿದ್ದಾರೆ. "ಒಂದು ಅವಾರ್ಡ್ ಕಾರ್ಯಕ್ರಮದಲ್ಲಿ ಪುನೀತ್ ರಾಜಕುಮಾರ್ ಅವರನ್ನು ನಾನು ಭೇಟಿ ಆಗಿದ್ದೆ. ನಾನು ಆಗ 'ಪ್ರೇಮಂ' ಸಿನಿಮಾ ಮಾಡಿದ್ದೆ. ಅವಾರ್ಡ್ ಕಾರ್ಯಕ್ರಮ ಮುಗಿಸಿ ನಾನು ಹೋಗುತ್ತಿದ್ದಾಗ ಪುನೀತ್ ರಾಜ್‌ಕುಮಾರ್ ಕರೆದು ನನ್ನನ್ನು ಮಾತನಾಡಿಸಿದರು. ಈ ವಿಚಾರವನ್ನು ನಾನು ಇಲ್ಲಿ ತನಕ ಎಲ್ಲೂ ಹಂಚಿಕೊಂಡಿರಲಿಲ್ಲ." ಎಂದು ಸಾಯಿಪಲ್ಲವಿ ಹೇಳಿದ್ದಾರೆ.

  ಸಾಯಿ ಪಲ್ಲವಿ 'ಗಾರ್ಗಿ' ಸಿನಿಮಾ ಕರ್ನಾಟಕದಲ್ಲಿ ರಿಲೀಸ್ ಮಾಡೋದು ಕೆಆರ್‌ಜಿ ಸ್ಟುಡಿಯೋ!ಸಾಯಿ ಪಲ್ಲವಿ 'ಗಾರ್ಗಿ' ಸಿನಿಮಾ ಕರ್ನಾಟಕದಲ್ಲಿ ರಿಲೀಸ್ ಮಾಡೋದು ಕೆಆರ್‌ಜಿ ಸ್ಟುಡಿಯೋ!

  ಸ್ಟಾರ್ ಎನ್ನುವ ಹಮ್ಮುಇರಲಿಲ್ಲ

  ಸ್ಟಾರ್ ಎನ್ನುವ ಹಮ್ಮುಇರಲಿಲ್ಲ

  ಪುನೀತ್ ರಾಜ್‌ಕುಮಾರ್ ಬಗ್ಗೆ ಮಾತು ಮುಂದುವರೆಸಿದ ಸಾಯಿಪಲ್ಲವಿ, " ನಟ ಪುನೀತ್ ರಾಜ್‌ಕುಮಾರ್ ಅವರು ದೊಡ್ಡ ಸೂಪರ್ ಸ್ಟಾರ್. ಆದರೆ ನಾನು ಕೇವಲ ಒಂದೇ ಸಿನಿಮಾ ಮಾಡಿದ್ದೆ. 'ಪ್ರೇಮಂ' ಸಿನಿಮಾವನ್ನು ಮಾಡಿದ್ದೆ. ಒಬ್ಬ ಸೂಪರ್ ಸ್ಟಾರ್ ಆಗಿ ಅವರು ನನ್ನ ಜೊತೆ ಮಾತನಾಡಬೇಕು ಎನ್ನುವುದೇನು ಇರಲಿಲ್ಲ. ಆದರೂ ಅವರು ನನ್ನನ್ನು ಕರೆದು ಮಾತನಾಡಿಸಿದರು. ನನಗೆ ಶುಭಕೋರುವುದರ ಜೊತೆಗೆ ಸಿನಿಮಾ ಮಾಡುವ ಬಗ್ಗೆ ಕೂಡ ಮಾತನಾಡಿದ್ದರು." ಎಂದಿದ್ದಾರೆ ಸಾಯಿಪಲ್ಲವಿ.

  ಅವರು ಕೊಟ್ಟು ಸ್ಪೂರ್ತಿಯ ಬಗ್ಗೆ ಹೇಳಲಾಗಲಿಲ್ಲ!

  ಅವರು ಕೊಟ್ಟು ಸ್ಪೂರ್ತಿಯ ಬಗ್ಗೆ ಹೇಳಲಾಗಲಿಲ್ಲ!

  "ಪುನೀತ್ ರಾಜಕುಮಾರ್ ಅವರು ಇನ್ನಿಲ್ಲ ಎಂದಾಗ ಬಹಳ ಬೇಸರವಾಯಿತು. ಜೊತೆಗೆ ಅವರು ಅಂದು ನನಗೆ ಹೇಳಿದ ಮಾತುಗಳು ಕೂಡ ನೆನಪಾದವು. ಯಾರೋ ಒಬ್ಬರು ಒಳ್ಳೆಯ ಕೆಲಸವನ್ನು ಮಾಡಿದ್ದಾರೆ ಅಂದಾಗ ಅದನ್ನು ಗುರುತಿಸಿ, ಮತ್ತಷ್ಟು ಸ್ಪೂರ್ತಿ ತುಂಬುವ ಮನಸ್ಸು ಅವರಿಗಿತ್ತು. ಅಂದು ಅವರು ನನಗೆ ಕೊಟ್ಟ ಸ್ಪೂರ್ತಿ ಎಂಥದ್ದು ಎಂದು ಮತ್ತೆ ಅವರನ್ನು ಭೇಟಿ ಮಾಡಿ ಹೇಳಲು ಸಾಧ್ಯವಾಗಲಿಲ್ಲ ಎನ್ನುವ ಬೇಸರ ಇದೆ." ಎಂದು ಅಪ್ಪು ಬಗ್ಗೆ ನಟಿ ಸಾಯಿ ಪಲ್ಲವಿ ಮಾತನಾಡಿದ್ದಾರೆ.

  ಒಟಿಟಿಗೆ ಬಂತು ಸಾಯಿ ಪಲ್ಲವಿಯ 'ವಿರಾಟ ಪರ್ವಂ': ಎಲ್ಲಿ? ಯಾವಾಗ ಪ್ರದರ್ಶನ?ಒಟಿಟಿಗೆ ಬಂತು ಸಾಯಿ ಪಲ್ಲವಿಯ 'ವಿರಾಟ ಪರ್ವಂ': ಎಲ್ಲಿ? ಯಾವಾಗ ಪ್ರದರ್ಶನ?

  ಕನ್ನಡದಲ್ಲಿ ಸಾಯಿ ಪಲ್ಲವಿ ಸಿನಿಮಾ

  ಕನ್ನಡದಲ್ಲಿ ಸಾಯಿ ಪಲ್ಲವಿ ಸಿನಿಮಾ

  ನಟಿ ಸಾಯಿಪಲ್ಲವಿ ಸದ್ಯ 'ಗಾರ್ಗಿ' ಸಿನಿಮಾದ ನಿರೀಕ್ಷೆಯಲ್ಲಿದ್ದಾರೆ. 'ಗಾರ್ಗಿ' ಸಿನಿಮಾ ಮಹಿಳಾ ಪ್ರಧಾನವಾದ ಸಿನಿಮಾ. ಸಾಯಿಪಲ್ಲವಿ ಪ್ರಧಾನ ಪಾತ್ರದಲ್ಲಿ ನಟಿಸುತ್ತಿದ್ದು, ಈಗಾಗಲೇ ಚಿತ್ರದ ಝಲಕ್ ಮೂಲಕ ಗಮನ ಸೆಳೆದಿದ್ದಾರೆ. ಈ ಸಿನಿಮಾ ಇದೇ ಜುಲೈ 15ಕ್ಕೆ ತೆರೆಗೆ ಬರುತ್ತಿದೆ. ಈ ಚಿತ್ರದ ಮೂಲಕ ಸಾಯಿ ಪಲ್ಲವಿ ಎಷ್ಟರ ಮಟ್ಟಿಗೆ ಗಮನ ಸೆಳೆಯುತ್ತಾರೆ ಎನ್ನುವುದನ್ನು ನೋಡಬೇಕಿದೆ.

  English summary
  Puneeth Rajkumar Is The Only First Superstar Who Wish Sai Pallavi For Premam Movie Award, Know More,
  Tuesday, July 5, 2022, 16:02
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X