James Movie: 'KGF 2' ಮತ್ತು 'ಬೀಸ್ಟ್' ಚಿತ್ರವನ್ನು ಹಿಂದಿಕ್ಕಿದ 'ಜೇಮ್ಸ್', ಯಾವ ವಿಚಾರದಲ್ಲಿ ಗೊತ್ತಾ?

ಕನ್ನಡದ ಸಿನಿಮಾ 'ಜೇಮ್ಸ್' ಚಿತ್ರದ ಬಗ್ಗೆಯೇ ಈಗ ಎಲ್ಲೆಡೆ ಸುದ್ದಿ. ಯಾಕೆಂದರೆ ನಾಳೆ ಅಂದರೆ ಮಾರ್ಚ್ 17ಕ್ಕೆ ಸಿನಿಮಾ ರಿಲೀಸ್ ಆಗಲಿದೆ. ಹಾಗಾಗಿ ಮುಂಗಡ ಟಿಕೆಟ್ ಬುಕ್ಕಿಂಗ್‌ಗಾಗಿ ಜನ ಅದಾಗಲೇ ಮುಗಿಬಿದ್ದಿದ್ದಾರೆ. 'ಜೇಮ್ಸ್' ಸಿನಿಮಾ ಸಾಲು ಸಾಲು ದಾಖಲೆಗಳನ್ನು ಬರೆಯುತ್ತಿದೆ. 'ಜೇಮ್ಸ್' ದಾಖಲೆಗಳಿಗೆ ಮಿತಿಯೇ ಇಲ್ಲದಂತೆ ಆಗಿದೆ.

ಸಿನಿಮಾ ರಿಲೀಸ್ ಆಗುತ್ತದೆ ಎನ್ನುವ ಸುದ್ದಿ ಬಂದಾಗಿನಿಂದ ಹಿಡಿದು ಇಲ್ಲಿ ತನಕ ಸಿನಿಮಾ ನಾನಾ ದಾಖಲೆಗಳನ್ನು ಮಾಡುತ್ತಲೇ ಇದೆ. 'ಜೇಮ್ಸ್' ಸಿನಿಮಾ ಈಗಾಗಲೇ ಟಿಕೆಟ್ ಬುಕ್ಕಿಂಗ್ ವಿಚಾರದಲ್ಲಿ ಈ ಹಿಂದೆ ಯಾವ ಚಿತ್ರವೂ ಮಾಡಿರದ ದಾಖಲೆ ಮಾಡಿದೆ. ಮುಂಗಡ ಬುಕ್ಕಿಂಗ್‌ನಲ್ಲಿಯೂ ಈ ಸಿನಿಮಾ ಮುಂದಿದೆ.

ದಾಖಲೆಗಳ ಪಟ್ಟಿಯಲ್ಲಿ 'ಜೇಮ್ಸ್' ಹೊಸ ದಾಖಲೆ ಬರೆದಿದೆ. ಈ ಮೂಲಕ ಬಹುನಿರೀಕ್ಷಿತ ಎರಡು ದೊಡ್ಡ ಸಿನಿಮಾಗಳನ್ನು 'ಜೇಮ್ಸ್' ಹಿಂದಿಕ್ಕಿ ಮುಂದೆ ಸಾಗಿದೆ. ಅದು ಯಾವ ವಿಚಾರದಲ್ಲಿ ಎನ್ನುವ ಬಗ್ಗೆ ಮುಂದೆ ಓದಿ...

'ಕೆಜಿಎಫ್ 2' ಚಿತ್ರವನ್ನು ಬೀಟ್ ಮಾಡಿದ 'ಜೇಮ್ಸ್'!

'ಕೆಜಿಎಫ್ 2' ಚಿತ್ರವನ್ನು ಬೀಟ್ ಮಾಡಿದ 'ಜೇಮ್ಸ್'!

'ಜೇಮ್ಸ್' ಸಿನಿಮಾ 'ಕೆಜಿಎಫ್ 2' ಚಿತ್ರವನ್ನು ಹಿಂದಿಕ್ಕಿದೆ. ಅರೆ ಇನ್ನು 'ಜೇಮ್ಸ್', 'ಕೆಜಿಎಫ್ 2' ಎರಡೂ ಸಿನಿಮಾಗಳು ರಿಲೀಸ್ ಆಗಿಲ್ಲ. ಆದರೂ ಪೈಪೊಟಿ ಹೇಗೆ ಅನ್ನಿಸ ಬಹುದು. ಹೌದು ಈ ಎರಡೂ ಚಿತ್ರಗಳು ರೇಟಿಂಗ್‌ನಲ್ಲಿ ಪೈಪೋಟಿ ನಡೆಸಿವೆ. ಐಎಂಡಿಬಿ ರೇಟಿಂಗ್‌ನಲ್ಲಿ 'ಕೆಜಿಎಫ್ 2' ಚಿತ್ರವನ್ನು 'ಜೇಮ್ಸ್' ಹಿಂದಿಕ್ಕಿದೆ. ಚಿತ್ರದ ಜನಪ್ರಿಯತೆಯ ಮೇಲೆ ಈ ರೇಟಿಂಗ್ ನಿರ್ಧಾರ ಆಗುತ್ತದೆ. ಚಿತ್ರದ ಬಗ್ಗೆ ಸಮೀಕ್ಷೆ ನಡೆಸಿ, ರೇಟಿಂಗ್ ನೀಡಲಾಗುತ್ತದೆ. ಇಲ್ಲಿ 'ಜೇಮ್ಸ್' ಚಿತ್ರಕ್ಕಿಂತಲೂ ಕೆಜಿಎಫ್ 2 ಕೆಳಗಿದೆ. 'ಜೇಮ್ಸ್' 3ನೇ ಸ್ಥಾನದಲ್ಲಿ ಇದ್ದರೆ, 'ಕೆಜಿಎಫ್ 2' ಸಿನಿಮಾ 5ನೇ ಸ್ಥಾನದಲ್ಲಿ ಇದೆ.

'ಬೀಸ್ಟ್' ಬೀಟ್ ಮಾಡಿದ ಅಪ್ಪು ಚಿತ್ರ!

'ಬೀಸ್ಟ್' ಬೀಟ್ ಮಾಡಿದ ಅಪ್ಪು ಚಿತ್ರ!

'ಕೆಜಿಎಫ್ 2' ಮಾತ್ರವೇ ಅಲ್ಲ, ಈ ಸಿನಿಮಾ ತಮಿಳಿನ ನಿರೀಕ್ಷಿತ ಚಿತ್ರವಾದ 'ಬೀಸ್ಟ್' ಚಿತ್ರವನ್ನು ಕೂಡ ಹಿಂದಿಕ್ಕಿದೆ. ಈ ಪಟ್ಟಿಯಲ್ಲಿ 'ಬೀಸ್ಟ್' ಸಿನಿಮಾಗೆ 7ನೇ ಸ್ಥಾನ ಸಿಕ್ಕಿದೆ. 'ಜೇಮ್ಸ್' ಹೆಚ್ಚಿನ ರೇಟಿಂಗ್ ಪಡೆಯಲು ಕಾರಣ,ಈ ಚಿತ್ರಕ್ಕೆ ವಿಶ್ವಾದ್ಯಂತ ಇರುವ ಕ್ರೇಜ್. ರಿಲೀಸ್‌ಗೂ ಮೊದಲೇ ಇಷ್ಟೆಲ್ಲಾ ದಾಖಲೆ ಮಾಡುತ್ತಿರುವ 'ಜೇಮ್ಸ್' ರಿಲೀಸ್ ಬಳಿಕ ಹೇಗೆ ಅಬ್ಬರಿಸಬಹುದು ಎನ್ನುವ ಕುತೂಹಲ ಮೂಡಿದೆ.

IMDBಯಲ್ಲಿ ಯಾವ ಚಿತ್ರಕ್ಕೆ ಎಷ್ಟು ರೇಟಿಂಗ್!

IMDBಯಲ್ಲಿ ಯಾವ ಚಿತ್ರಕ್ಕೆ ಎಷ್ಟು ರೇಟಿಂಗ್!

ಇನ್ನು ಐಎಂಡಿಬಿಯ ರೇಟಿಂಗ್‌ನಲ್ಲಿ ಯಾವ ಚಿತ್ರಗಳು ಟಾಪ್‌ 10ರಲ್ಲಿ ಸ್ಥಾನ ಪಡೆದಿವೆ ಎನ್ನುವುದನ್ನು ನೋಡಿದರೆ. ಮಲಯಾಳಂನ 'ಸೆಲ್ಯೂಟ್' ಚಿತ್ರಕ್ಕೆ ಅಗ್ರಸ್ಥಾನ ಸಿಕ್ಕಿದೆ. ಎರಡನೇ ಸ್ಥಾನದಲ್ಲಿ 'RRR' ಚಿತ್ರ ಇದೆ. 'ಜೇಮ್ಸ್' ಚಿತ್ರ ಟಾಪ್‌ 3 ಚಿತ್ರವಾಗಿದೆ. ಬಾಲಿವುಡ್‌ನ 'ಬಚ್ಚನ ಪಾಂಡೆ' 4ನೇ ಸ್ಥಾನದಲ್ಲಿದೆ. ನಂಬರ್ 5ರಲ್ಲಿ 'ಕೆಜಿಎಫ್ 2' ಚಿತ್ರ ಇದೆ. ಹಾಗೆ 6 ನೇ ಸ್ಥಾನದಲ್ಲಿ 'ಡೇಂಜರಸ್', 7ನೇ ಸ್ಥಾನದಲ್ಲಿ 'ಬೀಸ್ಟ್', 8ನೇ ಸ್ಥಾನದಲ್ಲಿ 'ಮೇ ಡೇ', 9ನೇ ಸ್ಥಾನದಲ್ಲಿ 'ಹೀರೋ ಪಂತಿ' 2, 10ನೇ ಸ್ಥಾನದಲ್ಲಿ 'ಜಲ್ಸಾ' ಇದೆ.

ರೇಟಿಂಗ್ ಏನೇ ಇದ್ದರು ಸಿನಿಮಾ ನೋಡಲು ಜನ ಸಿದ್ಧ!

ರೇಟಿಂಗ್ ಏನೇ ಇದ್ದರು ಸಿನಿಮಾ ನೋಡಲು ಜನ ಸಿದ್ಧ!

ಇನ್ನು 'ಜೇಮ್ಸ್' ಚಿತ್ರದ ವಿಚಾರಕ್ಕೆ ಬರುವುದಾದರೆ, ಜನ 'ಜೇಮ್ಸ್' ಸಿನಿಮಾವನ್ನು ಟ್ರೈಲರ್ ನೋಡಿ, ಹಾಡು ಕೇಳಿ, ರೇಟಿಂಗ್ ನೋಡುವುದಿಲ್ಲ. ಬದಲಿಗೆ ಸಿನಿಮಾ ಹೇಗೆ ಇರಲಿ, ಒಮ್ಮೆ ತೆರೆಮೇಲೆ ಪುನೀತ್‌ ರಾಜ್‌ಕುಮಾರ್ ಅವರನ್ನು ನೋಡಬೇಕು ಎನ್ನುವ ಕಾರಣಕ್ಕೆ 'ಜೇಮ್ಸ್' ಸಿನಿಮಾ ನೋಡಲು ಮುಂದಾಗಿದ್ದಾರೆ. ಹಾಗಾಗಿ 'ಜೇಮ್ಸ್' ಗೆದ್ದೇ ಗೆಲ್ಲುತ್ತೆ ಎಂದು ಹೇಳಲಾಗುತ್ತಿದೆ.

More from Filmibeat

English summary
Puneeth Rajkumar James Movie In 3rd Position of IMDB's Most Anticipated Movies List, Know More,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X